Bhagya Lakshmi : ನಮಗೆ ವಾಕರಿಕೆ ಬರ್ತಿದೆ; ಭಾಗ್ಯ ಗೋಳಾಡೋ ದೃಶ್ಯಗಳನ್ನು ನೋಡಿ ಸಿಟ್ಟಾದ ವೀಕ್ಷಕರು

Written by Soma Shekar

Published on:

---Join Our Channel---

Bhagya Lakshmi : ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಭಾಗ್ಯಲಕ್ಷ್ಮೀ (Bhagya Lakshmi) ಸೀರಿಯಲ್ ಸಹಾ ಒಂದಾಗಿದೆ. ಈ ಸೀರಿಯಲ್ ಕೆಲವೊಮ್ಮೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದರೆ ಇನ್ನೂ ಅನೇಕ ಬಾರಿ ನಕಾರಾತ್ಮಕ ಅಥವಾ ನೆಗೆಟಿವ್ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವುದು ಸಹಾ ನಡೆಯುತ್ತದೆ. ಈಗ ಸೀರಿಯಲ್ ನ ಕಥೆಯಲ್ಲಿನ ಹೊಸ ಟ್ವಿಸ್ಟ್ ನೋಡಿ ಮತ್ತೆ ಪ್ರೇಕ್ಷಕರು ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.‌

ಸೀರಿಯಲ್ ನ ಕಥೆಯಲ್ಲಿ ಕೊನೆಗೂ ಭಾಗ್ಯಾಗೆ ತನ್ನ ಗಂಡ ತಾಂಡವ್ (Tandav) ಮತ್ತೆ ಶ್ರೇಷ್ಠ (Shrestha) ಮಧ್ಯೆ ಏನು ನಡೀತಾ ಇದೆ ಅನ್ನೋ ಸತ್ಯ ಗೊತ್ತಾಗಿದೆ. ತನ್ನ ಗಂಡ ಶ್ರೇಷ್ಠ ಮುಂದೆ ಕೂತ್ಕೊಂಡು ತನ್ನ ಹೆಂಡ್ತಿಯನ್ನ ದಂಡಪಿಂಡ, ಎಮ್ಮೆ ಅಂತೆಲ್ಲಾ ಹಿಯಾಳಿಸೋದನ್ನ ನೋಡಿ ತುಂಬಾ ನೊಂದುಕೊಂಡಿದ್ದಾಳೆ. ಅವಳ ಕಾಲ ಕೆಳಗೆ ನೆಲ ಕುಸಿದು ಹೋದ ಹಾಗೆ ಅನಿಸಿದೆ ಭಾಗ್ಯಗೆ. ಅತ್ತೆ, ತಂಗಿ, ಉಳಿದವರೆಲ್ಲಾ ಮುಚ್ಚಿಟ್ಟ ಸತ್ಯ ಈಗ ಬಯಲಾಗಿದೆ.

ತನ್ನ ಗಂಡನಿಗೆ ತನ್ನ ಮೇಲೆ ಪ್ರೀತೀನೇ ಇಲ್ಲ ಅಂತ ತಿಳಿದು ಇಷ್ಟು ದಿನ ಅವರಿಗಾಗಿ ತಾನು ಎಷ್ಟೆಲ್ಲಾ ಬದಲಾಗೋಕೆ ಪ್ರಯತ್ನ ಪಟ್ಟೆ ಅಂತ ಪರಿಪರಿಯಾಗಿ ಅತ್ತು ಗೋಳಾಡ್ತಿದ್ದಾಳೆ ಭಾಗ್ಯ. ಇಂತಹ ಭಾವನಾತ್ಮಕ ಸನ್ನಿವೇಶಗಳನ್ನ ನೋಡ್ತಾ ಪ್ರೇಕ್ಷಕರು ಭಾವುಕರಾಗುವ ಬದಲಾಗಿ ಈಗ ಸೀರಿಯಲ್ ಮೇಲೆ ಕೆಂಡಾಮಂಡಲವಾಗಿದ್ದಾರೆ. ಸಿಟ್ಟಿನಿಂದ ಕಾಮೆಂಟ್ ಗಳನ್ನು ಮಾಡುತ್ತಲೇ ಇದ್ದಾರೆ.

ಇನ್ನು ಎಷ್ಟು ದಿನ ಭಾಗ್ಯ ವಿವಿಧ ಭಂಗಿಗಳಲ್ಲಿ ಅಳೋದನ್ನ ತೋರಿಸ್ತೀರಿ, ನಿರ್ದೇಶಕರಿಗೆ ಕಥೆ ಮುಂದುವರೆಸೋದು ಗೊತ್ತಿಲ್ಲ ಅಂದ್ರೆ ಸೀರಿಯಲ್ ನಿಲ್ಲಿಸಿ ಬಿಡಿ. ಬೇರೆ ಸೀರಿಯಲ್ ನಲ್ಲಿ ಹೀರೋಯಿನ್ ಗಳು ಅತ್ತರೆ ಬೇಸರ ಆಗುತ್ತೆ ಇಲ್ಲಿ ಭಾಗ್ಯ ಅಳ್ತಿದ್ರೆ ವಾಕರಿಕೆ ಬರುತ್ತೆ. ಭಾಗ್ಯಾದು ಓವರ್ ಆ್ಯಕ್ಟಿಂಗ್, ಇನ್ನೂ ಮುಗಿದಿಲ್ವಾ ಇವರ ಗೋಳು, ಹೀಗೆ ನೆಟ್ಟಿಗರು ಪ್ರೊಮೊ ಕೆಳಗೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

BBK 11 : ಶೋಭಾ ಅಬ್ಬರಕ್ಕೆ ಮೂಕ ಸಾಕ್ಷಿಯಾದ ಮನೆ, ಮಂಜುಗೆ ಟಕ್ಕರ್ ಕೊಟ್ಟ ಫೈರ್ ಲೇಡಿ, ಹನುಮಂತ, ಧನರಾಜ್ ಶೇಕ್

Leave a Comment