Actress Sadha: ಬೇಡ ಅಂದ್ರೂ ಬಿಡದೇ ನಾಲಗೆಯಿಂದ ನೆಕ್ಕಿದ್ದ; ಮೊನಾಲಿಸಾ ನಟಿ ಬಿಚ್ಚಿಟ್ಟ ಕಹಿ ಸತ್ಯ

Written by Soma Shekar

Published on:

---Join Our Channel---

Actress Sada : ಕನ್ನಡದಲ್ಲೂ ನಟಿಸಿರುವ, ವರ್ಷಗಳ ಹಿಂದೆ ದಕ್ಷಿಣ ಸಿನಿಮಾಗಳಲ್ಲಿ ಸ್ಟಾರ್ ನಟಿಯ ಮಟ್ಟಕ್ಕೆ ಸದ್ದು ಮಾಡಿದ್ದವರು ನಟಿ ಸದಾ (Actress Sadha). ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾದಿಂದಲೇ ದೊಡ್ಡ ಯಶಸ್ಸು ಪಡೆದುಕೊಂಡ ನಟಿ ಸದಾ ಕಳೆದ ಕೆಲವು ವರ್ಷಗಳಿಂದಲೂ ಸಹಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಆದರೂ ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳ ಜಡ್ಜ್ ಆಗಿ ಅವರು ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಟಿ ಸದಾ ವೃತ್ತಿ ಜೀವನದಲ್ಲಿ ಸಿನಿಮಾ ಆಯ್ಕೆ ವಿಚಾರದಲ್ಲಿ ಎಡವಿದ್ದೇ ಅವರ ಬೇಡಿಕೆ ತಗ್ಗಿಸಲು ಕಾರಣವಾಯಿತು ಎನ್ನುವುದು ಸತ್ಯ. ‌

ನಟಿ ಸದಾ ತಮ್ಮ ಮೊದಲ ಸಿನಿಮಾದ ಚಿತ್ರೀಕರಣದ ವೇಳೆ ತಮಗಾದ ಒಂದು ಮುಜುಗರದ ಸಂಗತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಇಂದು ಟಾಲಿವುಡ್ ನ (Tollywood) ಸ್ಟಾರ್ ನಟ ಆಗಿರುವ ನಿತಿನ್ (Nithin) ಅವರ ಮೊದಲ ಸಿನಿಮಾ ಜಯಂ ನಲ್ಲಿ (Jayam Movie) ಸದಾ ನಾಯಕಿಯಾಗಿ ಟಾಲಿವುಡ್ ಗೆ ಎಂಟ್ರಿ ನೀಡಿದ್ದರು. ಈ ಸಿನಿಮಾವನ್ನು ನಿರ್ದೇಶಕ ತೇಜ ನಿರ್ದೇಶನ ಮಾಡಿದ್ದರು. ಜಯಂ ಸಿನಿಮಾ ಆಗ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.

ನಟಿ ಈ ಸಿನಿಮಾ ಮಾಡುವಾಗ ಇದರಲ್ಲಿ ತನಗೆ ಸ್ವಲ್ಪವೂ ಇಷ್ಟವಿಲ್ಲದ ಒಂದು ದೃಶ್ಯವನ್ನು ಚಿತ್ರೀಕರಣ ಮಾಡಲಾಗಿತ್ತು ಎನ್ನುವ ಮೂಲಕ ನಿರ್ದೇಶಕ ತೇಜ ಅವರ ವಿರುದ್ಧ ಒಂದು ಆರೋಪವನ್ನು ಮಾಡಿದ್ದಾರೆ. ಇಷ್ಟವಿಲ್ಲದೇ ಹೋದ್ರು ಆ ದೃಶ್ಯದಲ್ಲಿ ನಟಿಸುವುದು ಅನಿವಾರ್ಯವಾಗಿತ್ತು. ನಿರ್ದೇಶಕರು ಆ ದೃಶ್ಯವೇ ಹೈಲೈಟ್ ಎಂದು ಹೇಳಿದರು ಎನ್ನುವ ಮಾತುಗಳನ್ನು ಸದಾ ಹೇಳಿದ್ದಾರೆ.

ಸದಾ ಅದರ ಬಗ್ಗೆ ವಿವರಿಸುತ್ತಾ, ಆ ದೃಶ್ಯದಲ್ಲಿ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ನಟ ಗೋಪಿಚಂದ್ ನನ್ನ ಕೆನ್ನೆಯನ್ನು ನಾಲಗೆಯಿಂದ ನೆಕ್ಕುತ್ತಾರೆ. ಆದರೆ ನಾನು ಆ ದೃಶ್ಯದಲ್ಲಿ ನಟಿಸಲ್ಲ ಬೇಕಾದ್ರೆ ಸಿನಿಮಾದಿಂದಲೇ ಹೊರಗೆ ಹೋಗೋದಾಗಿ ಹೇಳಿದ್ದೆ. ಆದರೆ ನಿರ್ದೇಶಕರು ಯಾವುದನ್ನೂ ಕೇಳಲಿಲ್ಲ. ಆ ದೃಶ್ಯದ ಬಳಿಕ ನಾನು ಬಹುಶಃ ಹತ್ತು ಸಲ ಮುಖವನ್ನು ತೊಳೆದುಕೊಂಡಿದ್ದೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

Leave a Comment