Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ. ಅದರ ಪರಿಣಾಮವಾಗಿ ಅಮೃತಧಾರೆ ಸೀರಿಯಲ್ ಟಿ ಆರ್ ಪಿ ಕೂಡಾ ಹೆಚ್ಚಿದ್ದು ಈ ವಾರ ಎರಡನೇ ಸ್ಥಾನಕ್ಕೆ ಬಂದಿದೆ ಅಮೃತಧಾರೆ. ಮಲ್ಲಿ ಸೀಮಂತದ ಎಪಿಸೋಡ್ ಗಳು ಪ್ರಸಾರ ಆಗ್ತಿದ್ದು ಇಲ್ಲಿ ಗೌತಮ್ ಪತ್ನಿ ಪರವಾಗಿ ನಿಂತಿದ್ದು ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಇದೇ ವೇಳೆ ಜೈದೇವ್ ನಿಂದ (Jaidev) ಮಲ್ಲಿಗೆ ಯಾವುದೇ ತೊಂದರೆ ಆಗಬಾರದು ಅಂತ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸ್ತಿದ್ದ ಭೂಮಿಕಾ ಮಲ್ಲಿಗೆ ದಿಯಾ ವಿಚಾರವಾಗಿ ಪರೋಕ್ಷವಾಗಿ ಎಚ್ಚರಿಕೆ ಹೇಳೋಕೆ ಹೋದಾಗ ಮಲ್ಲಿ ಭೂಮಿಕಾ ಮೇಲೆ ಸಿಟ್ಟಾಗಿ ಬಾಯಿಗೆ ಬಂದ ಹಾಗೆ ಮಾತಾಡಿ ಜೈದೇವ್ ಪರ ವಕಾಲತ್ತು ವಹಿಸಿದ್ದಾಳೆ.
ಇದನ್ನ ನೋಡಿ ಜೈದೇವ್ ಖುಷಿಯಾಗಿದ್ದಾನೆ. ಆದ್ರೆ ಮಲ್ಲಿನ (Malli) ಊರಿಗೆ ಕರ್ಕೊಂಡು ಹೋಗ್ತಾ ದಾರಿಯಲ್ಲಿ ಕಾರು ನಿಲ್ಲಿಸಿ, ಮತ್ತೊಂದು ಕಾರಲ್ಲಿ ದಿಯಾ ಜೊತೆ ಚಕ್ಕಂದ ಆಡೋವಾಗಲೇ ಅದನ್ನ ಮಲ್ಲಿ ನೋಡಿದ್ದಾಳೆ. ಜೈದೇವ್ ನ ಅಸಲಿ ಮುಖದ ದರ್ಶನ ಅವಳಿಗೆ ಆಗಿದೆ.
ಆದ್ರೆ ಪ್ರೊಮೋ ನೋಡಿದ ಪ್ರೇಕ್ಷಕರು ಮಾತ್ರ ಮಲ್ಲಿಯನ್ನು ಟೀಕೆ ಮಾಡಿದ್ದಾರೆ. ಮಲ್ಲಿಗೆ ಇದು ಆಗಬೇಕಿತ್ತು. ಭೂಮಿಕಾ ಗಿಣಿಗೆ ಹೇಳಿದ ಹಾಗೆ ಹೇಳಿದ್ರು ಇವಳು ನಂಬಲಿಲ್ಲ. ಅದಕ್ಕೆ ಈಗ ತಕ್ಕ ಶಾಸ್ತಿ ಆಗಿದೆ, ಆಡಿದ ಮಾತಿಗೆ ಸರಿಯಾಗೇ ಶಿಕ್ಷೆ ಆಗಿದೆ ಅಂತೆಲ್ಲಾ ಕಾಮೆಂಟ್ ಮಾಡ್ತಾ ಇದ್ದಾರೆ.
ಇನ್ನಾದ್ರು ಮಲ್ಲಿ ಭೂಮಿಕಾ ಹತ್ರ ಕ್ಷಮೆ ಕೇಳ್ತಾಳಾ? ಸತ್ಯ ಗೊತ್ತಾದ ಮಲ್ಲಿಯನ್ನ ಜೈದೇವ್ ಸುಮ್ಮನೆ ಬಿಡ್ತಾನಾ? ಮಲ್ಲಿಗೆ ಮತ್ತೆ ಏನಾದ್ರು ಅಪಾಯ ಮಾಡಿ ಬೊಡ್ತಾನಾ? ಅನ್ನೋದು ಈಗ ಕುತೂಹಲವನ್ನು ಕೆರಳಿಸಿದ್ದು, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.