Ashi Roy : ಬೆಂಗಳೂರಿನ ರೇವ್ ಪಾರ್ಟಿ (Rave Party) ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಭಾನುವಾರದಂದು ತಡರಾತ್ರಿಯಲ್ಲಿ ಬೆಂಗಳೂರಿನ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಸಿಸಿಬಿ ಪೋಲಿಸರು ದಾಳಿ ನಡಸಿದ ವೇಳೆಯಲ್ಲಿ ತೆಲುಗಿನ ನಟಿಯರು ಸಹಾ ಸಿಕ್ಕಿ ಬಿದ್ದ ವಿಚಾರವು ವೈರಲ್ ಆಗಿತ್ತು. ಪೋಲಿಸರು ಪಾರ್ಟಿಯಲ್ಲಿ ಇದ್ದವರ ರಕ್ತದ ಮಾದರಿಯನ್ನು ಸಂಗ್ರಹಿಸಿದ ಬೆನ್ನಲ್ಲೇ ಭಯದಿಂದ ನಟಿಯೊಬ್ಬರು ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ.
ತೆಲುಗಿನ ಯುವ ನಟಿ ಆಶಿ ರಾಯ್ (Ashi Roy) ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ನಾನು ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದೆ ಎಂಬುದಾಗಿಯೂ ನಟಿ ಹೇಳಿಕೊಂಡಿದ್ದಾರೆ. ನಾನು ಅಣ್ಣ ಅಂತ ಕರೀತಿದ್ದ ವ್ಯಕ್ತಿಯ ಬರ್ತಡೇ ಪಾರ್ಟಿ ಅದಾಗಿತ್ತು.
ಆ ಪಾರ್ಟಿಯಲ್ಲಿ ಏನೇನು ನಡೆದಿದೆ ಅನ್ನೋದೇ ನನಗೆ ಗೊತ್ತಿಲ್ಲ. ಆದರೆ ಅಲ್ಲಿನ ಪೋಲಿಸರು ನಮ್ಮೆಲ್ಲರನ್ನೂ ಕೂಡಿ ಹಾಕಿದ್ದರು ಮತ್ತು ನಮ್ಮ ಬ್ಲಡ್ ಸ್ಯಾಂಪಲ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನನಗೆ ತುಂಬಾ ಭಯವಾಗಿದೆ.
ನಾನಿನ್ನೂ ಚಿಕ್ಕ ಹುಡುಗಿ. ಈಗಷ್ಟೇ ಸಿನಿಮಾ ರಂಗದಲ್ಲಿ ಕಾಲಿಟ್ಟಿದ್ದು, ಕಷ್ಟಪಟ್ಟು ಬೆಳೆಯುತ್ತಿದ್ದೇನೆ. ಈ ಪ್ರಕರಣದಲ್ಲಿ ನೀವೆಲ್ಲರೂ ನನ್ನ ನೆರವಿಗೆ ಬರಬೇಕೆಂದು ನಟಿ ಸೋಶಿಯಲ್ ಮೀಡಿಯಾ ಮೂಲಕ ಮನವಿಯೊಂದನ್ನು ಮಾಡಿಕೊಂಡಿದ್ದು, ನಟಿಯ ಪೋಸ್ಟ್ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ಬೆಂಗಳೂರಿನ ಜಿಆರ್ ಫಾರ್ಮ್ ನಲ್ಲಿ ರೇವ್ ಪಾರ್ಟಿ ನಡೆದಿತ್ತು. ಸನ್ ಸೆಟ್ ಟು ಸನ್ ರೈಸ್ ಎನ್ನುವ ಥೀಮ್ ನಲ್ಲಿ ಪಾರ್ಟಿಯ ಆಯೋಜನೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ದಾಳಿ ಮಾಡಿದ ವೇಳೆಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದಲ್ಲದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಟೆಕ್ಕಿಗಳು, ನಟಿಯರು ಮತ್ತು ಮಾಡೆಲ್ ಗಳು ಪೋಲಿಸರಿಗೆ ಸಿಕ್ಕಿ ಬಿದ್ದಿದ್ದರು. ತೆಲುಗಿನ ಜನಪ್ರಿಯ ನಟಿ ಹೇಮಾ ಸಹಾ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆದರೆ ನಟಿ ವೀಡಿಯೋ ಮಾಡಿ ನಾನು ಹೈದ್ರಾಬಾದ್ ನಲ್ಲಿದ್ದೇನೆಂದು ಮಾದ್ಯಮಗಳ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ರು.