Pushpa 2 : ಬಿಡುಗಡೆಗೆ ಮೊದಲೇ ದಾಖಲೆ, ಪುಷ್ಪ 2 ಮುಂಗಡ ಬುಕ್ಕಿಂಗ್ ನಲ್ಲಿ ಟಿಕೆಟ್ ಮಾರಾಟದ ಬಿರುಗಾಳಿ

Written by Soma Shekar

Updated on:

---Join Our Channel---

Pushpa 2 : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೋಡಿಯಾಗಿ ನಟಿಸುರುವ ಪುಷ್ಪ 2 (Pushpa 2) ಸಿನಿಮಾದ ಬಿಡುಗಡೆಗೆ ಇನ್ನು ಕೆಲವು ದಿನಗಳು ಮಾತ್ರವೇ ಉಳಿದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿರುವ ಸಿನಿಮಾದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದು, ಈಗ ಸಿನಿಮಾ ಬಿಡುಗಡೆಗೆ ಮೊದಲೇ ಒಂದು ಹೊಸ ದಾಖಲೆಯನ್ನು ಬರೆದಿದೆ. ‌

ಪುಷ್ಪ 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ನಂತರ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿದೆ. ಹಿಂದಿ ಭಾಷಿಗರು ಸಹಾ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಪುಷ್ಪ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿ ಬಿರುಗಾಳಿಯನ್ನು ಎಬ್ಬಿಸಿದೆ.

ಹೌದು, ಪುಷ್ಪ 2 ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ ಹತ್ತು ಗಂಟೆಗಳ ಅವಧಿಯಲ್ಲೇ ಬರೋಬ್ಬರಿ 55 ಸಾವಿರ ಟಿಕೆಟ್ ಗಳು ಮಾರಾಟವಾಗಿದ್ದು, ನೂತನ ದಾಖಲೆಯನ್ನು ಬರೆದಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.

ವಿಶ್ವದಾದ್ಯಂತ ಒಟ್ಟು 12 ಸಾವಿರ ಸ್ಕ್ರೀನ್‌ ಗಳಲ್ಲಿ ಪುಷ್ಪ 2 ಸಿನಿಮಾ ಬಿಡುಗಡೆ ಆಗಲಿದ್ದು, ಟಿಕೆಟ್ ಬುಕ್ಕಿಂಗ್ ಎಲ್ಲಾ ಕಡೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ತೆಲಂಗಾಣದಲ್ಲಿ ಡಿಸೆಂಬರ್ 4 ರ ರಾತ್ರಿ ಮೂರು ಗಂಟೆಗೆ ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

Amruthadhaare : ಅವರಿಗೊಂದು ಗತಿ ಕಾಣಿಸ್ತೀನಿ; ಮತ್ತೆ ಬಾಲ ಬಿಚ್ಚಿದ ಜೈದೇವ್, ಮತ್ತೊಂದು ಹೊಸ ಟ್ವಿಸ್ಟ್

Leave a Comment