Olympics: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ (Olympics) ಭಾರತದ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಂಡ ವಿಚಾರವು ಸುದ್ದಿಯಾಗಿ ದೇಶವ್ಯಾಪಿಯಾಗಿ ಎಲ್ಲೆಡೆ ಇದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಆಘಾತದ ಬೆನ್ನಲ್ಲೇ ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಂದಿದೆ. ಭಾರತದ ಮತ್ತೊಬ್ಬ ಕ್ರೀಡಾಪಟುವನ್ನು ಒಲಂಪಿಕ್ಸ್ ನಿಂದ ಹೊರಗೆ ಕಳಿಸಿರುವ ವಿಚಾರ ದೊಡ್ಡ ಆ ಘಾ ತವನ್ನು ನೀಡಿದೆ.
ಭಾರತದ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಅಂತಿಮ್ ಫಂಘಾಲ್ (Antim Phagal) ಅವರಿಗೆ ಅಶಿಸ್ತಿನ ಕಾರಣವನ್ನು ನೀಡಿ ಈಗ ಪಂದ್ಯದಿಂದ ದೂರು ಇಡಲಾಗಿದೆ. ಅಲ್ಲದೇ ಈಗಾಗಲೇ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ಅವರನ್ನು ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಅಂತಿಮ್ ಘಂಘಾಲ್ ಅವರ ಮೇಲೆ ಇಂತಹ ಕಠಿಣ ಕ್ರಮವನ್ನು ಜರುಗಿಸಲು ಕಾರಣವಾದರೂ ಏನು ಎನ್ನುವುದಾದರೆ, ಒಲಿಂಪಿಕ್ ಗೇಮ್ಸ್ ವಿಲೇಜ್ ಒಳಗೆ ಹೋಗಲು ಅಂತಿಮ್ ಪಂಘಲ್ ಅವರ ಅಧಿಕೃತ ಕಾರ್ಡ್ ಅನ್ನು ಅವರ ಸಹೋದರಿ ನಿಶಾ ಬಳಸಿಕೊಂಡಿದ್ದಾರೆ. ಇದು ಕ್ರೀಡಾಪಟುಗಳಿಗೆ ಮಾತ್ರವೇ ನೀಡುವ ಕಾರ್ಡ್ ಆಗಿದ್ದು, ಅದನ್ನು ಅನ್ಯರು ಬಳಸುವುದು ನಿಯಮ ಉಲ್ಲಂಘನೆ ಆಗುತ್ತದೆ.
ಅಂತಿಮ್ ಪಂಘಲ್ ಸಹೋದರಿ ಈಗ ಕಾರ್ಡ್ ಬಳಸಿ ಸಿಕ್ಕಿ ಬಿದ್ದಿದ್ದು ಇದರಿಂದಾಗಿ ಒಲಿಂಪಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅವರನ್ನು ಆಟದಿಂದ ಹೊರ ಹಾಕಲಾಗಿದೆ. ಅಂತಿಮ್ ಫಂಘಾಲ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದರು. ಅದಾದ ನಂತರ ಅವರು ತಮ್ಮ ತರಬೇತುದಾರ ಹಾಗೂ ಸಹೋದರಿಯೊಂದಿಗೆ ತಾವು ಉಳಿದಿದ್ದ ಹೋಟೆಲ್ ಗೆ ವಾಪಸಾಗಿದ್ದರು.
ಆದರೆ ಅಂತಿಮ್ ಪಂಘಲ್ ಗೇಮ್ಸ್ ವಿಲೇಜ್‌ನಲ್ಲಿ ತಮ್ಮ ಬ್ಯಾಗ್ ಬಿಟ್ಟಿದ್ದ ಕಾರಣ ಅದನ್ನು ತರಲು ತಮ್ಮ ಸಹೋದರಿಗೆ ತಮ್ಮ ಅಧಿಕೃತ ಕಾರ್ಡ್ ನೀಡಿದ್ದಾಗಿ ಹೇಳಿದ್ದಾರೆ. ಆದರೆ ಇದೀಗ ಇದು ಒಲಿಂಪಿಕ್ ನಿಯಮದ ಉಲ್ಲಂಘನೆ ಎನ್ನುವ ಕಾರಣಕ್ಕೆ ಅವರನ್ನು ಗಡಿಪಾರು ಮಾಡಿರುವುದಾಗಿ ಪ್ಯಾರಿಸ್ ಒಲಂಪಿಕ್ಸ್ ಅಸೋಸಿಯೇಷನ್ ಹೇಳಿದೆ.
Bigg Boss: ನಾನು ಇನ್ಮುಂದೆ ಬಿಗ್ ಬಾಸ್ ನಿರೂಪಣೆ ಮಾಡಲ್ಲ; ಸ್ಟಾರ್ ನಟನ ದೃಢ ನಿರ್ಧಾರಕ್ಕೆ ಫ್ಯಾನ್ಸ್ ಶಾಕ್