Actor Chethan: ಮೋದಿ ಬಗ್ಗೆ ಪ್ರಕಾಶ್ ರೈ ವ್ಯಂಗ್ಯ ಪೋಸ್ಟ್, ಇದು ಸಣ್ಣತನ ಎಂದು ನಟ ಚೇತನ್ ದಿಟ್ಟ ಪ್ರತಿಕ್ರಿಯೆ

Written by Soma Shekar

Published on:

---Join Our Channel---

Actor Chethan : ವಿನೇಶ್ ಫೋಗಟ್ (Vinesh Phogat) ಅವರು ತನ್ನ ಹೆಚ್ಚುವರಿ ತೂಕದಿಂದಾಗಿ ಒಲಂಪಿಕ್ಸ್ ನಲ್ಲಿ (Olympics) ಅನರ್ಹತೆ ಪಡೆದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಬದಲಾಗಿದೆ. ಅದರಲ್ಲಿ ಇದಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ಟೀಕೆ ಮಾಡುವ ಒಂದು ವರ್ಗ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಕಂಡಿದ್ದು, ಈ ವೇಳೆ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ (Actor Chethan) ಅವರ ನೇರ ಮಾತು ಎಲ್ಲರ ಗಮನ ಸೆಳೆದಿದೆ.

ವಿನೇಶ್ ಫೋಗಟ್ ಅವರ ಅನರ್ಹತೆ ವಿಚಾರವಾಗಿ ನಟ ಪ್ರಕಾಶ್ ರಾಜ್ (Prakash Rai) ಅವರು ಒಂದು ಕಾರ್ಟೂನ್ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅವರು ವಿನೇಶ್ ಅವರ ತೂಕ ಹಾಕುವಾಗ ಹಿಂದಿನಿಂದ ವ್ಯಕ್ತಿಯೊಬ್ಬರು ತೂಕದ ಯಂತ್ರದ ಮೇಲೆ ಕಾಲಿಟ್ಟಿರುವ ಕಾರ್ಟೂನ್ ಹಾಕಿ ಅದು ಯಾರು ಗೆಸ್ ಮಾಡಿ ಅಂದಿದ್ದಾರೆ.

ಕಾರ್ಟೂನ್ ನಲ್ಲಿ ಇರುವುದು ಮೋದಿ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದ್ದು, ಈಗ ಇದೇ ವಿಚಾರವಾಗಿ ಚೇತನ್ (Actor Chethan) ಅವರು ಬಹಳ ನೇರವಾಗಿ ಪ್ರತಿಕ್ರಿಯೆ ನೀಡುತ್ತಾ, ವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತೆ, ಇದು ಸಣ್ಣತನ ಎಂದಿದ್ದಾರೆ.‌

ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ.
ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರ ಎಂದು ಬರೆದುಕೊಂಡಿದ್ದಾರೆ.

Lakshmi Baramma: ಕೀರ್ತಿ ಪಾತ್ರ ದಿ ಎಂಡ್ ? ಲಕ್ಷ್ಮೀ ಬಾರಮ್ಮ ಸೀರಿಯಲ್ ನ ರೋಚಕ ಶಾಕಿಂಗ್ ತಿರುವು

Leave a Comment