Prithviraj : ಡ್ರೈವರ್ ಮಾತು ಕೇಳಿ ನೂರಾರು ಕೋಟಿ ಆಸ್ತಿ ಕಳೆದುಕೊಂಡ ಸೌತ್ ಸಿನಿಮಾಗಳ ಸ್ಟಾರ್ ನಟ

Written by Soma Shekar

Published on:

---Join Our Channel---

Prithvi Raj : ಮಲೆಯಾಳಂ ನಟ ಪೃಥ್ವಿರಾಜ್ (Prithvi Raj) ಬಹುಭಾಷಾ ನಟನಾಗಿ ಹೆಸರನ್ನು ಪಡೆದಿರುವ ಜನಪ್ರಿಯ ಸ್ಟಾರ್ ನಟ. ವಿಲನ್ ಆಗಿಯೂ, ಹೀರೋ ಆಗಿಯೂ ಸಾಕಷ್ಟು ಹೆಸರನ್ನ ಪಡೆದಿರುವ ಈ ನಟ ಬಾಲಿವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಸಾಕಷ್ಟು ಬೇಡಿಕೆ ಪಡೆದಿದ್ದ ಈ ನಟ ಕೊಂಚಕಾಲ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಅನಂತರ ನಟ ಮತ್ತೆ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಕಮ್ ಬ್ಯಾಕ್ ಮಾಡಿ ಸುದ್ದಿಯಾಗಿದ್ದಾರೆ.

ಇತ್ತೀಚಿಗೆ ಪೃಥ್ವಿರಾಜ್ ಅವರು ಅನಿಮಲ್ (Animal) ಸಿನಿಮಾದಲ್ಲಿ ಹಾಗೂ ಪ್ರಭಾಸ್ ಅಭಿನಯದ ಸಲಾರ್ (Salar) ಸಿನಿಮಾದಲ್ಲೂ ನಟಿಸಿ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಈಗ ಪೃಥ್ವಿರಾಜ್ ಅವರ ಕುರಿತಾಗಿ ಹೊಸ ವಿಷಯವೊಂದು ವೈರಲ್ ಆಗಿದೆ. ಹೌದು, ನಟ ಪೃಥ್ವಿರಾಜ್ ಅವರು ಡ್ರೈವರ್ ಮಾತು ಕೇಳಿ ನೂರಾರು ಕೋಟಿ ಆಸ್ತಿ ಮಿಸ್ ಮಾಡಿಕೊಂಡ ವಿಚಾರವನ್ನು ಶೇರ್ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಹೈದ್ರಾಬಾದ್ ನ‌ ಶಂಶಾಬಾದ್ ನಲ್ಲಿ ನೂರಾರು ಎಕರೆ ಜಮೀನನ್ನು ಕೇವಲ ಹತ್ತು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಈ ವಿಚಾರ ತಿಳಿದು ಪೃಥ್ವಿರಾಜ್ ಅವರು ತಮ್ಮ ಡ್ರೈವರ್ ಜೊತೆಗೆ ಹೋಗಿ ಸೈಟ್ ಅನ್ನು ನೋಡಿದ್ದಾರೆ. ನನಗೆ ಆ ಸೈಟ್ ಬಹಳ ಇಷ್ಟ ವಾಯಿತು. ಕೂಡಲೇ ಆ ಜಮೀನನ್ನು ಖರೀದಿ ಮಾಡಲು ನಿರ್ಧಾರವನ್ನು ಮಾಡಿದೆ.

ಆದರೆ ನನ್ನ ಡ್ರೈವರ್ ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, ಇದು ನಿರುಪಯುಕ್ತ ಜಾಗ, ಇದಕ್ಕೆ ಹತ್ತು ಲಕ್ಷ ಕೊಡೋದು ಸಹಾ ಹೆಚ್ಚು ಎಂದು ಹೇಳಿದ. ಅದಕ್ಕೆ ನಾನು ಆ ಜಮೀನನ್ನು ಖರೀದಿಸಲಿಲ್ಲ. ಇಂದು ಆ ಜಾಗದಲ್ಲಿ ಶಂಶಾಬಾದ್ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಮತ್ತು ಆ ಜಾಗದ ಮೌಲ್ಯ 100 ಕೋಟಿ ರೂ.ಗಳಿಗೂ ಅಧಿಕ ಎಂದು ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.

Leave a Comment