Nisha Ravikrishnan: ನಾನು ಮೂಲತಃ ಕನ್ನಡದವಳಲ್ಲ ಎಂದು ಫ್ಯಾನ್ಸ್ ಗೆ ಶಾಕ್ ಕೊಟ್ಟ ರೌಡಿ ಬೇಬಿ ಅಮೂಲ್ಯ

Written by Soma Shekar

Published on:

---Join Our Channel---

Nisha Ravikrishnan : ಕಿರುತೆರೆಯಲ್ಲಿ ಪ್ರಸಾರ ಕಂಡು ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದ್ದ ಗಟ್ಟಿಮೇಳದಲ್ಲಿ (Gattimela) ನಾಯಕಿ ಅಮೂಲ್ಯ ಪಾತ್ರದ ಮೂಲಕ ನಿಶಾ ರವಿ ಕೃಷ್ಣನ್ (Nisha Ravikrishnan) ಜನಪ್ರಿಯತೆಯನ್ನು ಪಡೆದುಕೊಂಡ ನಟಿ. ಈ ಸೀರಿಯಲ್ ನಿಂದ ಪಡೆದುಕೊಂಡ ಜನಪ್ರಿಯತೆಯಿಂದ ನಿಶಾ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡಿದರು. ಅದು ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲಿ ಕೂಡಾ ಸೀರಿಯಲ್ ಗಳಲ್ಲಿ ನಟಿಸುವ ಮೂಲಕ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಈ ನಟಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಗಟ್ಟಿಮೇಳ ಸೀರಿಯಲ್ ನಂತರ ನಿಶಾ ರವಿಕೃಷ್ಣನ್ ಇದೀಗ ಅಣ್ಣಯ್ಯ (Annaiah Serial) ಸೀರಿಯಲ್ ನಲ್ಲಿ ನಾಯಕಿಯಾಗುವ ಮೂಲಕ ಮತ್ತೆ ಕನ್ನಡ ಕಿರಿಕಿರಿಯ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮುಂದಿನ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಟಿ ತೊಡಗಿಕೊಂಡಿದ್ದು, ಅದರ ಭಾಗವಾಗಿ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಾನು ಮೂಲತಃ ಕನ್ನಡದವಳಲ್ಲ ಎನ್ನುವ ಆಶ್ಚರ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಿಶಾ ರವಿಕೃಷ್ಣನ್ ಅವರು ತಾವು ಮೂಲತಃ ಮಲೆಯಾಳಿ, ಆದರೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಆದ್ದರಿಂದಲೇ ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತೇನೆ. ಇದರಿಂದಾಗಿ ಎಲ್ಲರೂ ನನ್ನನ್ನು ಕನ್ನಡದ ಹುಡುಗಿ ಎಂದುಕೊಳ್ಳುತ್ತಾರೆ ಎನ್ನುವ ಮಾತುಗಳನ್ನ ಹೇಳಿದ್ದಾರೆ. ನಟಿ ತಾವು ಮಲಯಾಳಿ ಎಂದು ಹೇಳಿದ ಮಾತನ್ನು ಕೇಳಿ ನೆಟ್ಟಿಗರು ಕೂಡಾ ಅಚ್ಚರಿಪಟ್ಟಿದ್ದಾರೆ.

ಪ್ರಸ್ತುತ ನಟಿ ಅಂಶು ಹೆಸರಿನ ಸೈಕ್ಯಾಡಿಲಿಕ್ ಥ್ರಿಲ್ಲರ್ ನಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ನಟಿಯ ಲುಕ್ ಕೂಡಾ ಬಹಳ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಪೋಸ್ಟರ್ ಗಳು ಬಿಡುಗಡೆಯಾಗಿದ್ದು ಸಿನಿ ಪ್ರೇಮಿಗಳ ಮೆಚ್ಚುಗೆಯನ್ನ ಪಡೆದುಕೊಂಡಿದೆ. ಮತ್ತೊಂದು ಕಡೆ ಅಣ್ಣಯ್ಯ ಸಿರಿಯಲ್ ನ ಪಾರ್ವತಿ ಪಾತ್ರದ ಮೂಲಕ ನಟಿ ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ.

Bhagya Lakshmi : ನಮಗೆ ವಾಕರಿಕೆ ಬರ್ತಿದೆ; ಭಾಗ್ಯ ಗೋಳಾಡೋ ದೃಶ್ಯಗಳನ್ನು ನೋಡಿ ಸಿಟ್ಟಾದ ವೀಕ್ಷಕರು

Leave a Comment