Actor Yash: ನಮಗಿಂತ ಎತ್ತರ ಬೆಳೀಬೇಕು, ಕಂಠಿಗೆ ಕರೆ ಮಾಡಿದ ರಾಕಿಂಗ್ ಸ್ಟಾರ್ ಮಾತಿಗೆ ಧನುಷ್ ಫುಲ್ ಖುಷ್

Written by Soma Shekar

Published on:

---Join Our Channel---

Actor Yash : ಡಿಕೆಡಿ ಅಥವಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ (Dance Karnataka Dance) ಹೊಸ ಸೀಸನ್ ಈಗಾಗಲೇ ಸದ್ದು ಮತ್ತು ಸುದ್ದಿಯನ್ನು ಮಾಡುತ್ತಿದೆ. ಕಳೆದ ವಾರ ನಟ ಧನುಷ್ ಅಂದ್ರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಕಂಠಿ ಅಂತಾನೇ ಫೇಮಸ್ ಆಗಿರೋ ನಟ ಕೆಜಿಎಫ್ (KGF) ಸಿನಿಮಾದ ಧೀರ ಧೀರ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇದನ್ನ ನೋಡಿ ಪ್ರೇಕ್ಷಕರು ಮತ್ತು ಜಡ್ಜ್ ಗಳು ಸಹಾ ಫಿದಾ ಆಗಿದ್ದರು.

ಈಗ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯ ಕಂಠಿ ಪಾತ್ರಧಾರಿ ನಟ ಧನುಷ್ ಅವರೊಡನೆ ರಾಕಿಂಗ್ ಸ್ಟಾರ್ ಯಶ್ (Actor Yash) ಅವರು ಫೋನ್ ಕರೆಯಲ್ಲಿ ಮಾತನಾಡಿದ್ದು, ವಾಹಿನಿ ಈ ಪ್ರೊಮೋವನ್ನು ಶೇರ್ ಮಾಡಿದ್ದು, ಇದನ್ನ ನೋಡಿ ಪ್ರೇಕ್ಷಕರು ಮತ್ತು ನೆಟ್ಟಿಗರು ಥ್ರಿಲ್ ಆಗ್ತಿದ್ದಾರೆ.

ಕಳೆದ ವಾರ ಧನುಷ್ (Dhanush) ಅವರ ಡ್ಯಾನ್ಸ್ ನೋಡಿದ ನಂತರ ಶಿವಣ್ಣ ಅವರು ಈ ಡ್ಯಾನ್ಸ್ ಅನ್ನ ನೋಡೋದಕ್ಕೆ ನಾನು ಯಶ್ ಗೆ ಹೇಳ್ತೀನಿ ಅಂತ ಹೇಳಿದ್ದರು. ಈಗ ಯಶ್ ಅವರಿಂದಲೇ ಧನುಷ್ ಅವರಿಗೆ ಶುಭ ಹಾರೈಕೆಗಳು ಫೋನ್ ಕರೆಯ ಮೂಲಕ ಬಂದಿದೆ.

ಫೋನ್ ಕರೆಯಲ್ಲಿ ಯಶ್ ಅವರು, ಡ್ಯಾನ್ಸ್ ಚೆನ್ನಾಗಿ ಮಾಡಿದ್ದೀರಿ, ಸಖತ್ ಆಗಿತ್ತು. ಬೆಳೆಯೋರಿಗೆ ಬೆನ್ನು ತಟ್ಟೋದು ಮುಖ್ಯ. ಶಿವಣ್ಣ ಅವರೇ ನಮಗೆಲ್ಲಾ ಸ್ಪೂರ್ತಿ. ನಮ್ಮನ್ನೆಲ್ಲ ಮೀರಿಸಿ ನೀವು ಬೆಳೆದರೆ ಅದೇ ನಮಗೆ ನೀವು ಕೊಡೋ ಗೌರವ ಅಂತ ಯಶ್ ಹೇಳಿದ್ದು, ಧನುಷ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.‌

Kannada Serial TRP: ಯಾವ ಸೀರಿಯಲ್ ಬಂದ್ರು ಈ ಸೀರಿಯಲ್ ಖದರ್ ತಗ್ಗಲ್ಲ; ಈ ವಾರದ ಟಾಪ್ 5 ಸೀರಿಯಲ್ ಗಳು

Leave a Comment