Tollywood Actress: ಗ್ಲಾಮರ್ ಗೊಂಬೆ ಅನಸೂಯ ಮುಖಕ್ಕೆ ಇದೇನಾಯ್ತು? ನಟಿಗೆ ಹಿಗ್ಗಾಮುಗ್ಗಾ ಬಾರಿಸಿದ್ದು ಯಾರು?

Written by Soma Shekar

Published on:

---Join Our Channel---

Tollywood Actress: ಸ್ಟಾರ್ ಆ್ಯಂಕರ್ ಮತ್ತು ತೆಲುಗಿನ ಜನಪ್ರಿಯ ನಟಿ ಅನಸೂಯಾ (Anasuya) ಗಂಭೀರವಾಗಿ ಗಾಯಗೊಂಡಿರುವ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ನಟಿಯ ಮುಖದ ಮೇಲೆ ತೀವ್ರವಾದ ಗಾಯಗಳು ಇರುವುದು ಕಂಡಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮತ್ತು ಅಭಿಮಾನಿಗಳು ಇದೇನಾಯ್ತು ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.‌

ರಂಗಸ್ಥಲಂ ಮತ್ತು ಪುಷ್ಪ ಸಿನಿಮಾಗಳ ನಂತರ ಅನಸೂಯ ಅವರ ಸ್ಟಾರ್ ಡಂ ಮತ್ತು ಜನಪ್ರಿಯತೆ ಎರಡೂ ಹೆಚ್ಚಾಗಿದೆ. ಪ್ರಸ್ತುತ ನಟಿಯು (Tollywood Actress) ಚಿತ್ರ ಸಿಂಬಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರವನ್ನು ಈಗ ನಟಿ ಬಹಳ ಡಿಫರೆಂಟ್ ಆಗಿ ಮಾಡೋದಕ್ಕೆ ಮುಂದಾಗಿದ್ದಾರೆ.

ಹೌದು, ಅನಸೂಯ ಅವರು ಸಿಂಬಾ ಸಿನಿಮಾ ಸ್ಟಿಲ್ಸ್ ಗಳನ್ನ ಶೇರ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.‌ ಈ ಸಿನಿಮಾದಲ್ಲಿ ಜಗಪತಿ ಬಾಬು, ಕಸ್ತೂರಿ, ದೇವಿ, ಶ್ರೀನಾಥ್ ಮತ್ತು ಕಬೀರ್ ಸಿಂಗ್ ಸೇರಿದಂತೆ ಹಲವು ಸ್ಟಾರ್‌ ನಟ ನಟಿಯರು ಕಾಣಿಸಿಕೊಂಡಿದ್ದು, ಚಿತ್ರವನ್ನು ಸಂಪತ್ ನಂದಿ ಮತ್ತು ರಾಜೇಂದರ್ ಜಂಟಿಯಾಗಿ ನಿರ್ಮಿಸಿದ್ದಾರೆ.  

ಕಿರುತೆರೆಯಲ್ಲಿ ನಿರೂಪಕಿಯಾಗಿ ದೊಡ್ಡ ಹೆಸರನ್ನು ಮಾಡಿರುವ ಅನಸೂಯ ತಾವು ಹಾಕುವ ಬೋಲ್ಡ್ ಡ್ರೆಸ್ ಗಳಿಂದ ಹಾಗೂ ಆಡುವ ಬೋಲ್ಡ್ ಮಾತುಗಳಿಂದಲೇ ಆಗಾಗ ಟ್ರೋಲ್ ಆಗುತ್ತಾರೆ ಮತ್ತು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗುತ್ತಾರೆ.‌ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ನಟಿ ಬ್ಯುಸಿಯಾಗಿದ್ದಾರೆ.

Actor Nagarjuna: ಭಾವೀ ಸೊಸೆಯನ್ನು ಹಾಡಿ ಹೊಗಳಿದ ನಾಗಾರ್ಜುನ: ಸಮಂತಾ ನೆನಪಿಲ್ವಾ ಅಂದ ನೆಟ್ಟಿಗರು

Leave a Comment