Actress Prema: ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಸ್ಟಾರ್ ನಟಿಯೂ ಆಗಿದ್ದ ಪ್ರೇಮಾ (Actress Prema) ಅವರು ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಮಹಾನಟಿ (Mahanati) ಶೋನಲ್ಲಿ ಜಡ್ಜ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ನಟಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಆಗ ಅಷ್ಟೊಂದು ಅವಕಾಶಗಳು ಇರಲಿಲ್ಲ, ಮನೆಯವ್ರು ಮದ್ವೆ ಆಗೋಕೆ ಒತ್ತಾಯ ಮಾಡಿದ್ರು. ತಂಗಿ ಏಳು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ರಿಂದ ನನ್ನ ಮದ್ವೆ ಆಗದಿದ್ರೆ ತಂಗಿ ಮದುವೆ ಆಗಲ್ಲ ಎಂದು ಅಪ್ಪ ಅಮ್ಮ ಹೇಳಿದ್ರು.
ಹಾಗಾಗಿ ಬೇಡ ಅನ್ನದೇ ಒಪ್ಪಿಕೊಂಡೆ, ಅರೇಂಜ್ಡ್ ಮದುವೆ ನಮ್ಮದು. ಅವರು ಮನೆಗೆ ಬರ್ತಿದ್ರು, ಮದುವೆ ಆಗ್ತೀನಿ ಅಂದ್ರು, ನಮ್ಮ ಮನೆಯಿಂದ ಅವರ ಮನೆ ಹತ್ತಿರ ಇದ್ದುದ್ರಿಂದ ಅಪ್ಪ ಅಮ್ಮನ ಮನೆಗೆ ಹೋಗಿ ಬರ್ತಾ ಇರಬಹುದು ಎಂದು ಮದುವೆಗೆ ಒಪ್ಪಿಕೊಂಡೆ. ಬ್ಯುಸಿ ಇದ್ದಾಗ ಎಲ್ಲಾ ಕನಸುಗಳನ್ನು ಮುಂದೂಡುತ್ತಾ ಹೋಗ್ತಿದ್ದೆ. ಪಬ್ ಗೆ ಹೋಗದೇ ಮತ್ತೆಲ್ಲೋ ಹೋಗದೇ ಎಂಜಾಯ್ ಮಾಡೋದು ಎಲ್ಲಾ ಮದುವೆ ಆದ್ಮೇಲೆ ಅನ್ಕೊಂಡಿದ್ದೆ. ಗಂಡ ಹೀಗಿರಬೇಕು, ಹಾಗಿರಬೇಕೆನ್ನುವ ನಿರೀಕ್ಷೆ ಇರುತ್ತೆ, ಅದಕ್ಕೆ ಹರ್ಟ್ ಆಗುತ್ತೆ ಎಂದಿದ್ದಾರೆ.
ನನ್ನ ಮದುವೆ ನಿರ್ಧಾರ ಸರಿ ಇಲ್ಲ ಅನ್ಸುತ್ತೆ. ಆತುರವಾಗಿ, ಮದುವೆ ಅನ್ನೋದೊಂದು ಕಮಿಟ್ಮೆಂಟ್, ಜವಾಬ್ದಾರಿ. ತಪ್ಪು ನನ್ನದೇ ಅಂತಲ್ಲ, ಇಬ್ಬರದ್ದೂ ಇದೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು, ಆದ್ರೆ ಮದುವೆ ಬಳಿಕ ಆ ಸ್ವಾತಂತ್ರ್ಯ ಇರಲಿಲ್ಲ ಅನಿಸಿತ್ತು. ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳೋದು ಅದೇ, ಸಮಯವನ್ನು ತಗೊಂಡು ಯೋಚನೆ ಮಾಡಿ, ಸುಖಾಸುಮ್ಮನೆ ದಿಢೀರ್ ನಿರ್ಧಾರಕ್ಕೆ ಬರಬೇಡಿ ಎಂದು ಪ್ರೇಮಾ ಹೇಳಿದ್ದಾರೆ.
ಆಗ ಡಿವೋರ್ಸ್ ನಿರ್ಧಾರ ಅನ್ನೋದು ಬಹಳ ಕಷ್ಟವಾಗಿತ್ತು. ತಂದೆ ತಾಯಿಗೆ ಹೇಳೋದು ಕಷ್ಟ ಅನಿಸಿತ್ತು. ಆದರೆ ಆಮೇಲೆ ಎಲ್ಲರೂ ಬೆಂಬಲವಾಗಿ ನಿಂತರು, ನಾನು ಹೆಜ್ಜೆಯನ್ನು ಮುಂದಿಟ್ಟೆ. ಮದುವೆ ಆಗದೇ ಒಂಟಿಯಾಗಿ ಜೀವಿಸಬಹುದು. ಯಾಕಂದ್ರೆ ಕೊನೆಗೆ ಹೋಗೋದು ಒಬ್ರೆ ಅಲ್ವೇ? ಇನ್ನೊಬ್ರ ಮೇಲೆ ಯಾಕೆ ಅವಲಂಬಿತವಾಗಿರಬೇಕು. ಇನ್ನೊಬ್ರ ಮೇಲೆ ನಿರೀಕ್ಷೆ ಯಾಕೆ ಇಟ್ಟುಕೊಳ್ಳಬೇಕು ಎಂದಿದ್ದಾರೆ ನಟಿ ಪ್ರೇಮಾ.