Abhishek Bachchan: ಕಳೆದ ಕೆಲವು ದಿನಗಳಿಂದಲೂ ಸಹಾ ಬಾಲಿವುಡ್ ನ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯ ರೈ (Aishwarya Rai) ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ಐಶ್ವರ್ಯ ರೈ ಪರವಾಗಿ ಮಾತನಾಡುತ್ತಿದ್ದಾರೆ. ವಿಚ್ಚೇದನ ವಿಚಾರ ಅಧಿಕೃತವಾಗಿ ಹೊರಗೆ ಬಂದಿಲ್ಲವಾದರೂ ಜನರು ಈಗಾಗಲೇ ಈ ಕುರಿತು ತಮ್ಮ ನಿರ್ಧಾರಕ್ಕೆ ಬಂದಾಗಿದೆ.
ಈ ಎಲ್ಲಾ ಸುದ್ದಿಗಳು ಮತ್ತು ಚರ್ಚೆಗಳು ನಡುವೆಯೇ ಅಭಿಷೇಕ್ ಬಚ್ಚನ್ ಈಗ ತನ್ನ ಜೀವನದ ಬಗ್ಗೆ ನೀಡಿರುವಂತಹ ಒಂದು ಹೇಳಿಕೆ ಮತ್ತೆ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ ಈ ಬಾರಿ ಅವರು ತಮ್ಮ ತಂದೆಯ ಬಗ್ಗೆ ಅಭಿಷೇಕ್ ಆಡಿದಂತಹ ಮಾತು ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ. ಸಂದರ್ಶನವೊಂದರಲ್ಲಿ ಅಭಿಷೇಕ್ ಮನಸ್ಸಿನ ಮಾತನ್ನ ಹೇಳಿಕೊಂಡಿದ್ದಾರೆ.
ನಾನು ಅಮಿತಾಬ್ ಬಚ್ಚನ್ (Amitab Bachchan) ಮಗ ಎನ್ನುವ ಕಾರಣದಿಂದಾಗಿ ನನ್ನನ್ನು ಯಾರೂ ಲಾಂಚ್ ಮಾಡೋಕೆ ಸಿದ್ಧವಾಗಿರಲಿಲ್ಲ.. ಅದಕ್ಕೆ ಮೊದಲ ಸಿನಿಮಾ ಅಂದಾಗ ಅವಕಾಶಕ್ಕಾಗಿ ಬಹಳ ಕಷ್ಟ ಪಡಬೇಕಾಯಿತು. ನಾನು ವೃತ್ತಿ ಜೀವನವನ್ನು ಆರಂಭ ಮಾಡೋದಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದೇನೆ ಅದಕ್ಕೆ ಕಾರಣ ಅಮಿತಾಬ್ ಪುತ್ರ ಅನ್ನೋದೇ ಆಗಿತ್ತು ಎಂದಿದ್ದಾರೆ ಅಭಿಷೇಕ್ ಬಚ್ಚನ್.
ಅಮಿತಾಬ್ ಪುತ್ರನಾದರೂ ಸಹಾ ಅಭಿಷೇಕ್ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗುವುದು ಸಾಧ್ಯವಾಗಲಿಲ್ಲ ಅನ್ನೋದು ಸತ್ಯವಾದ ವಿಚಾರವಾಗಿದೆ. ಬಾಲಿವುಡ್ ನಲ್ಲಿ ಅಭಿಷೇಕ್ ಬಚ್ಚನ್ ಹೀರೋ ಮಾತ್ರವೇ ಅಲ್ಲದೇ ಬಹುತಾರಾಗಣದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಲೋ ಹೀರೋ ಆಗಿ ಅವರಿಗೆ ಗೆಲುವು ಸಿಕ್ಕಿದ್ದು ಕೆಲವೇ ಸಿನಿಮಾಗಳಲ್ಲಿ ಮಾತ್ರ.
Prabhas: ಪ್ರಭಾಸ್ ಗೆ ನಾಯಕಿ ಈ ಪಾಕಿಸ್ತಾನಿ ನಟಿ, ನಮ್ಮಲ್ಲಿ ನಟಿಯರೇ ಇಲ್ವಾ ಅಂದ್ರು ನೆಟ್ಟಿಗರು, ಏನಿದು ಸುದ್ದಿ?