Vijaya Devarakonda: ವಿಜಯ್ ದೇವರಕೊಂಡ (Vijaya Devarakonda) ಅಂತ ಹೇಳಿದ ಕೂಡಲೇ ಬಹಳಷ್ಟು ಜನ ನಟಿ ರಶ್ಮಿಕಾ ಮಂದಣ್ಣ ಬಾಯ್ ಫ್ರೆಂಡ್ ಎಂದು ಈ ನಟನನ್ನ ಗುರುತಿಸುತ್ತಾರೆ. ಪ್ರಸ್ತುತ ನಟ ವಿಜಯ ದೇವರಕೊಂಡ ಶೀಘ್ರದಲ್ಲೇ ಬಿಡುಗಡೆ ಆಗಲಿರುವ ತಮ್ಮ ಹೊಸ ಸಿನಿಮಾ ಫ್ಯಾಮಿಲಿ ಸ್ಟಾರ್ (Family Star) ಪ್ರಚಾರ ಕಾರ್ಯಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಲೈಗರ್ ಮತ್ತು ಖುಷಿ ಸಿನಿಮಾಗಳ ಸೋಲಿನ ನಂತರ ನಟ ಒಂದು ಸೂಪರ್ ಹಿಟ್ ಸಿನಿಮಾದ ನಿರೀಕ್ಷೆಯಲ್ಲಿ ಇದ್ದು ಅಭಿಮಾನಿಗಳು ಕೂಡಾ ಫ್ಯಾಮಿಲಿ ಸ್ಟಾರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆಯಲ್ಲಿ ಟಿವಿ ನಿರೂಪಕಿ ಒಬ್ಬರ ಜೊತೆ ವಿಜಯ ದೇವರಕೊಂಡ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ವಿಜಯ ದೇವರಕೊಂಡ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಅಕ್ಷತಾ ದಾಸ್ (Akshata Das) ನಟನನ್ನ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ಹೆಡ್ ಫೋನ್ ಧರಿಸಿರುವ ವಿಜಯ ದೇವರಕೊಂಡ ಆ ಪ್ರಶ್ನೆಗಳಿಗೆ ಉತ್ತರವನ್ನು ಹೇಳಬೇಕಾಗಿತ್ತು. ಅಕ್ಷತಾ ದಾಸ್ ಅವರು ಪ್ರಶ್ನೆಗಳನ್ನ ಕೇಳಿದಾಗ ವಿಜಯ ದೇವರಕೊಂಡ ಉತ್ತರವನ್ನು ಹೇಳಲಾಗದೇ ವಿಫಲರಾಗಿದ್ದಾರೆ. ಇದಾದ ನಂತರ ಮತ್ತೊಂದು ಪ್ರಯತ್ನವನ್ನ ಮಾಡೋಣ ಎಂದು ಹೇಳಿದಾಗ ನಿರೂಪಕಿ ಅಕ್ಷತಾ ದಾಸ್ ಅವರು ಉಚ್ಚಾರಣೆ ಮಾಡುತ್ತಾ ಏನನ್ನೋ ಹೇಳಿದ್ದಾರೆ.
ಮತ್ತೊಂದು ಪ್ರಯತ್ನವನ್ನ ಮಾಡಿದಾಗಲೂ ವಿಜಯ್ ದೇವರಕೊಂಡ ಅವರಿಗೆ ಅಕ್ಷತಾ ದಾಸ್ ಅವರು ಹೇಳಿದ್ದು ಏನು ಎನ್ನುವುದು ಖಂಡಿತ ಅರ್ಥವಾಗಿಲ್ಲ, ನಟ ಆಗ ಅತ್ತ ಇತ್ತು ನೋಡಿದ್ದಾರೆ. ಆಗ ಅಕ್ಷತಾ ನೀವು ಆ ರೀತಿಯೆಲ್ಲಾ ನೋಡೋ ಹಾಗಿಲ್ಲ. ಬೇರೆಯವರು ನಿಮಗೆ ಸಹಾಯ ಮಾಡೋದಿಲ್ಲ ಎಂದು ಹೇಳಿದ್ದಾರೆ. ಆಗ ತಕ್ಷಣ ವಿಜಯ ದೇವರಕೊಂಡ ತಮ್ಮ ಎದುರಲ್ಲಿದ್ದ ವ್ಯಕ್ತಿಯನ್ನು ಅದೇ ಮಾತನ್ನು ನೀವು ಒಂದು ಸಲ ಹೇಳಿ ಎನ್ನುತ್ತಾರೆ. ಯಾಕಂದ್ರೆ ಆಕೆಯ ತುಟಿಗಳು ನನ್ನನ್ನ Distract ಮಾಡ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ.
ವಿಜಯ ದೇವರಕೊಂಡ ಹೇಳಿದ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆ ಸಂಭಾಷಣೆಯ ವೀಡಿಯೋ ತುಣುಕು ವೈರಲ್ ಆಗ್ತಿದ್ದು, ಈ ವಿಡಿಯೋವನ್ನು ಶೇರ್ ಮಾಡಿಕೊಂಡ ವ್ಯಕ್ತಿ ನಿಜವಾಗಲೂ ನಿಮಗೆ ಆಕೆಯ ತುಟಿಗಳು distract ಮಾಡ್ತಾ ಇದ್ದೀಯಾ ಅಂತ ಪೋಸ್ಟ್ ನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಮೇಲೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿವೆ. ಕೆಲವರು ಪ್ರಶ್ನೆ ಮಾಡುತ್ತಾ ಈ ವಿಡಿಯೋ ನೋಡಿದ ಮೇಲೆ ರಶ್ಮಿಕಾ ಮಂದಣ್ಣ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ ತಮಾಷೆಯಾಗಿ ಪ್ರಶ್ನೆಯನ್ನು ಮಾಡಿದ್ದಾರೆ.