Puttakkana Makkalu : ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನ ಕಥೆಯಲ್ಲಿ ಇತ್ತೀಚಿಗೆ ಮೂಡಿ ಬಂದಿರುವ ಮಹಾ ತಿರುವಿನಲ್ಲಿ ಸ್ನೇಹ ಪಾತ್ರಕ್ಕೆ ಮುಕ್ತಾಯ ಹಾಡಲಾಗಿದೆ. ಅಲ್ಲದೇ ಹೊಸ ಸ್ನೇಹ ಕೂಡಾ ಎಂಟ್ರಿ ಕೊಟ್ಟಾಗಿದೆ. ಇನ್ನೊಂದು ಕಡೆ ಆಸ್ಪತ್ರೆಯಲ್ಲಿ ಇರುವ ಬಂಗಾರಮ್ಮನ ಕೊ ಲೆ ಮಾಡೋಕೆ ರಾಧಾ ತನ್ನ ಕೈಯಿಂದ ಆಗೋ ಎಲ್ಲಾ ಪ್ರಯತ್ನಗಳನ್ನ ಮಾಡ್ತಾ ಇದ್ದಾಳೆ. ಮುಖ್ಯ ಪಾತ್ರಗಳು ಮರೆಯಾಗ್ತಾ ಇದ್ರೆ ಖಳ ಪಾತ್ರಗಳು ಬಿಂದಾಸ್ ಆಗಿ ಅಬ್ಬರಿಸುತ್ತಾ ಇದೆ.
ಇನ್ನೊಂದು ಕಡೆ ಸ್ನೇಹಾಳನ್ನ (Sneha) ಕಳೆದುಕೊಂಡ ಕಂಠಿ (Kanthi) ಕಣ್ಣೀರಿನಲ್ಲೇ ಕಾಲ ಕಳೀತಿದ್ದಾನೆ. ಪ್ರತಿದಿನ ಸ್ನೇಹಾಳ ನೆನಪಿನಲ್ಲಿ ನೋವನ್ನು ಅನುಭವಿಸ್ತಾ ಇದ್ದಾನೆ. ಕಂಠಿಯ ಇಂತಹ ಒಂದು ದುಃಖವನ್ನು ನೋಡೋಕೆ ವೀಕ್ಷಕರಿಗೆ ಸಹಾ ಇಷ್ಟ ಆಗ್ತಿಲ್ಲ. ಪ್ರತಿ ದಿನ ಕಂಠಿಯ ಗೋಳು ನೋಡೋಕಾಗಲ್ಲ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಈಗ ವೀಕ್ಷಕರ ಬೇಸರಕ್ಕೆ ವಿದಾಯ ಹೇಳೋ ಸಮಯ ಬಂದಿದೆ. ವಾಹಿನಿ ಶೇರ್ ಮಾಡಿರೋ ಹೊಸ ಪ್ರೊಮೊ ನೋಡಿ ವೀಕ್ಷಕರು ಬಹಳ ಖುಷಿಯಾಗಿದ್ದಾರೆ. ಒಳ್ಳೇಡು ಮಾಡೋರಿಗೆ ಯಾವಾಗ್ಲೂ ಕೆಟ್ಟದ್ದೇ ಆಗೋದು. ಬಂದಿದ್ದೆಲ್ಲಾ ಕಿತ್ಕೊಂಡು ಮೆರೆತೋರು ಆರಾಮಾಗಿ ಇರ್ತಾರೆ. ಇಷ್ಟು ದಿನ ಕಂಠಿ ಹೋದ ದಾರೀಲಿ ನೀವು, ನಮ್ಮೋರು, ನಮ್ಮವ್ವ ಹೇಳ್ಕೋಟ್ಟ ನೀತಿ, ನಿಯಮ, ಧರ್ಮ ಎಲ್ಲಾ ಇತ್ತು.
ಆದ್ರೆ ಇನ್ಮೇಲೆ ನಾನು ಹೋಗೋ ದಾರೀಲಿ ಯಾರೇ ಅಡ್ಡ ಬಂದ್ರು ತುಳ್ಕೊಂಡು ಹೋಗ್ತಾ ಇರ್ತೀನಿ ಅಂತ ಕಂಠಿ ರೆಬೆಲ್ ಆಗಿದ್ದಾನೆ. ಕಂಠಿ ಮಾತನ್ನ ಕೇಳಿ ಪುಟ್ಟಕ್ಕ (Puttakka) ಬೆಚ್ಚಿ ಬಿದ್ದಿದ್ದಾಳೆ. ಕಂಠಿಯ ಈ ಮಾಸ್ ಡೈಲಾಗ್ ಕೇಳಿ ನೆಟ್ಟಿಗರು ಖುಷಿಯಾಗಿದ್ದಾರೆ. ಮತ್ತೆ ಮರಳಿದ ಕಂಠಿ ಎಂದು ಕಾಮೆಂಟ್ ಗಳನ್ನ ಮಾಡ್ತಾ ಇದ್ದಾರೆ. ಮುಂದೆ ಕಂಠಿ ಏನೆಲ್ಲಾ ಮಾಡ್ತಾನೇ ಅನ್ನೋದನ್ನ ನಾವು ಕಾದು ನೋಡಬೇಕಾಗಿದೆ.