Amruthadhaare : ಅಪ್ಪ ಅಂದ್ರೆ ಆಕಾಶ ಅಂತ ಅಪ್ಪಿ ಕಪಾಳಕ್ಕೆ ಬಾರಿಸಿ ಭೂಮಿಕಾ ಹೇಳಿದ ಮಾತಿಗೆ ನೆಟ್ಟಿಗರ ಮೆಚ್ಚುಗೆ

Written by Soma Shekar

Published on:

---Join Our Channel---

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಟಾಪ್ ಸೀರಿಯಲ್ ಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡು ಯಶಸ್ಸಿನ ನಾಗಾಲೋಟವನ್ನು ನಡೆಸುತ್ತಿದೆ. ಹೊಸ ಹೊಸ ತಿರುವುಗಳು ಕಥೆಯಲ್ಲಿ ರೋಚಕತೆಯನ್ನು ಮೂಡಿಸುತ್ತಾ ವೀಕ್ಷಕರ ಕುತೂಹಲವನ್ನು ಕೆರಳಿಸುತ್ತಿದೆ. ಇಂದಿನ‌ ಎಪಿಸೋಡ್ ನಲ್ಲಿ ಭೂಮಿಕಾ (Bhumika) ಪಾತ್ರ ತಂಗಿಗೆ ಬುದ್ಧಿ ಹೇಳುವ ದೃಶ್ಯಗಳಂತೂ ವೀಕ್ಷಕರು ಮತ್ತು ನೆಟ್ಟಿಗರ ವಿಶೇಷ‌‌ ಮೆಚ್ಚುಗೆಗಳನ್ನು ಪಡೆದುಕೊಂಡಿದೆ.

ಭೂಮಿಕಾ ತಂಗಿ ಅಪೇಕ್ಷಾ (Apeksha) ದಿವಾನ್ ಮನೆತನದ ಸೊಸೆ ಆದ ಮೇಲೆ ಶಕುಂತಲಾ ದೇವಿ ಮಾತುಗಳನ್ನ ಕೇಳ್ಕೊಂಡು ಸಿರಿವಂತಿಕೆಯ ದೌಲತ್ತು ತೋರಿಸುತ್ತಾ ಅಕ್ಕನ ಬಗ್ಗೆಯಾಗಲೀ, ಅಪ್ಪನ ಬಗ್ಗೆಯಾಗಲೀ ಗೌರವ ಇಲ್ಲದ ಹಾಗೆ ನಡೆದುಕೊಳ್ಳುತ್ತಿದ್ದಾಳೆ. ಅಲ್ಪನಿಗೆ ಸಿರಿ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೋ ಹಾಗೆ ಆಡ್ತಿರೋ ಅಪ್ಪಿ ತನ್ನ ಅಪ್ಪನ ಬಗ್ಗೆಯೇ ಕೇವಲವಾಗಿ ಮಾತನಾಡಿದ್ದಾಳೆ.

ಅಪ್ಪಿಯ ಮಾತಿಂದ ಕೆಂಡಾಮಂಡಲವಾದ ಭೂಮಿಕಾ ತಂಗಿಯ ಕೆನ್ನೆಗೆ ಬಾರಿಸಿ ಅಪ್ಪನ ಸ್ಥಾನ ಏನೆಂದು ಹೇಳಿದ್ದಾಳೆ. ಅಪ್ಪ ಅಂದ್ರೆ ಆಕಾಶ, ಅಪ್ಪನ ಬಗ್ಗೆ ಕೆಟ್ಟ ಮಾತಾಡೋದು ಅಂದ್ರೆ ಆಕಾಶನ ನೋಡಿ ಉಗಿಯೋದು ಎಂದಿರುವ ಭೂಮಿಕಾ, ನಿನಗೆ ಮಾತನ್ನ, ನಡೆಯೋದನ್ನ ಮತ್ತು ನಿನ್ನ ಕಾಲ ಮೇಲೆ ನೀನು ನಿಲ್ಲೋದನ್ನ ಕಲಿಸಿದ್ದು ಅಪ್ಪ. ಅವರ ಬಗ್ಗೆ ಇನ್ನೊಂದ್ಸಲ ಕೆಟ್ಟ ಮಾತಾಡಿದ್ರೆ ಎಚ್ಚರ ಅಂತ ವಾರ್ನಿಂಗ್ ಕೊಟ್ಟಿದ್ದಾಳೆ.

ಈ ದೃಶ್ಯದ ಪ್ರೊಮೊ ನೋಡಿದ ನೆಟ್ಟಿಗರು ಭಾರೀ ಮೆಚ್ಚುಗೆ ನೀಡಿದ್ದಾರೆ. ಪ್ರಸ್ತುತ ಅನೇಕರಿಗೆ ತಮ್ಮ ತಂದೆಯ ಮಹತ್ವ ಏನಂತಾನೇ ಗೊತ್ತಿಲ್ಲ, ಭೂಮಿಕಾ ಅವರ ಪಾತ್ರ ಅದನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದೆ ಎಂದಿದ್ದಾರೆ. ಇಂದಿನ ಸಮಾಜದಲ್ಲಿ ಬಹಳಷ್ಟು ಜನ ಹೀಗೆ ತಂದೆ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ, ಅಂತಹವರು ಈ ಮಾತುಗಳನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Puttakkana Makkalu : ಸ್ಪೂರ್ತಿ ಅಲ್ಲ ಬರೀ ಕಣ್ಣೀರಿನ ಕಥೆಯಾದ್ರು ಪುಟ್ಟಕ್ಕನ ಮಕ್ಕಳು, ವೀಕ್ಷಕರ ಅಸಮಾಧಾನ

Leave a Comment