Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ ಪ್ರಮುಖ ಆಕರ್ಷಣೆಯೇ ಇದರಲ್ಲಿ ಭಾಗವಹಿಸುವ ಸುಂದರಿಯರ ಡ್ರೆಸ್ ಗಳಾಗಿರುತ್ತೆ. ಕಾನ್ ಉತ್ಸವದಲ್ಲಿ ಭಾರತೀಯ ಸಿನಿಮಾ ನಟಿಯರು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಬೆಡಗಿಯರು ಭರ್ಜರಿ ಸದ್ದು ಮತ್ತು ಸುದ್ದಿ ಮಾಡ್ತಾರೆ. ಈಗಾಗಲೇ ಕಾನ್ ಉತ್ಸವದಲ್ಲಿನ ಐಶ್ವರ್ಯ ರೈ (Aishwarya Rai), ಕಿಯಾರಾ ಅಡ್ವಾಣಿ (Kiara Advani) ಲುಕ್ ವೈರಲ್ ಆಗಿದೆ.
ಈಗ ಮತ್ತೊಬ್ಬ ನಟಿಯ ಹಾಟ್ ಮತ್ತು ಬೋಲ್ಡ್ ಲುಕ್ ಅಭಿಮಾನಿಗಳ ಮನಸ್ಸಿಗೆ ಕಿಚ್ಚನ್ನ ಹೊತ್ತಿಸಿದೆ. ಹೌದು, ಸೌತ್ ಬೆಡಗಿ ಶೋಭಿತಾ ಧೂಲಿಪಾಲ (Shobhita Dhulipala) ಅವರ ಸ್ಟನ್ನಿಂಗ್ ಲುಕ್ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶೋಭಿತಾ ಕಾನ್ ಉತ್ಸವದಲ್ಲಿ ಮಿಂಚಲು ಬಂಗಾರದ ಬಣ್ಣದ ಬಾಡಿಕಾನ್ ಫುಲ್ ಸ್ಲೀವ್ ನ ಡಿಸೈನರ್ ಡ್ರೆಸ್ ಅನ್ನು ಧರಿಸಿದ್ದಾರೆ. ಅದಕ್ಕೆ ತಕ್ಕಂತಹ ಆಭರಣಗಳನ್ನು ತೊಟ್ಟು ಇನ್ನಷ್ಟು ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.
ಶೋಭಿತಾ ಅವರ ಈ ಹೊಸ ಲುಕ್ ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ.
ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕಾನ್ ಮ್ಯಾಗ್ನಮ್ ಹೌಸ್ ನಲ್ಲಿ ಗಿಲ್ಡೆಡ್ ಡ್ರ್ಯಾಗನ್ ರೀತಿಯಲ್ಲಿ ಹೆಜ್ಜೆಗಳನ್ನು ಹಾಕಿದೆ ಎಂದು ನಟಿ ಬರೆದುಕೊಂಡಿದ್ದು, ನಟಿಯ ಪೋಸ್ಟ್ ಈಗ ವೈರಲ್ ಆಗುತ್ತಾ ಸಾಗಿದೆ.
ನಟಿಯ ಪೋಟೋಗಳಿಗೆ ಕಾಮೆಂಟ್ ಗಳನ್ನು ಮಾಡಿದ ಅಭಿಮಾನಿಗಳು, ನಿಮ್ಮ ಅಂದವನ್ನು ವರ್ಣಿಸಲು ಪದಗಳೇ ಇಲ್ಲ ಎಂದರೆ ಮತ್ತೆ ಕೆಲವರು ನಿಮ್ಮ ಲುಕ್ ನಮಗೆ ಆಸ್ಕರ್ ಪ್ರಶಸ್ತಿಯನ್ನು ನೆನಪಿಸುತ್ತಿದೆ ಎನ್ನುವ ಮೆಚ್ಚುಗೆಗಳನ್ನು ನೀಡಿದ್ದಾರೆ.
ನಟಿ ಶೋಭಿತಾ ಧೂಲಿಪಾಲ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಯುವ ಸ್ಟಾರ್ ನಟ ನಾಗಚೈತನ್ಯ ಜೊತೆಗೆ ತಳಕು ಹಾಕಿಕೊಂಡಿದ್ದು, ಇವರ ನಡುವೆ ಏನೋ ನಡೆಯುತ್ತಿದೆ ಎನ್ನುವುದಾಗಿ ಆಗಾಗ ಸುದ್ದಿಗಳಾಗುತ್ತಲೇ ಇದೆ. ಇವರು ಮದುವೆ ಆಗ್ತಾರಾ ಎನ್ನುವ ಅನುಮಾನ ಕೂಡಾ ಇದೆ.