Allu Arjun: ಕೇರಳದ ಭೂಕುಸಿತ ಪೀಡಿತ ವಯನಾಡು ಜಿಲ್ಲೆಯಲ್ಲಿ (Waynad Landslide) ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjuna) ದೇಣಿಗೆಯನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಜುಲೈ 30ರ ಮುಂಜಾನೆ ಸಂಭವಿಸಿದ ಭೀಕರವಾದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 219ಕ್ಕೆ ಏರಿಕೆಯಾಗಿರುವುದಾಗಿ ಕೇರಳ ರಾಜ್ಯ ಸರ್ಕಾರ ತಿಳಿಸಿದೆ.
ಈ ವಿಚಾರದ ಕುರಿತಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿರುವ ಅಲ್ಲು ಅರ್ಜುನ್ ಅವರು, ಯಾವಾಗಲೂ ತನಗೆ ಅಪಾರವಾದ ಪ್ರೀತಿಯನ್ನು ನೀಡುತ್ತಿರುವ ಕೇರಳಕ್ಕೆ (Kerala) ತನ್ನ ಕೈಲಾದಷ್ಟು ಸಹಾಯ ಮಾಡಲು ಬಯಸುವುದಾಗಿ ಹೇಳಿದ್ದಾರೆ. ವಯಡಿನಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತದಿಂದ ನಾನು ಬಹಳ ದುಃಖಿತನಾಗಿದ್ದೇನೆ. ಕೇರಳ ನನಗೆ ಯಾವಾಗಲೂ ಅಪಾರ ಪ್ರೀತಿಯನ್ನು ನೀಡಿದೆ.
ಪುನರ್ವಸತಿ ಕಾರ್ಯವನ್ನು ಬೆಂಬಲಿಸುವುದಕ್ಕಾಗಿ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡುವ ಮೂಲಕ ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ನಟ ಬರೆದುಕೊಂಡಿದ್ದಾರೆ. ವಯನಾಡಿನ ಭೂಕುಸಿತದ ವಿಚಾರವಾಗಿ ಈಗಾಗಲೇ ಒಂದಷ್ಟು ಜನ ಸೆಲೆಬ್ರಿಟಿಗಳು ತಮ್ಮ ಸಾಮರ್ಥ್ಯ ಅನುಸಾರ ದೇಣಿಗೆ.
ಶನಿವಾರ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್ ಲಾಲ್ (Mohan Lal) ಅವರು ಸೇನಾ ಸಮವಸ್ತ್ರ ಧರಿಸಿ ಭೂಕುಸಿತ ಪ್ರದೇಶಕ್ಕೆ ಭೇಟಿಯನ್ನು ನೀಡಿದ್ದರು. ಅಲ್ಲದೇ ಅವರು ಪುನರ್ವಸತಿ ಕಾರ್ಯಗಳಿಗಾಗಿ ಅವರು ಮೂರು ಕೋಟಿ ರೂಪಾಯಿಗಳ ನೆರವನ್ನ ಘೋಷಣೆ ಮಾಡಿದ್ದಾರೆ.
Lakshmi Baramma: ಕಾಪಾಡೋಕೆ ಹೋಗಿ ತಾನೇ ಬಲಿಯಾದ್ಲಾ ಕೀರ್ತಿ? ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್