Amruthadhaare : ಕಿರುತೆರೆಯ ಜನಪ್ರಿಯ ಹಾಗೂ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದಿರುವ ಸೀರಿಯಲ್ ಅಮೃತಧಾರೆ (Amruthadhaare) ಈಗಾಗಲೇ ಅಪಾರ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಸೀರಿಯಲ್ ಆಗಿದೆ. ಹೊಸ ಹೊಸ ಟ್ವಿಸ್ಟ್ ಗಳು ಮತ್ತು ಕಥೆಯ ವೇಗ ಪ್ರೇಕ್ಷಕರ ವಿಶೇಷ ಗಮನ ಸೆಳೆದಿದೆ. ಈಗ ಕಥೆಯಲ್ಲಿನ ಹೊಸ ಟ್ವಿಸ್ಟ್ ನಲ್ಲಿ ನಾಯಕ ಗೌತಮ್ ತಾಯಿ ಹಾಗೂ ತಂಗಿಯನ್ನು ಭೇಟಿ ಮಾಡೋ ಸಮಯ ಸನ್ನಿಹಿತವಾಗಿದೆ. ಅದರ ನಡುವೆಯೇ ಭೂಮಿಕಾ ತನ್ನ ತಂಗಿ ಅಪ್ಪಿಯ ಕಪಾಳಕ್ಕೆ ಬಾರಿಸಿದ್ದಾಳೆ.
ಅಪ್ಪಿ (Apeksha) ಶಾಪಿಂಗ್ ಮಾಡ್ಕೊಂಡು ಮನೆಗೆ ಬಂದಿದ್ದಾಳೆ. ಈ ವೇಳೆ ಶಕುಂತಲಾ ಅವರ ಅಣ್ಣ ತವರು ಮನೇಲಿ ಇದ್ದಾಗ್ಲೂ ಹೀಗೆ ಶಾಪಿಂಗ್ ಮಾಡ್ತಾ ಇದ್ದ ಅಂದಾಗ ಅಪ್ಪಿ ತನ್ನ ಅಪ್ಪನ ಬಗ್ಗೆ ಕೇವಲವಾಗಿ ಮಾತನಾಡಿದ್ದಾಳೆ. ನಮ್ಮ ಅಪ್ಪಂದು ಮಿಡಲ್ ಕ್ಲಾಸ್ ಮೆಂಟಾಲಿಟಿ, ಒಂದೊಂದು ರೂಪಾಯಿ ಖರ್ಚು ಮಾಡೋದು ಅವ್ರು ಯೋಚನೆ ಮಾಡ್ತಾ ಇದ್ರು.
ಅವರು ಬೋರಿಂಗ್ ಕ್ಯಾರೆಕ್ಟರ್ ಎಂದಿದ್ದು ಮಾತ್ರವೇ ಅಲ್ಲದೇ ಭೂಮಿಕಾ (Bhumika) ಹತ್ರ ಅಪ್ಪ ಯಾವತ್ತಾದ್ರು ನಮ್ಮ ಕೈಗೆ ದುಡ್ಡು ಕೊಟ್ಟು ಖುಷಿಯಾಗಿರಿ ಅಂತ ಹೇಳಿದ್ದಾರಾ? ಇಲ್ಲ, ಅಂತ ಜಿಪುಣ ನಮ್ಮಪ್ಪ ಎಂದು ನಾಲಗೆ ಹರಿಬಿಟ್ಟಿದ್ದಾಳೆ. ಅಪ್ಪನ ಬಗ್ಗೆ ಬಾಯಿಗೆ ಬಂದ ಹಾಗೆ ಅಪ್ಪಿ ಮಾತಾಡಿದ್ದು ನೋಡಿ ಭೂಮಿಕಾ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾಳೆ.
ಅಪ್ಪನ ಬಗ್ಗೆ ಹೀಗೆ ಕೆಟ್ಟದಾಗಿ ಮಾತನಾಡಿದ್ರಿಂದ ಅಪ್ಪಿ ಮೇಲೆ ಕೋಪಗೊಂಡ ಭೂಮಿಕಾ ಅಪ್ಪಿಯ ಕೆನ್ನೆಗೆ ಬಾರಿಸಿದ್ದಾಳೆ. ಪ್ರೊಮೊ ನೋಡಿದ ನೆಟ್ಟಿಗರು ಭೂಮಿಕಾ ಮಾಡಿದ ಕೆಲಸಕ್ಕೆ ಮೆಚ್ಚಿದ್ದಾರೆ. ಇನ್ನೆರಡು ಕೊಡು ಅಂತ ಸಹಾ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅಕ್ಕನಿಂದ ಏಟು ತಿಂದ ಅಪ್ಪಿ ಮತ್ತೇನು ಕಿತಾಪತಿ ಮಾಡ್ತಾಳೆ ಅನ್ನೋದನ್ನ ನೋಡಬೇಕಾಗಿದೆ.
BBK 11 : ಈ ಮನೇಲಿ ಹೂಸು ಬಿಡೋದು ತಪ್ಪಾ? ಶುಚಿತ್ವ ಇಲ್ಲ ಎಂದವರಿಗೆ ಹನುಮಂತನ ಪ್ರಶ್ನೆ