Actress Ramya: ಫ್ಯಾನ್ಸ್ ನ ಬಳಸಿಕೊಂಡು ಹೀಗೆ ಮಾಡೋದೆಷ್ಟು ಸರಿ? ದರ್ಶನ್ ಕೃತ್ಯಕ್ಕೆ ರಮ್ಯ ಖಂಡನೆ

Written by Soma Shekar

Published on:

---Join Our Channel---

Actress Ramya: ದರ್ಶನ್ ಮತ್ತು ಗ್ಯಾಂಗ್ (Darshan And Gang) ರೇಣುಕಾ ಸ್ವಾಮಿ ಕೊ ಲೆ (Renuka Swamy Murder) ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಬಂಧನದಲ್ಲಿ ಇದ್ದಾರೆ. ಈ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ಬೆರಳಿಕೆಯಷ್ಟು ಜನರು ಮಾತ್ರ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ (Actress Ramya) ಪ್ರತಿಕ್ರಿಯೆ ನೀಡುತ್ತಾ ಇದನ್ನು ಖಂಡಿಸಿದ್ದಾರೆ. ಮಾದ್ಯಮದ ಜೊತೆ ಮಾತನಾಡಿರುವ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊ ಲೆ ಮಾಡೋದು ಎಷ್ಟು ಸರಿ? ಇಂಥದ್ದನ್ನ ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡೋ ಸಂದೇಶ ಏನು ? ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆಂದು ನಂಬಿದ್ದೇನೆ ಎಂಬುದಾಗಿ ರಮ್ಯಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಮಗೆ ಬ್ಲಾಕ್ ಅನ್ನುವ ಆಯ್ಕೆ ಇದೆ. ಎಲ್ಲರಿಗೂ ಈ ಆಯ್ಕೆ ಇದೆ. ಯಾರಾದರೂ ಟ್ರೋಲ್ ಮಾಡ್ತಿದ್ರೆ ಮೊದಲು ಬ್ಲಾಕ್ ಮಾಡಿ. ನಾನು ಈ ಹಿಂದೆ ನನ್ನ ಟ್ರೋಲ್ ಮಾಡಿದ್ದ ಕೆಲವರ ವಿರುದ್ಧ ದೂರನ್ನು ನೀಡಿದೆ. ಪೊಲೀಸರು ಕರೆದು ಎಚ್ಚರಿಕೆ ನೀಡಿದ ಬಳಿಕ ನಾನು ಕೇಸ್ ವಾಪಸ್ ಪಡೆದಿದ್ದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ದರ್ಶನ್ ರಾಜಕೀಯ ಪ್ರಭಾವ ಬೀರಿರಬಹುದು ಆದರೆ ಈ ಹಂತದಲ್ಲಿ ರಾಜಕೀಯ ಪ್ರಭಾವ ಬೀರುವುದಕ್ಕೆ ಸಾಧ್ಯವಿಲ್ಲ.

ಕಳೆದ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಮಾಡಿದ್ದಾರೆ. ಹಾಗಂತ ಕಾನೂನಿಗಿಂತ ಯಾರು ದೊಡ್ಡವರೇನಲ್ಲ. ಪೊಲೀಸ್ ಠಾಣೆಯ ಹೊರಗೆ ಕೆಲವು ಜನರು ಇದ್ದ ತಕ್ಷಣ ಪ್ರಭಾವ ಬೀರುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಈ ಬೆಳವಣಿಗೆ ನ ಟೋರಿಯಸ್ ಆಗಿದ್ದು, ರೌಡಿ ಎಲಿಮೆಂಟ್ ಇರುವ ಹಿನ್ನೆಲೆ ಜನರ ಗಮನ ಸೆಳೆದಿದೆ. ದರ್ಶನ್ ಗಿಂತ ಅಧಿಕ ಅಭಿಮಾನಿಗಳಿರುವ ನಟರಿದ್ದಾರೆ. ನಾನು ವಿಡಿಯೋ ನೋಡಿದೆ.

ರಾಡ್ ನಿಂದ ತಲೆಗೆ ಹೊಡೆದಿದ್ದಾರೆ. ಇನ್ನೂ ಹಲವು ವೀಡಿಯೋಗಳು ಬರ್ತಿದೆ. ಇದನ್ನೆಲ್ಲಾ ಮಾಡಲು ಹೇಗೆ ಸಾಧ್ಯ ? ಪೊಲೀಸರು ನಿಯಮಗಳ ಅನುಸಾರ ತನಿಖೆ ನಡೆಸುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ನಟರಾದವರು ಜವಾಬ್ದಾರಿಯುತವಾಗಿರಬೇಕು, ಚಾರಿಟಿ ಅಥವಾ ಇನ್ಯಾವುದೇ ಒಳ್ಳೆ ಮಾರ್ಗದ ಮೂಲಕ ಸಮಾಜಕ್ಕೆ ಉತ್ತಮವಾದದನ್ನು ನೀಡಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಫ್ಯಾನ್ ಕ್ಲಬ್ ಗಳಿಂದ ಕಿಡ್ನಾಪ್ ಮಾಡಿಸುವುದು ಹಲ್ಲೆ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಎಂದಿದ್ದಾರೆ.

ಜನರು ಎಲ್ಲವನ್ನ ನೋಡ್ತಿದ್ದಾರೆ. ಯಾರೋ ಕೆಲವರು ಇದನ್ನ ಸಮರ್ಥಿಸಿಕೊಳ್ಳಬಹುದು. ಬಹುತೇಕ ಜನರು ಇದನ್ನು ಖಂಡನೆ ಮಾಡಿದ್ದಾರೆ. ಚಿತ್ರರಂಗ ಇದನ್ನ ಖಂಡಿಸಬೇಕು ಎನ್ನುವ ವಿಚಾರವಾಗಿ ನಾನು ಮಾತನಾಡುವುದಿಲ್ಲ. ದರ್ಶನ್ ಹಿನ್ನೆಲೆಯ ಮೇಲೆ ಅವರಿಗೆ ಅವರದೇ ಆದ ಯೋಚನಾ ಲಹರಿ ಇರುತ್ತೆ. ಇಂತಹ ಬೆಳವಣಿಗೆಯನ್ನು ಖಂಡಿಸದಿದ್ದರೆ ನಾವು ಸಮಾಜಕ್ಕೆ ಏನು ಸಂದೇಶವನ್ನು ನೀಡುತ್ತಿದ್ದೇವೆ ಎಂದು ನಟಿ ರಮ್ಯಾ ಅವರು ಪ್ರಶ್ನೆ ಮಾಡಿದ್ದಾರೆ.

Leave a Comment