Vijay Sethupathi: ತಮಿಳು ನಟ ವಿಜಯ್ ಸೇತುಪತಿ (Vijay Sethupathi) ಅಭಿನಯಿಸಿರುವ 50ನೇ ಸಿನಿಮಾ ಮಹಾರಾಜ (Maharaja) ಬಾಕ್ಸಾಫೀಸ್ ನಲ್ಲಿ ಭರ್ಜರಿ ಗಳಿಕೆಯನ್ನು ಕಂಡಿದ್ದು, ಓಟಿಟಿಯಲ್ಲೂ ಇದು ವೀಕ್ಷಕರ ಮೇಲೆ ಮೋಡಿಯನ್ನು ಮಾಡುತ್ತಿದೆ. ಈ ಸಿನಿಮಾದ ಕುರಿತಾಗಿ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುವ ಮೂಲಕ ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡುವಾಗಲೇ ಸಿನಿಮಾದ ಕುರಿತಾಗಿ ಇನ್ನಷ್ಟು ಆಸಕ್ತಿಕರ ವಿಚಾರಗಳು ಒಂದೊಂದಾಗಿ ಹೊರಬರುತ್ತಿವೆ.
ಈಗ ಮತ್ತೊಂದು ಸಿಕ್ಕಾಪಟ್ಟೆ ಇಂಟರ್ಸ್ತಿಂಗ್ ಆಗಿರುವಂತಹ ಮಾಹಿತಿ ಏನು ಅನ್ನೋದಾದ್ರೆ, ಇಷ್ಟೊಂದು ದೊಡ್ಡ ಸಕ್ಸಸ್ ಅನ್ನು ಪಡೆದುಕೊಂಡಿರುವ ಮಹಾರಾಜ ಸಿನಿಮಾದಲ್ಲಿ ನಟಿಸುವುದಕ್ಕೆ ವಿಜಯ್ ಸೇತುಪತಿಯವರು ಸಂಭಾವನೆಯನ್ನೇ ಪಡೆದಿರಲಿಲ್ಲವಂತೆ. ಹೌದು, ಮಹಾರಾಜ ಸಿನಿಮಾ ಕೇವಲ 20 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾ.
ಆದರೆ ಸಿನಿಮಾ ನಿರ್ಮಾಣದ ವೇಳೆಯಲ್ಲಿ ಬಜೆಟ್ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ವಿಜಯ್ ಸೇತುಪತಿ ಫ್ರೀಯಾಗಿ ಕಾಲ್ ಶೀಟ್ ನೀಡಿದ್ದರು ಎನ್ನಲಾಗಿದೆ. ವಿಜಯ್ ಸೇತುಪತಿ ಅವರ 50ನೇ ಸಿನಿಮಾ ಇದಾಗಿದ್ದು, ತಮ್ಮ ಮೈಲಿಗಲ್ಲಿನ ಸಿನಿಮಾದಲ್ಲಿ ಇಂತದೊಂದು ಕಥೆ ಇರಬೇಕು ಎನ್ನುವುದು ಸೇತುಪತಿಯವರ ಆಸೆಯಾಗಿತ್ತು.
ಅದೇ ಕಾರಣಕ್ಕೆ ಅವರು ಈ ಕಥೆಯನ್ನು ಬಿಟ್ಟುಕೊಡಬಾರದೆನ್ನುವ ಉದ್ದೇಶದಿಂದ ಸಿನಿಮಾದಲ್ಲಿ ಸಂಭಾವನೆಯನ್ನು ಪಡೆಯದೇ ನಟಿಸಿದ್ದಾರೆ ಎನ್ನುವ ವಿಷಯ ಕೇಳಿ ಎಲ್ಲರಿಗೂ ಅಚ್ಚರಿ ಉಂಟಾಗಿದೆ. ಅವರು ಸಂಭಾವನೆ ಪಡೆಯದೇ ಚಿತ್ರದಲ್ಲಿ ನಟಿಸಿದ್ದು ಸತ್ಯವಾದರೂ ರಾಜ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 100 ಕೋಟಿ ರೂಗಳಿಗೂ ಅಧಿಕ ಗಳಿಕೆಯನ್ನು ಮಾಡಿದೆ.
ಈಗ ಸಿನಿಮಾದ ಗೆಲುವಿನ ನಂತರ ವಿಜಯ್ ಸೇತುಪತಿಯವರಿಗೆ ಸಿನಿಮಾದ ಲಾಭದಲ್ಲಿ ಒಂದು ಪಾಲನ್ನು ನೀಡಲಾಗಿದೆ ಎನ್ನುವ ವಿಷಯ ಹೊರ ಬಂದಿದೆ. ಒಂದು ಉತ್ತಮ ಪಾತ್ರಕ್ಕಾಗಿ ಸಂಭಾವನೆ ಇಲ್ಲದೇ ನಟಿಸಿದ ನಟನಿಗೆ ಈಗ ಆ ಪಾತ್ರವು ಹೆಸರಿನ ಜೊತೆಗೆ ಹಣವನ್ನು ಕೂಡಾ ತಂದುಕೊಟ್ಟಿದೆ.
Manu Bhaker: ಮನು ಈಗ ಸ್ಟಾರ್, ನಾನು ಕೆಲಸ ಇಲ್ಲದ ಕೋಚ್; ನೋವು ಹಂಚಿಕೊಂಡ ಮನು ಅವರ ಕೋಚ್