Aishwarya Rai : ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಸ್ಟಾರ್ ಜೋಡಿ ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan). ಆದರೆ ಈ ಜೋಡಿ ನಡುವೆ ವೈಮನಸ್ಸು ಉಂಟಾಗಿದೆ, ವಿಚ್ಚೇದನ ಪಡೆಯುತ್ತಾರೆ ಎಂಬುದಾಗಿ ಕಳೆದ ಕೆಲವು ತಿಂಗಳುಗಳಿಂದಲೂ ಸುದ್ದಿಯಾಗುತ್ತಲೇ ಇದೆ. ಅಲ್ಲದೇ ಐಶ್ವರ್ಯ ತಮ್ಮ ಮಗಳ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಬಚ್ಚನ್ ಮನೆಯಲ್ಲಿ ಇಲ್ಲ ಎನ್ನುವುದು ಸಹಾ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.
ಇದು ಮಾತ್ರವೇ ಅಲ್ಲದೇ ಅನಂತ್ ಅಂಬಾನಿ ಮದುವೆಯಲ್ಲಿ (Anant Ambani) ಸಹಾ ಐಶ್ವರ್ಯ ರೈ ಬಚ್ಚನ್ ಫ್ಯಾಮಿಲಿ ಜೊತೆಗಲ್ಲ ತಾವೇ ಪ್ರತ್ಯೇಕವಾಗಿ ಆಗಮಿಸಿದ್ದರು. ಅಲ್ಲದೇ ವಿಚ್ಚೇದನದ ಕುರಿತಾಗಿ ಅಭಿಷೇಕ್ ಬಚ್ಚನ್ ಶೇರ್ ಮಾಡಿದ್ದ ಒಂದು ಪೋಸ್ಟ್ ಸಹಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಅಭಿಷೇಕ್ ಬಚ್ಚನ್ ಬೇರೊಬ್ಬ ನಟಿಯ ಜೊತೆಗೆ ಅಫೇರ್ ಹೊಂದಿದ್ದಾರೆನ್ನುವ ಸುದ್ದಿಗಳು ಹರಡಿದೆ.
ಈಗ ಇವೆಲ್ಲವುಗಳ ನಡುವೆಯೇ ಬಚ್ಚನ್ ಕುಟುಂಬ ಮತ್ತು ಐಶ್ವರ್ಯ ರೈ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಪುಷ್ಟಿ ನೀಡುವ ಮತ್ತೊಂದು ಘಟನೆ ನಡೆದಿದೆ. ಹೌದು, ನಟಿ ಐಶ್ವರ್ಯ ರೈ ಅವರ ಜನ್ಮದಿನದಂದು ಬಚ್ಚನ್ ಕುಟುಂಬದ ಯಾರೊಬ್ಬರೂ ನಟಿಗೆ ಶುಭಾಶಯವನ್ನು ತಿಳಿಸಿಲ್ಲ. ಪತಿ ಅಭಿಷೇಕ್ ಬಚ್ಚನ್ ಕೂಡಾ ಒಂದೇ ಒಂದು ಪೋಸ್ಟ್ ಸಹಾ ಹಾಕಿಲ್ಲ.
ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದರು. ಆದರೆ ಬಚ್ಚನ್ ಫ್ಯಾಮಿಲಿ ಐಶ್ವರ್ಯಗೆ ವಿಶ್ ಮಾಡಲೇ ಇಲ್ಲ. ಇದನ್ನ ನೋಡಿದ ಮೇಲೆ ಈಗ ಮತ್ತೊಮ್ಮೆ ಬಚ್ಚನ್ ಕುಟುಂಬದ ವೈಮನಸ್ಸು ಬೀದಿಗೆ ಬಂದಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿಚ್ಚೇದನ ಆಗುತ್ತೆ ಎನ್ನುವ ಸುದ್ದಿಗಳಿಗೆ ಈಗ ಇನ್ನಷ್ಟು ರೆಕ್ಕೆ ಪುಕ್ಕ ಸಿಕ್ಕಂತೆ ಆಗಿದೆ.
Bigg Boss ನಲ್ಲಿ ನನ್ನಷ್ಟು ದುರಾದೃಷ್ಟವಂತರಿಲ್ಲ, ನೋವು ಹೊರ ಹಾಕಿದ ಚೈತ್ರಾ ಕುಂದಾಪುರ ಕೊಟ್ರು ಕಾರಣ