Kareena Kapoor: ಬುಕ್ ಬರೆದು ಬುಕ್ ಆದ ಕರೀನಾಗೆ ಕೋರ್ಟ್ ನಿಂದ ನೋಟಿಸ್; ಇಷ್ಟಕ್ಕೂ ಯಾವುದು ಆ ಪುಸ್ತಕ ?

Written by Soma Shekar

Published on:

---Join Our Channel---

Kareena Kapoor: ಬಾಲಿವುಡ್ (Bollywood) ಬೆಬೊ ಕರೀನಾ ಕಪೂರ್ ಗೆ (Kareena Kapoor) ಎದುರಾಗಿದೆ ಕಾನೂನಿನ ಸಂಕಷ್ಟ. ಕರೀನಾ ಕಪೂರ್ ಅವರು ಬರೆದಿದ್ದ ಒಂದು ಪುಸ್ತಕಕ್ಕೆ ಅವರು ಇಟ್ಟಿದ್ದ ಹೆಸರೇ ಈಗ ನಟಿಯ ಸಂಕಷ್ಟಕ್ಕೆ ಕಾರಣವಾಗಿದೆ. ಕರೀನಾ ತಮ್ಮ ಪುಸ್ತಕವೊಂದರಲ್ಲಿ ಗರ್ಭಾವಸ್ಥೆಯ ಪಯಣದ ಕುರಿತಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ತನ್ನ ಪ್ರೆಗ್ನಸಿ (Pregnancy) ಅನುಭವಗಳ ಜೊತೆಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದ ಕರೀನಾ ತಾವೇ ಬರೆದ ಪುಸ್ತಕಕ್ಕೆ ‘ಕರೀನಾ ಕಪೂರ್ಸ್ ಪ್ರೆಗ್ನೆನ್ಸಿ ಬೈಬಲ್’ ಅನ್ನೋ ಟೈಟಲ್ ಅನ್ನ ನೀಡಿದ್ದರು.

ಪುಸ್ತಕದ ಹೆಸರಿನಲ್ಲಿ ಬೈಬಲ್ (Bible) ಪದವನ್ನು ಬಳಸಿದ ಕಾರಣಕ್ಕೆ ಜಬಲ್ಪುರದ ಕ್ರಿಶ್ಚಿಯನ್ ಸಾಮಾಜಿಕ ಕಾರ್ಯಕರ್ತರೊಬ್ಬರು ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಜಬಲ್ಪುರದ ಕ್ರಿಶ್ಚಿಯನ್ ಸಾಮಾಜಿಕ ಕಾರ್ಯಕರ್ತರಾದ ಕ್ರಿಸ್ಟೋಫರ್ ಆಂಥೋನಿ (Christopher Anthony) ಅವರು ಕರೀನಾ ಕಪೂರ್ ಅವರ ವಿರುದ್ಧ ಮಧ್ಯಪ್ರದೇಶದ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯವು ನಟಿಗೆ ನೋಟೀಸ್ ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಕ್ರಿಸ್ಟೋಫರ್ ಆಂಥೋನಿ ಅವರು ಹೇಳುವುದೇನೆಂದರೆ ನಟಿಯು ತಮ್ಮ ಪುಸ್ತಕವನ್ನು ಫೇಮಸ್ ಮಾಡುವ ಉದ್ದೇಶದಿಂದ ಕ್ರೈಸ್ತರ ಪವಿತ್ರ ಪುಸ್ತಕದ ಹೆಸರನ್ನು ತಮ್ಮ ಪುಸ್ತಕದ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ. ಅವರು ಪಬ್ಲಿಸಿಟಿಗಾಗಿ ಇಂತಹುದೊಂದು ಚೀಪ್ ಗಿಮಿಕ್ ಮಾಡಿದ್ದಾರೆ ಎನ್ನುವುದು ಆಂಥೋನಿ ಅವರ ಆರೋಪವಾಗಿದೆ.

ವಿಶ್ವದಾದ್ಯಂತ ಇರುವ ಕ್ರೈಸ್ತ ಸಮುದಾಯದವರಿಗೆ ಬೈಬಲ್ ಎನ್ನುವುದು ಪವಿತ್ರ ಪುಸ್ತಕವಾಗಿದೆ. ಆದರೆ ಕರೀನಾ ಕಪೂರ್ ಅವರು ಗರ್ಭಧಾರಣೆಯನ್ನು ಬೈಬಲ್ ಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ಇದರಿಂದ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವಂತಾಗಿದೆ ಎಂದು ಹೇಳಿದ್ದಾರೆ. ಕರೀನಾ ಕಪೂರ್ ಖಾನ್ ಅವರ ಈ ಪುಸ್ತಕ 2021 ರಲ್ಲಿ ಪ್ರಕಟವಾಗಿತ್ತು.

Leave a Comment