Dhanush Aishwarya: ಬದಲಾಗದ ಮನಸ್ಸು, 2 ವರ್ಷಗಳ ನಂತ್ರ ಕೋರ್ಟ್ ಮೆಟ್ಟಿಲೇರಿದ ರಜನೀಕಾಂತ್ ಮಗಳು ಅಳಿಯ

Written by Soma Shekar

Published on:

---Join Our Channel---

Dhanush Aishwarya: ತಮಿಳು ಸಿನಿಮಾ ರಂಗದಲ್ಲಿ ನಿರ್ದೇಶಕಿ ಆಗಿರುವ, ಹಿರಿಯ ನಟ ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ (Rajanikant) ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತು ಕಾಲಿವುಡ್ ನ ಸ್ಟಾರ್ ನಟ ಧನುಷ್ (Dhanush Aishwarya)ಇಬ್ಬರೂ ಕೂಡಾ ಪರಸ್ಪರ ದೂರವಾಗಿದ್ದಾರೆ. ಈ ಜೋಡಿ 2004 ರಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ 18 ವರ್ಷಗಳ ನಂತರ ಬೇರೆಯಾಗಲು ನಿರ್ಧಾರವನ್ನು ಮಾಡಿದ್ದರು.

ಹೌದು, 2022 ರ ಜನವರಿ ಯಲ್ಲಿ ಇವರು ವಿಚ್ಛೇದನ ಪಡೆಯುವ ವಿಚಾರವು ಸುದ್ದಿಯಾಗಿತ್ತು. ಇಬ್ಬರು ಪ್ರತ್ಯೇಕವಾಗಿದ್ದರೂ ಕೂಡಾ ವಿಚ್ಛೇದನ (Divorce) ಪಡೆದಿರಲಿಲ್ಲ. ಅಲ್ಲದೇ ರಜನೀಕಾಂತ್ ಅವರ ಮಾತುಕತೆಯ ನಂತರ ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನದ ಆಲೋಚನೆಯನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

ಒಬ್ಬರು ಮತ್ತೊಬ್ಬರ ಮೇಲೆ ಯಾವುದೇ ಆರೋಪವನ್ನು ಮಾಡಿಕೊಂಡಿಲ್ಲ. ವಿಚ್ಛೇದನ ಪಡೆಯುವ ಘೋಷಣೆಯನ್ನು ಮಾಡಿದ ನಂತರವೂ ಇಬ್ಬರೂ ಸ್ನೇಹಿತರಂತೆಯೇ ಇದ್ದಾರೆ. ಅಲ್ಲದೇ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ಈಗ ಈ ಜೋಡಿ ಕಾನೂನಿನ ರೀತಿಯಲ್ಲೇ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

ಧನುಷ್ ಮತ್ತು ಐಶ್ವರ್ಯ ಅವರು ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ, ಈ ಜೋಡಿಯ ವಿಚ್ಛೇದನದ ವಿಚಾರ ಸುದ್ದಿಯಾದಾಗ ಅಭಿಮಾನಿಗಳು ಬೇಸರವಾಗಿದ್ರು, ಅವರು ಮತ್ತೆ ಒಂದಾಗಿ ಬಾಳಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ಈಗ ಈ ಜೋಡಿ ಶಾಶ್ವತವಾಗಿ ಕಾನೂನುಬದ್ಧವಾಗಿ ಬೇರೆಯಾಗುವ ನಿರ್ಧಾರವನ್ನು ಮಾಡಿದ್ದಾರೆ.

Leave a Comment