Abhishek Bachchan: ಆ ಕೊರತೆ ನನ್ನಲ್ಲೇ ಇತ್ತು, ದಾಂಪತ್ಯದ ಗುಟ್ಟನ್ನೇ ಹೇಳಿ ಬಿಟ್ರಾ ಅಭಿಷೇಕ್ ಬಚ್ಚನ್

Written by Soma Shekar

Published on:

---Join Our Channel---

Abhishek Bachchan: ಐಶ್ವರ್ಯ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರವು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಸಂದರ್ಭದಲ್ಲಿ ಅವರು ಬೇರೆ ಬೇರೆಯಾಗಿ ಬಂದಾಗಲೇ ಬಹಿರಂಗವಾಗಿತ್ತು. ಅಲ್ಲದೇ ಅಭಿಷೇಕ್ ಬಚ್ಚನ್ ಅವರು ವಿಚ್ಚೇದನದ ಕುರಿತಾದ ಒಂದು ಪೋಸ್ಟ್ ಅನ್ನು ಲೈಕ್ ಮಾಡಿದ್ದು ಇನ್ನಷ್ಟು ಚರ್ಚೆಗಳನ್ನು ಹುಟ್ಟು ಹಾಕಿತ್ತು.

ಸೋಶಿಯಲ್ ಮೀಡಿಯಾಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಚೇದನದ ವಿಚಾರ ಸಾಕಷ್ಟು ವೈರಲ್ ಆಗ್ತಿದೆ. ಈಗ ಈ ಎಲ್ಲಾ ಸುದ್ದಿಗಳ ನಡುವೆಯೇ ಅಭಿಷೇಕ್ ಬಚ್ಚನ್ ಅವರು ಈ ಹಿಂದೆ ಐಶ್ವರ್ಯ ರೈ ಕುರಿತಾಗಿ ಆಡಿದ್ದಂತಹ ಮಾತುಗಳ ವೀಡಿಯೋವೊಂದು ಮತ್ತೊಮ್ಮೆ ವೈರಲ್ ಆಗುತ್ತಾ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಅಂದು ಸಂದರ್ಶನದಲ್ಲಿ ಅಭಿಷೇಕ್ ಐಶ್ವರ್ಯ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತಂದರು ಎನ್ನುವ ಮಾತುಗಳನ್ನು ಹೇಳಿದ್ದರು. ಅಭಿಷೇಕ್ ಮಾತನಾಡುತ್ತಾ, ಐಶ್ವರ್ಯಾ ರೈ ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಾರೆಂದೂ, ನನಗೆ ಆತ್ಮವಿಶ್ವಾಸದ ಕೊರತೆ ಇತ್ತು ಎಂದು ನಟ ಹೇಳಿದ್ದಾರೆ. ನಾನು ಕುಟುಂಬದ ಪ್ರೀತಿಯ ಮಗ, ತಂಗಿ ಶ್ವೇತಾ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಅವರು ಮದುವೆಯಾಗುವವರೆಗೂ ನನ್ನನ್ನು ನೋಡಿಕೊಂಡಿದ್ದಾರೆ. ಆಗ ನನಗೆ ಯಾವುದೂ ಜವಾಬ್ದಾರಿ ಇರಲಿಲ್ಲ.‌ ಆದರೆ ಮದುವೆಯಾದ ನಂತರ ನಾನು ಜವಾಬ್ದಾರಿಯುತ ವ್ಯಕ್ತಿಯಾಗಬೇಕೆಂಬುದನ್ನ ಅರಿತುಕೊಂಡೆ. ನಾನು ಕುಟುಂಬದವರನ್ನ ನೋಡಿಕೊಳ್ಳಬೇಕು, ರಕ್ಷಿಸಬೇಕೆಂದುಕೊಂಡಾಗ ಐಶ್ವರ್ಯ ನನಗೆ ತುಂಬಾ ಸಹಾಯ ಮಾಡಬೇಕು.

ಐಶ್ವರ್ಯ ನನಗೆ ಸರಳವಾಗಿ ಬದುಕುವುದನ್ನ ಕಲಿಸಿದರು. ಅಲ್ಲದೇ ಅವರು ನನಗೆ ಜೀವನದ ಅನೇಕ ಸರಳ ಸಲಹೆಗಳನ್ನು ಕಲಿಸಿ ನನಗೆ ಮಾಡಿರುವಂತಹ ಉಪಕಾರವನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ, ಅದು ನನಗೆ ಸಹಾಯಕವಾಗಿದೆ ಎನ್ನುವ ಮಾತುಗಳನ್ನು ಹೇಳುತ್ತಾ ಪತ್ನಿಯನ್ನು ಹಾಡಿ ಹೊಗಳಿದ್ದರು.

Samantha: ಬಾಲಿವುಡ್ ನಟನ ಜೊತೆ ಅಂತಾ ಸೀನ್ ಗಳಲ್ಲಿ ಸಮಂತಾ; ಸುದ್ದಿ ಕೇಳಿ ಥ್ರಿಲ್ ಜೊತೆ ಶಾಕ್ ಆದ ಫ್ಯಾನ್ಸ್

Leave a Comment