Neha Gowda: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಗೊಂಬೆ ನೇಹಾ ಗೌಡ ಚಂದನ್ ದಂಪತಿ, ಖುಷಿಯಿಂದ ಶುಭ ಹಾರೈಸಿದ ಫ್ಯಾನ್ಸ್

Written by Soma Shekar

Published on:

---Join Our Channel---

Neha Gowda: ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯತೆಯನ್ನು ಪಡೆದುಕೊಂಡವರು ನಟಿ ನೇಹಾ ಗೌಡ (Neha Gowda). ಇಂದಿಗೂ ಕಿರುತೆರೆಯ ಪ್ರೇಕ್ಷಕರು ನೇಹಾ ಅವರನ್ನು ಗೊಂಬೆ ಎಂದೇ ಗುರುತಿಸುವುದು ವಿಶೇಷವಾಗಿದೆ. ನೇಹಾ ಅವರು 2018 ರಲ್ಲಿ ಚಂದನ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಚಂದನ್ (Chandan) ಸಹಾ ಅಂತರಪಟ ಸೀರಿಯಲ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಈಗ ಮದುವೆಯ ಆರು ವರ್ಷಗಳ ನಂತರ ಚಂದನ್ ಮತ್ತು ನೇಹಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು, ಈ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಈ ಗುಡ್ ನ್ಯೂಸ್ ಅನ್ನು ನೇಹಾ ಚಂದನ್ ದಂಪತಿ ಹಂಚಿಕೊಂಡಿದ್ದಾರೆ.

ನೇಹಾ ತಮ್ಮ ಪೋಸ್ಟ್ ನಲ್ಲಿ, ಹೊಸ ಜೀವವನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ನಮ್ಮ ಹೃದಯವು ಸಂತೋಷ ಮತ್ತು ನಿರೀಕ್ಷೆಗಳಿಂದ ತುಂಬಿ ತುಳುಕುತ್ತಿದೆ. ನಿಮ್ಮಲ್ಲಿ ಹಲವರು ಅದನ್ನು ಊಹಿಸಿದ್ದು ನಿಜ, ನೀವು ಹೇಳಿದ್ದು ಸರಿ! ನಮ್ಮ ಕುಟುಂಬ ಎರಡರಿಂದ ಮೂರಕ್ಕೆ ಬೆಳೆಯುತ್ತಿದೆ.

ನಿದ್ದೆಯಿಲ್ಲದ ರಾತ್ರಿಗಳು, ಸಂತೋಷ ಮತ್ತು ಮಿತಿಯಿಲ್ಲದ ಪ್ರೀತಿಯಿಂದ ತುಂಬಿರುವ ಈ ಹೊಸ ಅಧ್ಯಾಯಕ್ಕೆ ಕಾಯುತ್ತಿರೋದಾಗ ನೇಹಾ ಅವರು ತಮ್ಮ ಖುಷಿಯನ್ನು ಸುಂದರ ಸಾಲುಗಳ ಮೂಲಕ ವ್ಯಕ್ತಪಡಿಸಿದ್ದಾರೆ. ನಟಿ ಹಂಚಿಕೊಂಡ ವಿಷಯವನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಚಂದನ್ ಮತ್ತು ನೇಹಾ ದಂಪತಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ.

Leave a Comment