Amruthadhaare : ಕಿರುತೆರೆಯ ಜನಪ್ರಿಯ ಸೀರಿಯಲ್ ಅಮೃತಧಾರೆ (Amruthadhaare) ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದ್ಧು, ಸೀರಿಯಲ್ ನಲ್ಲಿನ ಇತ್ತೀಚಿನ ಟ್ವಿಸ್ಟ್ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ನಾಯಕ ಗೌತಮ್ ತಮ್ಮ ತಾಯಿಯನ್ನು ಬೇಗ ನೋಡುವಂತೆ ಆಗಲಿ ಅಂತ ಅನೇಕರು ಕಾಮೆಂಟ್ ಗಳನ್ನು ಸಹಾ ಮಾಡ್ತಿದ್ದು, ಯಾವಾಗ ಆ ದೃಶ್ಯ ಬರುತ್ತೆ ಅಂತ ಕಾಯ್ತಿದ್ದಾರೆ.
ತಾಯಿ ತಂಗಿ ಬದುಕಿದ್ದಾರೆ, ಬರ್ತಾರೆ ಅಂತ ಸಾಕಷ್ಟು ನಿರೀಕ್ಷೆಯಲ್ಲಿದ್ದ ಗೌತಮ್ ಗೆ ಜೈ ಮಾಡಿದ ಕುತಂತ್ರದಲ್ಲಿ ಪೋಲಿಸ್ ಅಧಿಕಾರಿ ಗೌತಮ್ (Goutham) ಅವರ ತಾಯಿ ತಂಗಿ ಮೂರು ವರ್ಷಗಳ ಹಿಂದೆಯೇ ಸತ್ತು ಹೋದ್ರು ಅಂತ ಹೇಳಿದ ಮೇಲೆ ಗೌತಮ್ ಕುಗ್ಗಿ ಹೋಗಿದ್ರು. ಇದೆಲ್ಲವುಗಳ ನಡುವೆ ಶಕುಂತಲಾ ಕೈಯಲ್ಲಿ ತಿಥಿ ಕಾರ್ಯ ಮಾಡಿಸಿದ್ದಾರೆ.
ಇದೇ ವೇಳೆ ಮನೆ ಸುಟ್ಟು ಹೋದ ಸುಧಾ (Sudha), ಭೂಮಿಕಾ ಮಾತಿನಂತೆ ಅಮ್ಮ ಮತ್ತು ಮಗಳ ಜೊತೆಗೆ ದಿವಾನ್ ಮನೆಗೆ ಬಂದಿದ್ದಾರೆ. ಗೌತಮ್ ಅವರ ತಾಯಿ ತಮ್ಮದೇ ಮನೆಯ ಹೊರಗೆ ಕೂತಿದ್ದಾರೆ. ಸುಧಾ ಮಗಳನ್ನ ನೋಡಿದ ಗೌತಮ್ ಅವಳ ಜೊತೆ ಹೋಗಿ ತಮ್ಮ ತಾಯಿಯನ್ನ ಊಟಕ್ಕೆ ಕರ್ಕೊಂಡು ಬಂದು ಕೂರ್ಸಿದ್ದಾರೆ.
ಆದರೆ ಮುಖ ಸರಿಯಾಗಿ ಕಾಣದ ಗೌತಮ್ ಗೆ ಅವರೇ ತಮ್ಮ ತಾಯಿ ಅನ್ನೋದು ಗೊತ್ತಾಗಿಲ್ಲ.. ಪ್ರೇಕ್ಷಕರು ಪ್ರೊಮೊ ನೋಡಿ ಕೊನೆ ಪಕ್ಷ ಈಗಲಾದ್ರು ಗೌತಮ್ ಗೆ ತಾಯಿನ ನೋಡೋ ಭಾಗ್ಯ ಸಿಕ್ಕೋ ಹಾಗೆ ಆಗ್ಲಿ ಅಂತಿದ್ದಾರೆ. ಪ್ರೇಕ್ಚಕರ ಆಸೆ ಈಡೇರುತ್ತಾ ಕಾದು ನೋಡಬೇಕಾಗಿದೆ.
Bigg Boss : ವೈಯಕ್ತಿಕವಾಗಿ ಆಡೋಕೆ ತಾಕತ್ತಿಲ್ವಾ? ಎದುರಾಳಿಗಳಿಗೆ ರಜತ್ ಓಪನ್ ಚಾಲೆಂಜ್