Amruthadhaare serial: ಪಾರ್ಥನ ಜೊತೆ ಅಪ್ಪಿ ಪ್ರೇಮದಾಟ, ದಿಯಾ ಜೊತೆ ಜೈದೇವ್ ಕಳ್ಳಾಟ; ಟ್ವಿಸ್ಟ್ ಸೂಪರ್ ಅಂದ ನೆಟ್ಟಿಗರು

Written by Soma Shekar

Published on:

---Join Our Channel---

Amruthadhaare Serial: ಕಿರುತೆರೆಯ ಜನಪ್ರಿಯ ಸೀರಿಯಲ್ ಅಮೃತಧಾರೆ ಸೀರಿಯಲ್ ನಲ್ಲಿ (Amruthadhaare Serial) ಕಥೆಯಲ್ಲಿ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡ್ತಿದೆ. ಅಕ್ಕನ ಮುದ್ದಿನ ತಂಗಿಯಾಗಿದ್ದ ಅಪೇಕ್ಷಾ ಶಕುಂತಲಾ ಮಾತಿನ ಮೋಡಿಯಲ್ಲಿ ಕಳೆದು ಹೋಗಿ ತಾನು ಕೂಡಾ ವಿಲನ್ ಆಗಿದ್ದಾಳೆ. ಇನ್ನೊಂದು ಕಡೆ ಜೈದೇವ್ ಗೌತಮ್ ಎಷ್ಟೇ ಬುದ್ಧಿ ಉಪಯೋಗಿಸಿದರೂ ತನ್ನ ಕಳ್ಳಾಟ ಮುಂದುವರೆಸಿದ್ದಾರೆ.

ಅಪೇಕ್ಷಾ (Apeksha) ಗಂಡ ಪಾರ್ಥನ (Partha) ಮನಸ್ಸಲ್ಲಿ ಅತ್ತಿಗೆ ಭೂಮಿಕಾ ಮೇಲೆ ಇರೋ ಗೌರವ, ಪ್ರೀತಿಯನ್ನು ಹೇಗಾದ್ರು ಮಾಡಿ ಕಡಿಮೆ ಮಾಡಬೇಕು ಅನ್ನೋ ಪ್ರಯತ್ನ ಮಾಡೋಕೆ‌ ಮುಂದಾಗಿದ್ದಾಳೆ. ಇದು ಪ್ರೇಕ್ಷಕರಿಗೆ ಈ ಜೋಡಿನ ನೋಡೋಕೆ ಬೇಜಾರು ಆಗೋ ತರ ಮಾಡಿದೆ. ಈಗ ಪಾರ್ಥನ್ನ ಪ್ರೀತಿಯಿಂದ ಒಲಿಸಿಕೊಳ್ಳೋ ಪ್ಲಾನ್ ಮಾಡಿದ್ದಾಳೆ ಅಪೇಕ್ಷಾ.

ಇನ್ನೊಂದು ಕಡೆ ಮನೆಯಲ್ಲೇ ಇದ್ದು ಮಲ್ಲಿನ ನೋಡ್ಕೋಬೇಕು ಅಂತ ಜೈದೇವ್ ಗೆ (Jaidev) ಹೇಳಿದ್ರೆ ಅವನು ಹೆಂಡ್ತಿನ ಹೊರಗಡೆ ಕರ್ಕೊಂಡು ಹೋಗ್ತೀನಿ ಅಂತ ಹೇಳಿ ಲಾಂಗ್ ಡ್ರೈವ್ ಅಂತ ಹೊರಗೆ ಬಂದು ದಿಯಾಗೆ ಮೆಸೆಜ್ ಮಾಡಿ ಕರೆಸಿಕೊಂಡಿದ್ದಾನೆ. ನಂತರ ಕಾರಲ್ಲಿ ಅವಳನ್ನ ಒಬ್ಬಳನ್ನೇ ಬಿಟ್ಟು, ಇನ್ನೊಂದು ಕಾರಲ್ಲಿ ದಿಯಾ ಜೊತೆ ರೊಮ್ಯಾನ್ಸ್ ನಲ್ಲಿ ಮುಳುಗಿದ್ದಾನೆ.

ಜೈದೇವ್ ಗೆ ಸದ್ಯಕ್ಕಂತೂ ಬುದ್ಧಿ ಬರಲ್ಲ ಅನ್ನೋದು ಪಕ್ಕಾ.. ಇನ್ನೂ ಮುಗ್ಧ ಮಲ್ಲಿ ಗಂಡನ ಕಳ್ಳಾಟವನ್ನು ಪತ್ತೆ ಹಚ್ತಾಳಾ, ಅಪ್ಪಿ ಪಾರ್ಥನ್ನ ಒಲಿಸಿಕೊಂಡು ತನ್ನ ಅಕ್ಕನ ವಿರುದ್ಧ ಮಸಲತ್ತು ಮಾಡೋದ್ರಲ್ಲಿ ಸಕ್ಸಸ್ ಆಗ್ತಾಳಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಈ ಟ್ವಿಸ್ಟ್ ಗಳು ಸೀರಿಯಲ್ ಟಿಆರ್‌ಪಿ ನ ಮೇಲೆ ಎತ್ತುತ್ತಾ ಅನ್ನೋದನ್ನ ಸಹಾ ಕಾದು ನೋಡಬೇಕಾಗಿದೆ.

Janhvi Kapoor: ಮೊದಲ ಸೌತ್ ಸಿನಿಮಾಕ್ಕೆ ಭಾರೀ ಸಂಭಾವನೆ ಪಡೆದು ಸ್ಟಾರ್ ನಟಿಯರಿಗೆ ಉರಿಸಿದ ಜಾನ್ವಿ ಕಪೂರ್

Leave a Comment