Lakshmi Nivasa : ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಇತ್ತೀಚಿಗೆ ಬರೀ ಕಣ್ಣೀರು, ನೋವು, ದುಃಖ ಇಂತದ್ದೇ ದೃಶ್ಯಗಳನ್ನ ನೋಡಿ ನೋಡಿ ಬೇಸತ್ತಿದ್ದ ಪ್ರೇಕ್ಷಕರಿಗೆ ಇಂದಿನ ಎಪಿಸೋಡ್ ಖಂಡಿತ ಖುಷಿಯನ್ನ ನೀಡಲಿದೆ ಎನ್ನುವುದು ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೊ ಮತ್ತು ಆ ಪ್ರೊಮೊಗೆ ನೆಟ್ಟಿಗರು ಮಾಡಿದ ಕಾಮೆಂಟ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸೀರಿಯಲ್ ನಲ್ಲಿ ಹೊಸ ತಿರುವೊಂದು ಕಂಡಿದೆ, ಭಾವನಾ (Bhavana) ಬಾಳಿನಲ್ಲಿ ಸಂತೋಷದ ದಿನಗಳು ಇನ್ಮುಂದೆ ಬರಲಿದೆ ಅನ್ನೋ ಸುಳಿವನ್ನ ನೀಡಿದೆ.
ಮನೆಯವರ ಇಷ್ಟದ ವಿರುದ್ಧ, ಭಾವನಾಗೂ ತಿಳಿಯದ ಹಾಗೆ ತಾಳಿಯನ್ನ ಕಟ್ಟಿದ್ದ ಸಿದ್ಧೇಗೌಡ್ರು ಸತ್ಯ ಹೇಳಿದ ನಂತರ ಎಲ್ಲರಿಗೂ ದೊಡ್ಡ ಶಾಕ್ ಅನ್ನ ನೀಡಿತ್ತು. ಅಲ್ಲದೇ ಭಾವನಾ ಸಿದ್ಧ ಮನೆಗೆ ಬಂದ್ಮೇಲೆ ಅಲ್ಲಿ ಪ್ರತಿ ದಿನ ಕೂಡಾ ಬರೀ ನೋವು ಮತ್ತು ಅಪಮಾನಗಳನ್ನ ಎದುರಿಸೋ ಹಾಗೆ ಆಗಿತ್ತು. ಮಾವನ ಕಟು ನುಡಿ, ಅತ್ತೆಯ ನಿರ್ಲಕ್ಷ್ಯದ ಮಾತುಗಳು, ನಾದಿನಿಯ ಚುಚ್ಚು ಮಾತುಗಳಿಗೆ ಭಾವನಾ ನೋವು ಪಡ್ತಿದ್ಲು..
ಅತ್ತೆ ಮನೆಯಲ್ಲಿ ತಾನು ಇದ್ರೂ ಇಲ್ಲದ ಹಾಗೆ ಅವಳ ಜೀವನ ನಡೀತಿತ್ತು. ಆದ್ರೆ ಈಗ ಅದು ಬದಲಾಗೋ ಸಮಯ ಬಂದ ಹಾಗೆ ಕಾಣ್ತಿದೆ. ಜೌದು, ಜವರೇಗೌಡರ (Javare Gowda) ಮನೆಗೆ ಸ್ವಯಂ ಪ್ರೇರಣೆಯಿಂದ ಬಂದಿರುವ ಗುರೂಜಿಗಳು ಜವರೇಗೌಡ ಮತ್ತು ಮನೆಯವರ ಕಣ್ತೆರೆಸುವಂತಹ ಮಾತುಗಳನ್ನ ಆಡಿದ್ದಾರೆ. ಭಾವನಾ ಆ ಮನೆಗೆ ಅದೃಷ್ಟವನ್ನು ತಂದಿದ್ದಾಳೆ ಅಂತಾನೂ ಹೇಳಿದ್ದಾರೆ.
ಗುರುಗಳು ಭಾವನಾ ನಿಮ್ಮ ಮನೆಗೆ ಅದೃಷ್ಟವನ್ನ ತಂದಿದ್ದಾಳೆ. ನಿಮ್ಮ ಗೆಲುವಿಗೆ ಈ ಹುಡುಗೀನೇ ಕಾರಣ, ಈ ಹುಡುಗಿಯ ಕಾಲ್ಗುಣದಿಂದ ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗುತ್ತೆ. ಇದು ಸತ್ಯ. ಈ ಅದೃಷ್ಟ ನಿಮ್ಮ ಮನೆಯಿಂದ ಹೊರಗೆ ಹೋದ್ರೆ ನತದೃಷ್ಟ ನಿಮ್ಮ ಎದುರು ಬಂದು ನಿಲ್ಲುತ್ತೆ ಎಚ್ಚರ ಅಂತ ಜವರೇಗೌಡ ನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಾದ ಮೇಲೆ ಜವರೇಗೌಡನ ಮನಸ್ಸು ಭಾವನಾ ಬಗ್ಗೆ ಬದಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
BBK 11 : ಪಾಸಿಟಿವ್ ಗೌತಮಿ ಪರ ನಿಂತು ಪಕ್ಷಪಾತ ಮಾಡಿದ ಮಂಜು? ಬಿಗ್ ಬಾಸ್ ಮನೆಯ ನಾಮಿನೇಷನ್ ಲೆಕ್ಕಾಚಾರ