Aamir Khan: ಬಾಲಿವುಡ್ ನಟ ಅಮೀರ್ ಖಾನ್ (Aamir Khan) ತಮ್ಮ ಖಾಸಗಿ ಜೀವನದ ಕುರಿತಾಗಿ ಹೊರಗೆ ಅಷ್ಟಾಗಿ ಮಾತನಾಡಿದವರಲ್ಲ. ಈಗಾಗಲೇ ಎರಡು ಮದುವೆ ಆಗಿರುವ ಅವರು ಇಬ್ಬರೂ ಪತ್ನಿಯರಿಂದಲೂ ವಿಚ್ಚೇದನ ಪಡೆದಿದ್ದಾರೆ. ವಿಚ್ಚೇದನ ಆದರೂ ಸಹಾ ಮಾಜಿ ಪತ್ನಿಯರ ಜೊತೆಗೆ ಉತ್ತಮವಾದ ಸ್ನೇಹ ಸಂಬಂಧವನ್ನು ಅವರು ಮುಂದುವರೆಸಿದ್ದಾರೆ ಅನ್ನೋದು ಸತ್ಯ.
ಈಗ ನಟ ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಪಾಡ್ ಕಾಸ್ಟ್ ಆದ್ಯಾಯ್ 2 ನಲ್ಲಿ ತಮ್ಮ ಮೂರನೇ ಮದುವೆ ವಿಷಯವನ್ನು ಮಾತನಾಡಿದ್ದಾರೆ. ಮದುವೆ ಬಗ್ಗೆ ರಿಯಾ ಅಮೀರ್ ಖಾನ್ ಅವರ ಅಭಿಪ್ರಾಯ ಏನೆಂದು ಕೇಳಿದಾಗ, ನಟ ಮದುವೆಯ ಬಗ್ಗೆ ನನ್ನ ಅಭಿಪ್ರಾಯ ಕೇಳಬೇಡಿ. ನನ್ನ ಎರಡೂ ಮದುವೆಗಳು ವಿಫಲವಾಗಿದೆ ಎಂದಿದ್ದಾರೆ.
ನನ್ನಿಂದ ಮದುವೆ ಬಗ್ಗೆ ಯಾವುದೇ ಸಲಹೆ ತೆಗೆದುಕೊಳ್ಳಬೇಡಿ. ನಾನು ಒಂಟಿಯಾಗಿ ಇರೋದಕ್ಕೆ ಇಷ್ಟ ಪಡುವುದಿಲ್ಲ. ನನಗೆ ಸಂಗಾತಿ ಬೇಕು. ನಾನು ಮೊದಲ ಪತ್ನಿ ರೀನಾ ಮತ್ತು ಎರಡನೇ ಪತ್ನಿ ಕಿರಣ್ ಅವರಿಗೆ ತುಂಬಾ ಹತ್ತಿರವಾಗಿದ್ದೇನೆ. ನಾವು ಒಂದು ಕುಟುಂಬದವರಂತೆ. ಜೀವನದ ಬಗ್ಗೆ ಯಾವುದೇ ಭರವಸೆ ಇಲ್ಲ.
ನಾನು ನನ್ನ ಸ್ವಂತ ಜೀವನವನ್ನು ನಂಬುವುದಿಲ್ಲ ಅಂತಹುದರಲ್ಲಿ ಇನ್ನೊಬ್ಬರ ಜೀವನವನ್ನು ಹೇಗೆ ನಂಬುವುದು ಎಂದಿದ್ದಾರೆ. ಇನ್ನು ಮೂರನೇ ಮದುವೆ ಬಗ್ಗೆ ಹೇಳುತ್ತಾ, ನನಗೆ ಈಗಾಗಲೇ 59 ವರ್ಷವಾಗಿದೆ. ಈಗ ಹೇಗೆ ಮದುವೆಯಾಗಲಿ? ಕಷ್ಟವಾಗುತ್ತೆ. ನನಗೆ ಮಕ್ಕಳು, ಸಹೋದರರು, ಸಹೋದರಿಯರು ಇದ್ದಾರೆ, ಎಲ್ಲರೊಟ್ಟಿಗೆ ಇರುವುದು ಸಂತೋಷವಾಗಿದೆ ಎಂದಿದ್ದಾರೆ.