Serials Trend: ಕಿರುತೆರೆಯಲ್ಲಿ ಸೀರಿಯಲ್ ಗಳಲ್ಲಿ ಇತ್ತೀಚಿಗೆ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರ ಕುತೂಹಲ ಕೆರಳಿಸುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಈಗ ಸೀರಿಯಲ್ ಗಳಲ್ಲಿ ಒಂದು ಹೊಸ ಟ್ರೆಂಡ್ (Serials Trend) ಕೂಡಾ ಆರಂಭವಾಗಿದೆ. ಅದುವೇ ದ್ವಿಪಾತ್ರ ಅಥವಾ ಡಬಲ್ ರೋಲ್ ಟ್ರೆಂಡ್. ಬಹಳಷ್ಟು ಜನ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಇದೇ ವಿಚಾರವನ್ನು ಕಾಮೆಂಟ್ ಗಳಲ್ಲಿ ಹೇಳುತ್ತಿದ್ದಾರೆ ಅನ್ನೋದು ನಿಜವಾಗಿದೆ. ಜನಪ್ರಿಯ ಸೀರಿಯಲ್ ಗಳಲ್ಲಿ ಡಬಲ್ ರೋಲ್ ಅನ್ನೋದು ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿಯನ್ನ ಮೂಡಿಸುತ್ತಿದೆ.
ಕಲರ್ಸ್ ವಾಹಿನಿಯ ರಾಮಾಚಾರಿ (RAMACHARI) ಸೀರಿಯಲ್ ನಲ್ಲಿ ನಾಯಕನ ತಮ್ಮ ಕೃಷ್ಣನ ಸ್ಟೋರಿ ಬಂದಾಗ ಅಲ್ಲಿ ನಾಯಕನ ಇನ್ನೊಂದು ಪಾತ್ರದ ಎಂಟ್ರಿ ಆಗಿತ್ತು. ಆಗ ದ್ವಿಪಾತ್ರವನ್ನು ನೋಡಿದ ಕಿರುತೆರೆಯ ಪ್ರೇಕ್ಷಕರು ಖುಷಿಯಾಗಿದ್ದರು. ಅದಾದ ನಂತರ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಡಬಲ್ ರೋಲ್ ಎಂಟ್ರಿಯಾಗಿತ್ತು.
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಪ್ರಮುಖ ಪಾತ್ರ ಬಂಗಾರಮ್ಮನ ತಂಗಿ ವಿಲನ್ ಸಿಂಗಾರಮ್ಮನ ಎಂಟ್ರಿ ಆಯಿತು.. ಸಿಂಗಾರಮ್ಮನ ಆಟ ಕಟ್ಟಿಸುವ ಪ್ರಯತ್ನದಲ್ಲಿ ಸ್ನೇಹಾ ಪಾತ್ರವು ಮುಕ್ತಾಯವಾಯಿತು.. ಈಗ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಕೀರ್ತಿ ಪಾತ್ರದ ಜಾಗಕ್ಕೆ ಅದೇ ರೀತಿ ಕಾಣುವ ಇನ್ನೊಬ್ಬಳ ಆಗಮನ ಆಗಿದೆ. ಇದು ಕೂಡಾ ದ್ವಿಪಾತ್ರ ಇರಬಹುದು ಎನ್ನುವ ಅನುಮಾನ ಮೂಡಿದೆ.
ಇನ್ನು ಸೀತಾರಾಮ (SeethaRama) ಸೀರಿಯಲ್ ನಲ್ಲಿ ಸಿಹಿಯ ಅವಳಿ ಸಹೋದರಿಯ ಎಂಟ್ರಿ ಆಗಿದೆ. ಅಲ್ಲಿಗೆ ಈ ಸೀರಿಯಲ್ ನಲ್ಲಿ ಸಹಾ ಡಬಲ್ ರೋಲ್ ಕಥೆ ಇನ್ಮುಂದೆ ನಡೆಯಲಿದೆ ಎನ್ನುವುದು ಖಚಿತವಾಗಿದೆ. ಇವೆಲ್ಲವುಗಳ ನಂತರ ಈಗ ಕಾವೇರಿ ಕನ್ನಡ ಮೀಡಿಯಂ ನಲ್ಲೂ ಕಾವೇರಿ ತರ ಕಾಣೋ ಇನ್ನೊಂದು ಪಾತ್ರ ಎಂಟ್ರಿ ಕೊಟ್ಟಿದೆ. ಇಲ್ಲಿ ಕೂಡಾ ಡಬಲ್ ರೋಲ್ ಬಂತಾ ಅಂತಿದ್ದಾರೆ ಪ್ರೇಕ್ಷಕರು.
Lakshmi Nivasa: ಸ್ವಾರ್ಥಕ್ಕಾಗಿ ಕೂಡು ಕುಟುಂಬ ಒಡೆದ ಹಿರಿ ಮಗ; ಇಂತ ಮಗ ಇರೋದೇ ಬೇಡ ಎಂದ ನೆಟ್ಟಿಗರು