Sanvi Sudeep: ಕುತ್ತಿಗೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಕಿಚ್ಚನ ಮಗಳು ಸಾನ್ವಿ ಸುದೀಪ್; ಏನದರ ಅರ್ಥ?

Written by Soma Shekar

Published on:

---Join Our Channel---

Sanvi Sudeep: ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರ ಮಗಳು ಸಾನ್ವಿ (Sanvi Sudeep) ಅವರು ಸಿನಿಮಾ ರಂಗಕ್ಕೆ ಅಡಿಯಿಟ್ಟಿಲ್ಲವಾದರೂ ಸಿನಿಮಾ ಕಲಾವಿದರಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸೆಲೆಬ್ರಿಟಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಸಾನ್ವಿ ತಮ್ಮ ವೀಡಿಯೋಗಳನ್ನು ಶೇರ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ಸಾನ್ವಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಇದ್ದಾರೆ.

ಸಾನ್ವಿ ಅವರು ಹಾಡು ಬರೆಯುವ ಮತ್ತು ಹಾಡುವ ಹವ್ಯಾಸ ಇದ್ದು, ಸಂಗೀತದ ಕಡೆಗೆ ಒಲವನ್ನು ಹೊಂದಿದ್ದಾರೆ. ಈಗ ಇವೆಲ್ಲವುಗಳ ನಡುವೆ ಸಾನ್ವಿ ಹೊಸ ಟ್ಯಾಟೂ (Sanvi Sudeep New Tattoo) ಒಂದನ್ನು ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ. ಸಾನ್ವಿ ಹಾಕಿಸಿಕೊಂಡಿರುವ ಟ್ಯಾಟೂ ಗೆ ಒಂದು ವಿಶೇಷತೆ ಸಹಾ ಇದ್ದು, ಕಿಚ್ಚನ ಅಭಿಮಾನಿಗಳು ಈ ಟ್ಯಾಟೂವನ್ನು ನೋಡಿ ಬಹಳ ಖುಷಿಯಾಗಿದ್ದಾರೆ‌.

ಸಾನ್ವಿ ಸುದೀಪ್ ಅವರು ತಮ್ಮ ಕುತ್ತಿಗೆಯ ಮೇಲೆ ಪೀಕು (PIKU) ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಪೀಕು ಅನ್ನೋದು ಹಿಂದಿ ಸಿನಿಮಾದ ಹೆಸರು ಖಂಡಿತ ಅಲ್ಲ.‌ ಇದು ಸಾನ್ವಿ ಅವರ ತಾಯಿ ಪ್ರಿಯಾ ಸುದೀಪ್ ಅವರ ಅಡ್ಡ ಹೆಸರು ಎನ್ನಲಾಗಿದ್ದು, ಸಾನ್ವಿ ಅವರ ತಾತಾ ಪ್ರಿಯಾ ಅವರನ್ನು ಪ್ರೀತಿಯಿಂದ ಪೀಕು ಎಂದು ಕರೆಯುತ್ತಿದ್ದರಂತೆ. ಈ ಹೆಸರನ್ನ ಸಾನ್ಯಾ ಟ್ಯಾಟೂ ಹಾಕಿಸಿಕೊಂಡಿದ್ದು, ಈ ವೀಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಾನ್ವಿ ಅವರು ಇನ್ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿಕೊಂಡು, ನೀವೆಲ್ಲಾ ಏನಾದರೂ ಅಂದುಕೊಳ್ಳೋ ಮೊದಲು ನಾನೇ ಹೇಳುಬಿಡುತ್ತೇನೆ. ‘ಪೀಕು’ ಅನ್ನೋದು ಅಡ್ಡ ಹೆಸರು. ನನ್ನ ತಾಯಿಯನ್ನು ಅವರ ತಾತ ಪೀಕು ಎಂದೇ ಕರೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಸಾನ್ವಿ ಅವರಿಗೆ ತಮ್ಮ ತಾಯಿಯ ಮೇಲೆ ಇಟ್ಟಿರುವ ಪ್ರೀತಿಗೆ ನೆಟ್ಟಿಗರಿಂದ ಈಗ ಅಪಾರ ಮೆಚ್ಚುಗೆ ಹರಿದು ಬಂದಿದೆ.

Leave a Comment