Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕನ್ನಡ ಕಿರುತೆರೆಯಲ್ಲಿ ಸಹಾ ಹೆಸರನ್ನು ಮಾಡಿದ ನಟಿಯಾಗಿದ್ದಾರೆ. ಆದರೆ ಇತ್ತಚಿನ ವರ್ಷಗಳಲ್ಲಿ ಅವರು ತೆಲುಗಿನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಕೆಲವೇ ದಿನಗಳ ಹಿಂದೆ ನಟಿ ಪವಿತ್ರಾ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ನಂತರ ಅವರ ಆಪ್ತ, ತೆಲುಗು ಕಿರುತೆರೆಯ ನಟ ಚಂದ್ರಕಾಂತ್ ಪವಿತ್ರ ಅವರ ಅಗಲಿಕೆಯ ನೋವಿನಿಂದ ಆ ತ್ಮ ಹ ತ್ಯೆ ಗೆ ಶರಣಾಗಿದ್ದಾರೆ.
ಚಂದ್ರಕಾಂತ್ (Chandrakanth) ತೆಲುಗಿನಲ್ಲಿ ಚಂದು ಎಂದೇ ಹೆಸರಾಗಿದ್ದು, ತೆಲುಗಿನ ಸೀರಿಯಲ್ ಗಳಲ್ಲಿ ನಟಿಸುತ್ತಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದವರು. ತ್ರಿನಯನಿ ಸೀರಿಯಲ್ ನಲ್ಲಿ ಅವರು ಪವಿತ್ರಾ ಅವರಿಗೆ ತಮ್ಮನ ಪಾತ್ರದಲ್ಲಿ ಸಹಾ ನಟಿಸಿದ್ದರು. ಈಗ ಚಂದು ಸಾವಿಗೆ ಶರಣಾದ ಬೆನ್ನಲ್ಲೇ ಪವಿತ್ರ ಮತ್ತು ಚಂದು ನಡುವಿನ ಪ್ರೇಮ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿದೆ.
ಚಂದು ಮತ್ತು ಪವಿತ್ರ ಲಾಕ್ ಡೌನ್ ಸಮಯದಲ್ಲಿ ಹತ್ತಿರವಾಗಿದ್ದರು ಎನ್ನಲಾಗಿದೆ. ಚಂದುಗೆ ಅದಾಗಲೇ ಮದುವೆಯಾಗಿತ್ತು. ಶಿಲ್ಪ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದ ಚಂದು ಅನಂತರ ಪವಿತ್ರ ಅವರ ಪ್ರೀತಿಯಲ್ಲಿ ಬಿದ್ದ ಮೇಲೆ ಹೆಂಡತಿಯಿಂದ ದೂರಾಗಿದ್ದರು ಎನ್ನಲಾಗಿದೆ. ಚಂದು ಸಾವಿನ ನಂತರ ಅವರ ಪತ್ನಿ ಹಾಗೂ ತಾಯಿ ಸಹಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಂದು ಹಾಗೂ ಪವಿತ್ರ ಅವರಿಗೆ ಸೀರಿಯಲ್ ನಲ್ಲಿ ನಟಿಸುವಾಗಲೇ ಪ್ರೀತಿ ಮೂಡಿತ್ತು. ಇಬ್ಬರೂ ಸಹಾ ತಮ್ಮ ಸಂಗಾತಿಯಿಂದ ದೂರವಾಗಿ ತಾವು ಜೊತೆಯಾಗಿ ಬದುಕುವ ನಿರ್ಧಾರವನ್ನು ಮಾಡಿದ್ದರು ಎನ್ನಲಾಗಿದ್ದು, ಅಲ್ಲಿಂದ ಇವರು ಪವಿತ್ರ ಅವರ ಫ್ಲ್ಯಾಟ್ ನಲ್ಲೇ ವಾಸ ಮಾಡಲು ಶುರು ಮಾಡಿದ್ದರು. ಇವರು ತಮ್ಮ ರಿಲೇಶನ್ ಶಿಪ್ ಅನ್ನು ಸೀಕ್ರೆಟ್ ಆಗಿ ಇಡಲು ಬಯಸಿರಲಿಲ್ಲ, ಈ ವಿಚಾರದಲ್ಲಿ ಅವರು ಓಪನ್ ಆಗೇ ಇದ್ದರು.
ಶೀಘ್ರದಲ್ಲೇ ಅವರು ತಮ್ಮ ಪ್ರೀತಿಯ ವಿಚಾರವನ್ನು ಎಲ್ಲರಿಗೂ ತಿಳಿಸಿ ಮದುವೆ ಆಗಬೇಕೆಂದುಕೊಂಡಿದ್ದರು ಎನ್ನಲಾಗಿದೆ. ಆದರೆ ಈಗ ಪವಿತ್ರ ಸಾವಿನ ಬೆನ್ನಲ್ಲೇ ಅದೇ ನೋವಲ್ಲಿ ಚಂದು ಕೂಡಾ ಪವಿತ್ರ ಅವರ ಫ್ಲ್ಯಾಟ್ ನಲ್ಲೇ ಸಾವಿಗೆ ಶರಣಾಗಿದ್ದು, ಇವರ ಪ್ರೀತಿಯ ವಿಚಾರ ಈಗ ಅವರ ಮರಣದ ನಂತರ ಹೆಚ್ಚು ಸುದ್ದಿಯಾಗಿದೆ. ಇದೇ ವೇಳೆ ಚಂದು ಅವರ ಪತ್ನಿಯ ವಿಚಾರಗಳು ಮುನ್ನೆಲೆಗೆ ಬಂದಿದೆ.