Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನ ಕಥೆಯಲ್ಲಿನ ಹೊಸ ಟ್ವಿಸ್ಟ್ ವೀಕ್ಷಕರ ಕುತೂಹಲವನ್ನು ಕೆರಳಿಸಿದೆ. ನಾಯಕ ಗೌತಮ್ ದೀವಾನ್ ನ (Goutham Diwan) ತಾಯಿ ಮತ್ತು ತಂಗಿ ಬದುಕಿದ್ದಾರೆ ಎನ್ನುವ ಸತ್ಯ ಗೌತಮ್ ಗೆ ತಿಳಿದಾಗಿದೆ. ಅಲ್ಲದೇ ಗೌತಮ್ ನೇಮಕ ಮಾಡಿದ ಡಿಟೆಕ್ಟವ್ ಕೂಡಾ ಈ ವಿಷಯವನ್ನು ಕನ್ಫರ್ಮ್ ಮಾಡಿದ್ದು ಮಾತ್ರ ಅಲ್ಲ ಅವರು ಬೆಂಗಳೂರಿನಲ್ಲೇ ಇದ್ದಾರೆ ಅನ್ನೋ ಮಾತನ್ನ ಹೇಳಿ, ಬೇಗ ಅವರನ್ನ ಪತ್ತೆ ಹಚ್ಚುವ ಭರವಸೆಯನ್ನ ನೀಡಿದ್ದಾರೆ. ಗೌತಮ್ ಗೆ ಈ ಮಾತು ಖುಷಿಯನ್ನ ನೀಡಿದೆ.
ಆದರೆ ಇನ್ನೊಂದು ಕಡೆ ಇದೇ ವಿಚಾರ ಶಕುಂತಲಾ ದೇವಿ (Shakuntala) ಮತ್ತು ಅವರಣ್ಣನಿಗೆ ಟೆನ್ಷನ್ ವಿಚಾರವಾಗಿ ಬದಲಾಗಿದೆ. ಗೌತಮ್ ಡಿಟೆಕ್ಟಿವ್ ಜೊತೆ ಮಾತನಾಡುವಾಗ ಅದನ್ನು ಯಾರೋ ವೀಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ಅಮ್ಮ ಮತ್ತು ಮಾವ ಸಮಸ್ಯೆಯಲ್ಲಿ ಇರೋದನ್ನ ನೋಡಿದ ಜೈದೇವ್ ವಿಷಯ ಏನಂತ ತಿಳ್ಕೊಂಡಿದ್ದಾನೆ. ಈಗ ಅವನೂ ಕೂಡಾ ಶಕುಂತಲಾ ದೇವಿ ಜೊತೆಗೆ ಕೈಜೋಡಿಸಿದ್ದಾನೆ.
ಇನ್ನು ಮೂವರು ಕುತಂತ್ರಿಗಳು ಸೇರಿ ಏನ್ಮಾಡ್ತರೆ ಅನ್ನೋ ಕುತೂಹಲ ಒಂದು ಕಡೆ ಆದ್ರೆ ಇನ್ನೊಂದು ಕಡೆ ತನ್ನ ಮನೆಯಲ್ಲೇ ಕೆಲಸ ಮಾಡ್ಕೊಂಡಿರೋ ಸುಧಾಗೆ ನಿಜ ಯಾವಾಗ ಗೊತ್ತಾಗುತ್ತೆ ಅನ್ನೋದು ಇನ್ನಷ್ಟು ರೋಚಕತೆಯನ್ನ ಕೆರಳಿಸಿದೆ. ಜೈದೇವ್ ಕೂಡಾ ತನ್ನ ತಾಯಿಗೆ ಮಾತು ಕೊಟ್ಟಿದ್ದಾನೆ. ಇವೆಲ್ಲವುಗಳ ನಡುವೆ ಕೆಲವೊಂದಿಷ್ಟು ಜನ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ ಸಹಾ ಮಾಡಿದ್ದಾರೆ.
ಸೀರಿಯಲ್ ಗಳಲ್ಲಿ ಹೀರೊ ಗಿಂತ ವಿಲನ್ ಗಳೇ ಬುದ್ಧಿವಂತರು. ಹೀರೋ ಏನೇ ಮಾಡೋಕೆ ಹೋದರೂ ಅದೆಲ್ಲಾ ವಿಲನ್ ಗಳಿಗೆ ಮೊದಲೇ ಗೊತ್ತಾಗುತ್ತೆ ಎಂದಿದ್ದಾರೆ. ಅಲ್ಲದೇ ವಿಲನ್ ಗೆ ಕಾಣಿಸಿದ ಭಾಗ್ಯ ಗೌತಮ್ ಗೆ ಕಾಣದೇ ಇದ್ದದ್ಸು ಎಂತಹ ವಿಪರ್ಯಾಸ ಅಂತ ಬೇಸರವನ್ನು ಸಹಾ ವ್ಯಕ್ತಪಡಿಸಿದ್ದಾರೆ. ಸೀರಿಯಲ್ ನಲ್ಲಿ ಮುಂದಿನ ಎಪಿಸೋಡ್ ಗಳು ಹೇಗಿರುತ್ತೆ ಅಂತ ನೋಡೋಕೆ ಪ್ರೇಕ್ಷಕರು ಕಾಯ್ತಿದ್ದಾರೆ.