Lakshmi Baramma : ಬಂದವಳು ಕೀರ್ತಿ ಅಲ್ವಾ? ಹೊಸ ಟ್ವಿಸ್ಟ್ ನೋಡಿ ಕನ್ಪ್ಯೂಸ್ ಆಗಿ ತಲೆ ಕೆರ್ಕೊಂಡ ವೀಕ್ಷಕರು

Written by Soma Shekar

Published on:

---Join Our Channel---

Lakshmi Baramma : ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಇತ್ತೀಚಿನ ಟ್ವಿಸ್ಟ್ ಗಳ ಮೂಲಕ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನ ಮಾಡಿದೆ. ದಿನಕ್ಕೊಂದು ತಿರುವು ಎನ್ನುವಂತೆ ಕಥೆಯಲ್ಲಿ ತಿರುವುಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಅದರಲ್ಲೂ ಕಾವೇರಿಯ ಕುತಂತ್ರದಿಂದ ಕೀರ್ತಿ ಬೆಟ್ಟದ ಮೇಲಿಂದ ಬಿದ್ದು ಕಾಣೆಯಾದ ಮೇಲೆ ಲಕ್ಷ್ಮಿ ಕೀರ್ತಿಯಂತೆ ನಟನೆ ಮಾಡುವ ಮೂಲಕ ಸತ್ಯವನ್ನು ಹೊರಗೆ ತರುವ ಪ್ರಯತ್ನವನ್ನು ಮಾಡಿದಳು.

ಈಗ ಲಕ್ಷ್ಮಿ (Lakshmi) ಕಾಣೆಯಾಗಿದ್ದಾಳೆ. ಅದೇ ವೇಳೆ ಕೀರ್ತಿ (Keerthy) ಎಂಟ್ರಿ ಯನ್ನ ಕೊಟ್ಟಿದ್ದಾಳೆ. ಆದರೆ ಅವಳ ವಿಚಿತ್ರ ವರ್ತನೆಯನ್ನು ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದ್ದಾರೆ. ಕಥೆಯಲ್ಲಿ ಇದ್ಯಾವ ಹೊಸ ತಿರುವು ಅಂತ ಪ್ರೇಕ್ಷಕರು ಗೊಂದಲಕ್ಕೆ ಈಡಾಗಿದ್ದಾರೆ. ಲಕ್ಷ್ಮೀ ಸತ್ತು ಹೋದಳು ಅನ್ಕೊಂಡು ವೈಷ್ಣವ್ ಮನೆಯಲ್ಲಿ ಶೋಕಾಚರಣೆ ಮಾಡುವಾಗಲೇ ಕೀರ್ತಿ ಎಂಟ್ರಿಯನ್ನು ಕೊಟ್ಟಿದ್ದಾಳೆ.

ಕೀರ್ತಿ ಹೇಳಿದ ಮಾತುಗಳು, ನೀಡಿದ ಸಾಕ್ಷಿಗಳ ನಂತರ ಕಾವೇರಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಕಾವೇರಿ ಬಾಯಿಂದ ಸತ್ಯವನ್ನ ಹೊರತೆಗೆಸುವ ಪ್ರಯತ್ನವನ್ನ ಮಾಡಲಾಗುತ್ತಿದೆ. ಕೀರ್ತಿ ಮರಳಿ ಬಂದಳು ಅಂತ ಪ್ರೇಕ್ಷಕರು ತಿಳಿಯುವಾಗಲೇ ಬಂದಿರುವವಳು ಕೀರ್ತಿ ಅಲ್ಲ ಅನ್ನೋ ರೀತಿಯಲ್ಲಿ ಒಂದಷ್ಟು ಸುಳಿವುಗಳನ್ನು ನೀಡಲಾಗಿದೆ. ಇದನ್ನು ನೋಡಿ ಪ್ರೇಕ್ಷಕರು ಇನ್ನಷ್ಟು ಗೊಂದಲದಲ್ಲಿದ್ದಾರೆ.

ಇವೆಲ್ಲವುಗಳ ನಡುವೆ ಕೀರ್ತಿ ಬ್ಯಾಗಿನಿಂದ ಬೊಂಬೆಯನ್ನು ತೆಗೆದು ಅದರಂತೆ ತಲೆ ಆಡಿಸಿದ್ದಾಳೆ.. ಆ ಗೊಂಬೆ ಲಕ್ಷ್ಮಿಯ ಪ್ರೀತಿಯ ರಾಣಿ ಗೊಂಬೆ. ಅದನ್ನ ತೆಗೆದುಕೊಳ್ಳಲು ಹೋಗಿ ಅವಳು ರಾವಣನ ಜೊತೆ ದಹನವಾದಳು ಅನ್ನೋ ರೀತಿ ತೋರಿಸಲಾಗಿತ್ತು. ಆದರೆ ಲಕ್ಷ್ಮೀ ಸತ್ತಿಲ್ಲ ಅವಳ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದು, ಕೀರ್ತಿ ರೀತಿಯಲ್ಲಿ ಕರೆದುಕೊಂಡು ಬರಲಾಗಿದೆ. ಇದರಲ್ಲಿ ಸುಪ್ರೀತ ಕೈವಾಡ ಇದ್ಯಾ ಅಂತ ಒಂದಷ್ಟು ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿದೆ.

ಇದನ್ನೆಲ್ಲಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದು, ಕೀರ್ತಿ ಇಲ್ಲದೇ ಇರುವಾಗ ಲಕ್ಷ್ಮಿ ಕೀರ್ತಿ ತರ ಆಡ್ತಿದ್ಲು. ಈಗ ಕೀರ್ತಿ ಬಂದ್ಲು ಅನ್ಕೊಂಡ್ರೆ ಅವಳು ಲಕ್ಷ್ಮೀ ತರ ಆಡೋಕೆ ಶುರು ಮಾಡಿದ್ದಾಳೆ ಎಂಥ ಕರ್ಮ ಗುರು ಅಂತ ಕಮೆಂಟ್ ಮಾಡಿದ್ದಾರೆ. ಇನ್ನು ವೈಷ್ಣವ್ ದಡ್ಡನ ತರ ಆಡೋದು ನಿಲ್ಸಲ್ವಾ ಎಂದು ಸಹಾ ಟೀಕೆ ಮಾಡ್ತಿದ್ದಾರೆ.

BBK 11 : ಮೋಕ್ಷಿತಾ ತ್ರಿವಿಕ್ರಮ್ ನಡುವೆ ಮತ್ತೆ ಮಾತಿನ ಕಾಳಗ, ಎರಡು ತಲೆ ನಾಗರಹಾವು ಅಂತ ಹೊರ ಬಿತ್ತು ಆಕ್ರೋಶ

Leave a Comment