Lakshmi Nivasa ಇದ್ದಕ್ಕಿದ್ದ ಹಾಗೆ ಲಕ್ಷ್ಮೀ ನಿವಾಸದಿಂದ ಹೊರ ಬಂದ ಬಾಲ ನಟಿ, ಬಾಲನಟಿ ಹೇಳಿದ್ದೇನು?

Written by Soma Shekar

Published on:

---Join Our Channel---

Lakshmi Nivasa : ಲಕ್ಷ್ಮೀ ನಿವಾಸ (Lakshmi Nivasa) ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ಮತ್ತು ಟಾಪ್ ಐದರಲ್ಲಿ ಸದಾ ಎರಡು ಅಥವಾ ಒಂದನೇ ಸ್ಥಾನದಲ್ಲಿ ಮಿಂಚುತ್ತಿರುವ ಸೀರಿಯಲ್ ಸಹಾ ಹೌದು. ಇದೇ ಸೀರಿಯಲ್ ನಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡವರು ನಿಶಿತಾ ಲಕ್ಷ್ಮೀ (Nishita Lakshmi). ಲಕ್ಷ್ಮೀ ನಿವಾಸದಲ್ಲಿ ಖುಷಿ ಎನ್ನುವ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ಈ ಬಾಲನಟಿ ಪ್ರೇಕ್ಷಕರ ಮನಸ್ಸನ್ನು ಸಹಾ ಗೆದ್ದಿದ್ದರು.

ಆದರೆ ಈಗ ನಿಶಿತಾ ಮಾಡುತ್ತಿದ್ದ ಖುಷಿ ಪಾತ್ರಕ್ಕೆ ಬೇರೊಬ್ಬ ಬಾಲನಟಿಯ ಎಂಟ್ರಿ ಆಗಿದೆ. ಇವತ್ತಿನ ಎಪಿಸೋಡ್ ನೋಡಿದ ಪ್ರೇಕ್ಷಕರಿಗೆ ಇದು ಅಚ್ಚರಿಯನ್ನು ಉಂಟು ಮಾಡಿದೆ. ಇದ್ದಕ್ಕಿದ್ದ ಹಾಗೆ ಖುಷಿ ಪಾತ್ರದಲ್ಲಿ ಆಗಿರುವ ಬದಲಾವಣೆ ಕಂಡು ಶಾಕ್ ಆಗಿದ್ದಾರೆ. ಇಷ್ಟ ದಿನ ಆ ಪಾತ್ರದಲ್ಲಿ ಇದ್ದ ಬಾಲನಟಿಯನ್ನು ಅನೇಕರು ಮಿಸ್ ಮಾಡಿಕೊಂಡಿದ್ದಾರೆ.

ಎಪಿಸೋಡ್ ಗೆ ಮೊದಲು ವಾಹಿನಿ ಶೇರ್ ಮಾಡಿದ್ದ ಪ್ರೊಮೊ ನೋಡಿ ಕೂಡಾ ಅನೇಕರು ನಿಶಿತಾ ಆ ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗಿದ್ರು, ಈಗ ಈ ಬದಲಾವಣೆ ಒಪ್ಪಿಕೊಳ್ಳೋದಕ್ಕೆ ಕೆಲವು ದಿನ ಬೇಕು ಎಂದಿದ್ದಾರೆ. ನಿಶಿತಾ ತಾವು ಸೀರಿಯಲ್ ಬಿಟ್ಟಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಿಶಿತಾ ಕಾರಣವನ್ನು ವಿವರಿಸಿಲ್ಲವಾದರೂ ತಾನೇ ಸೀರಿಯಲ್ ಬಿಟ್ಟಿರುವುದಾಗಿ ಮಾಹಿತಿ ಶೇರ್ ಮಾಡಿದ್ದಾರೆ. ನಿಶಿತಾ ಈಗಾಗಲೇ ಯೂಟ್ಯೂಬ್ ನಲ್ಲಿ ಎರಡು ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ ಗಳನ್ನು ಪಡೆದಿದ್ದಾರೆ. ಇನ್ಸ್ಟಾಗ್ರಾಂ ನಲ್ಲೂ ಒಂದು ಮಿಲಿಯನ್ ಫಾಲೋಯರ್ಸ್ ಗಳನ್ನ ಹೊಂದಿದ್ದು, ಇತ್ತೀಚಿಗೆ ಆ ಖುಷಿಯನ್ನು ಪಾರ್ಟಿ ಮಾಡಿ ಸಂಭ್ರಮಿಸಿದ್ದರು.

Shobha Shetty : ಅಡಗಿದ ಸದ್ದು, ಎನರ್ಜಿ ಡಲ್, ಎರಡೇ ವಾರಕ್ಕೆ ವೈಲ್ಡ್ ಕಾರ್ಡ್ ಶೋಭಾ ಶೆಟ್ಟಿ ಜರ್ನಿ ಮುಗಿಯುತ್ತಾ

Leave a Comment