Anushka Shetty : ಲೋನ್ ಕಟ್ಟಲಾಗದ ಡ್ರೈವರ್ ಗೆ 12 ಲಕ್ಷ ರೂ. ಕಾರ್ ಗಿಫ್ಟ್ ಕೊಟ್ಟ ಅನುಷ್ಕಾ; ಎಷ್ಟೊಳ್ಳೆ ಮನಸ್ಸು

Written by Soma Shekar

Published on:

---Join Our Channel---

ದಕ್ಷಿಣದ ಸಿನಿಮಾ ನಟಿ ಅನುಷ್ಕಾ ಶೆಟ್ಟಿ (Anushka Shetty) ಸೂಪರ್ ಸ್ಟಾರ್ ನಟಿ ಎನ್ನುವಷ್ಟರ ಮಟ್ಟಿಗೆ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ತಮ್ಮ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವ ಈ ನಟಿ ತಮ್ಮ ಅದ್ಭುತ ನಟನೆಯ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ ಮತ್ತು ನಟಿಯ ಸಿನಿಮಾಗಳಿಗಾಗಿ ಕಾಯುವ ಸಿನಿ ಪ್ರೇಮಿಗಳು ಸಹಾ ಇದ್ದಾರೆ.

ಅರುಂಧತಿ, ಭಾಗಮತಿ, ಬಾಹುಬಲಿಗಳಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಕರುನಾಡಿನ ಚೆಲುವೆ ಅನುಷ್ಕಾ ಶೆಟ್ಟಿ (Anushka Shetty) ತಾವು ಮಾಡಿದಂತಹ ಒಂದಷ್ಟು ಮಾನವೀಯ ಕಾರ್ಯ ಗಳಿಂದಲೂ ಸಹಾ ಜನ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ನಟಿ ಪ್ರಚಾರ ಪಡೆಯದೇ ಸಾಕಷ್ಟು ಸೇವೆಗಳನ್ನು ಮಾಡಿದ್ದಾರೆ. 

ನಟಿ ಅನುಷ್ಕಾ ಅವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆದ ಸಿನಿಮಾ ಅರುಂಧತಿ (Arundhati). ಈ ಸಿನಿಮಾದ ನಿರ್ಮಾಪಕರಾದ ಶ್ಯಾಮ್ ಪ್ರಸಾದ್ ರೆಡ್ಡಿ (Shyam Prasad Reddy) ಅವರು ನಟಿ ಅನುಷ್ಕಾ ಶೆಟ್ಟಿ ಅವರ ಕುರಿತಾಗಿ ಆಸಕ್ತಿಕರ ವಿಚಾರವೊಂದನ್ನು ಶೇರ್ ಮಾಡಿಕೊಂಡಿದ್ದರು. ಅನುಷ್ಕಾ ಅವರ ಮನಸ್ಸು ಎಂತದ್ದು ಎನ್ನುವುದನ್ನು ಅವರು ತಿಳಿಸಿದ್ದರು.

ನಟಿ ಅನುಷ್ಕಾ ಸಿನಿಮಾವೊಂದರ ವಿಷಯವಾಗಿ ಜಾರ್ಜಿಯಾ ದೇಶಕ್ಕೆ ಹೋದಾಗ ಅಲ್ಲಿನ ವ್ಯಕ್ತಿಯೊಬ್ಬರಿಗೆ ನೆರವನ್ನು ನೀಡಿದ್ದರಂತೆ. ಆ ವ್ಯಕ್ತಿಯ ಹೆಸರು ಝಾಝಾ. ಆತ ಕಾರ್ ಡ್ರೈವರ್ ಆಗಿದ್ದು, ನಟಿ ಜಾರ್ಜಿಯಾದಲ್ಲಿರುವಾಗ ಆತ ಅನುಷ್ಕಾ ಅವರ ಡ್ರೈವರ್ ಮತ್ತು ಕೇರ್ ಟೇಕರ್ ಆಗಿದ್ದರಂತೆ. ಒಂದು ದಿನ ಇದ್ದಕ್ಕಿದ್ದ ಹಾಗೆ ಝಾಝಾ ಕೆಲಸಕ್ಕೆ ಗೈರು ಹಾಜರಾದರಂತೆ.

ಆಗ ಅನುಷ್ಕಾ ತಮ್ಮ ಮ್ಯಾನೇಜರ್ ಬಳಿ ವಿಚಾರಿಸಿದಾಗ ಝಾಝಾ ಅವರಿಗೆ ತಮ್ಮ ಕಾರ್ ಲೋನ್ ಕಟ್ಟಲಾಗದೇ ಇದ್ದುದ್ದರಿಂದ ಅವರ ಕಾರನ್ನು ಜಫ್ತಿ ಮಾಡಲಾಗಿದೆ ಎಂದು ಹೇಳಿದರಂತೆ. ವಿಷಯ ತಿಳಿದ ಕೂಡಲೇ ಅನುಷ್ಕಾ ಝಾಝಾ ಅವರನ್ನು ಭೇಟಿ ಮಾಡಿ ಅವರನ್ನ ಕಾರ್ ಶೋ ರೂಂಗೆ ಕರೆದುಕೊಂಡು ಹೋದರಂತೆ.

ಅಲ್ಲಿ ಒಂದು ದುಬಾರಿ ಕಾರನ್ನು ಝಾಝಾ ಅವರಿಗೆ ಕೊಡಿಸಿದರಂತೆ. ಅನುಷ್ಕಾ ಮಾಡಿದ ಸಹಾಯಕ್ಕೆ ಇಡೀ ಕುಟುಂಬ ಅವರಿಗೆ ಕೃತಜ್ಞತೆ ಸಲ್ಲಿಸಿ ಭಾವುಕರಾಗಿದ್ದರಂತೆ. ಶ್ಯಾಮ್ ಪ್ರಸಾದ್ ಅವರು ವೆಕೇಶನ್ ಗಾಗಿ ಜಾರ್ಜಿಯಾಕ್ಕೆ ಹೋದಾಗ ಅವರಿಗೆ ಈ ವಿಷಯ ತಿಳಿದು ನಟಿ ಎಲ್ಲೂ ಹೇಳಿಕೊಳ್ಳದ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು.

Kannada Serial TRP: ನಂಬರ್ ಒನ್ ಸ್ಥಾನದಲ್ಲಿ ಎರಡು ಸೀರಿಯಲ್ ಗಳು; ಸೀರಿಯಲ್ ಗಳ ನಡ್ವೆ ಹೆಚ್ಚಿದ ಪೈಪೋಟಿ

Leave a Comment