Sapthami Gowda: ಯುವ ಸಕ್ಸಸ್ ಬೆನ್ನಲ್ಲೇ ವೆಕೇಷನ್ ಮೂಡಿಗೆ ಜಾರಿದ ಸಪ್ತಮಿ ಗೌಡ, ಇಲ್ಲಿದೆ ಫೋಟೋಗಳು

Written by Soma Shekar

Published on:

---Join Our Channel---

Sapthami Gowda: ಸ್ಯಾಂಡಲ್ವುಡ್ ಸುಂದರಿ ಸಪ್ತಮಿ ಗೌಡ (Sapthami Gowda) ಕನ್ನಡ ಸಿನಿಮಾ ರಂಗದಲ್ಲೊಂದು ವಿಶೇಷ ಹೆಸರನ್ನು ಮಾಡಿ, ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಹಾಗೂ ಕಿರುತೆರೆಯಲ್ಲಿ ಸೀರಿಯಲ್ ಗಳ ವಿಶೇಷ ಸಂಚಿಕೆಗಳ ನಿರೂಪಕಿಯಾಗಿ ಬಹುಮುಖ ಪ್ರತಿಭೆಯಂತೆ ಸಿನಿ ಪ್ರೇಕ್ಷಕರು ಮತ್ತು ಕಿರುತೆರೆಯ ಪ್ರೇಕ್ಷಕರ ಮುಂದೆ ಬಂದು ಎಲ್ಲರ ಮೆಚ್ಚುಗಯನ್ನು ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ಸಪ್ತಮಿ ಗೌಡ ಅವರು ತಮ್ಮ ಯುವ (Yuva) ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ದೊಡ್ಮನೆ ಕುಡಿ ಯುವರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾ ಯುವದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ ಸಪ್ತಮಿ ಗೌಡ. ಈ ಸಿನಿಮಾಕ್ಕಾಗಿ ಸಪ್ತಮಿ ಸ್ಲಿಮ್ ಆಗಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಸಪ್ತಮಿ ಅವರು ಈಗ ಸಿನಿಮಾ ಯಶಸ್ಸಿನ ಬೆನ್ನಲ್ಲೇ ರಜೆಯನ್ನು ಎಂಜಾಯ್ ಮಾಡುತ್ತಿದ್ದು, ಸುಂದರ ತಾಣದಲ್ಲಿ ತೆಗೆದುಕೊಂಡ ಅಂದವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ವೆಕೇಶನ್ ಟೈಮ್ ಎಂಜಾಯ್ ಮಾಡ್ತಿರೋದಾಗಿ ಹೇಳಿದ್ದಾರೆ.

ಸಪ್ತಮಿ ಗೌಡ ಅವರು ಶೇರ್ ಮಾಡಿಕೊಂಡ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ನೀಡಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಕೆಲವರು ಅದು ಯಾವ ಸ್ಥಳ ಅಂತ ಕೂಡಾ ನಟಿಯನ್ನು ಪ್ರಶ್ನೆ ಮಾಡಿದ್ದಾರೆ.

ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾದ ನಂತರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಮತ್ತು ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾರಣ ನಟಿಗೆ ಕನ್ನಡ ಮಾತ್ರವೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಸಹಾ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.

ಯುವ ಸಿನಿಮಾದ ನಂತರ ಸಪ್ತಮಿ ಗೌಡ ಅವರು ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದನ್ನ ತಿಳಿದುಕೊಳ್ಳೋ ಕುತೂಹಲವನ್ನು ಅವರ ಅಭಿಮಾನಿಗಳು ಪಡೆದುಕೊಂಡಿದ್ದಾರೆ. ನಟಿ ತಮ್ಮ ಮುಂದಿನ ಸಿನಿಮಾದಲ್ಲಿ ಯಾವ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ತಾರೆ ಕಾದು ನೋಡಬೇಕಾಗಿದೆ.

Leave a Comment