Puttakkana Makkalu : ಸ್ಪೂರ್ತಿ ಅಲ್ಲ ಬರೀ ಕಣ್ಣೀರಿನ ಕಥೆಯಾದ್ರು ಪುಟ್ಟಕ್ಕನ ಮಕ್ಕಳು, ವೀಕ್ಷಕರ ಅಸಮಾಧಾನ

Written by Soma Shekar

Published on:

---Join Our Channel---

Puttakkana Makkalu : ಪುಟ್ಟಕ್ಕನ ‌ಮಕ್ಕಳು (Puttakkana Makkalu) ಸೀರಿಯಲ್ ಕಿರುತೆರೆಯ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆದರೆ ಸ್ನೇಹ ಪಾತ್ರ ಕೊನೆಯಾದ ಮೇಲೆ ಸೀರಿಯಲ್ ಮೇಲೆ ಅನೇಕರಿಗೆ ಅಸಮಾಧಾನ ಉಂಟಾಗಿದೆ. ಅಲ್ಲದೇ ಕಾಮೆಂಟ್ ಗಳಲ್ಲೂ ಸಹಾ ಬಹಳಷ್ಟು ಜನ ತಮ್ಮ ಬೇಸರ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸೀರಿಯಲ್ ಕಥೆ ಎಲ್ಲಿಂದ ಎಲ್ಲಿಗೋ ಹೊರಟೋಯ್ತು ಅಂತ ಕೂಡಾ ಅನೇಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಪುಟ್ಟಕ್ಕನ ಮಕ್ಕಳು ಅಂದ್ರೆ ಜೀವನದಲ್ಲಿ ಸಾಧನೆ ಮಾಡ್ತಾ ಸ್ಪೂರ್ತಿಯಾಗ್ತಾರೆ ಅಂತ ನಿರೀಕ್ಷೆಗಳನ್ನು ಇಟ್ಕೊಂಡಿದ್ವಿ ಆದ್ರೆ ಇಲ್ಲಿ ಆಗ್ತಿರೋದೇ ಬೇರೆ ಅನ್ನೋದು ಅನೇಕರ ವಾದವಾಗಿದೆ. ಮೊದಲ ಮಗಳು ಸಹನ (Sahana) ಪ್ರೇಮದಲ್ಲಿ ಬಿದ್ದು, ಮೇಷ್ಟ್ರು ಮುರಳಿ ಜೊತೆ ಮದುವೆ ಆಗಿ ನೋವು ಮತ್ತು ಕಷ್ಟ ಅನುಭವಿಸಿ ಕೊನೆಗೆ ಗಂಡನಿಂದ ದೂರಾಗಿ, ಮನೆಯಿಂದ ದೂರಾಗಿ, ಗಂಡನಿಗೆ ಇನ್ನೊಂದು ಮದುವೆ‌ ಮಾಡಿಸಿ ನೋವಿನಲ್ಲೇ ದಿನದೂಡುತ್ತಿದ್ದಾಳೆ.

ಇನ್ನು ಡಿಸಿ ಆಗುವ ಕನಸು ಹೊತ್ತ ಸ್ನೇಹ (Sneha) ಪಾತ್ರ ಡಿಸಿ ಆದ್ಮೇಲೆ ಖಡಕ್ ಪಾತ್ರ ಆಗುತ್ತೆ ಅಂತ ನಿರೀಕ್ಷೆ ಮಾಡುವಾಗ್ಲೇ ಆ ಪಾತ್ರವೇ ಇಲ್ಲದಾಗಿದೆ. ಈಗ ಕಂಠಿ ಕಣ್ಣೀರನ್ನು ಸುರಿಸೋ ಹಾಗೆ ಆಗಿದೆ ಅನ್ನೋದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಇನ್ನು ಈಗ ಇಬ್ಬರು ಅಕ್ಕಂದಿರ ರೀತಿಯಲ್ಲೇ ಸುಮ ಕೂಡಾ ಸಚಿನ್ ನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಮುಂದೆ ಏನಾಗುತ್ತೋ ಗೊತ್ತಿಲ್ಲ.

ಒಟ್ನಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪುಟ್ಟಕ್ಕನ ಮಕ್ಕಳ ಸಾಧನೆಗಿಂತ ಅವರ ಕಣ್ಣೀರಿನ ಕಥೆಯೇ ಹೆಚ್ಚಾಗಿದೆ. ಒಂದಾದ ಮೇಲೆ ಮತ್ತೊಂದು ಕಾರಣದಿಂದ ಕಣ್ಣೀರು, ನೋವು ಇಂತದ್ದೇ ನೋಡಿ ನೋಡಿ ಪ್ರೇಕ್ಷಕರಿಗೂ ಸಹಾ ಬೇಸರವಾಗಿದೆ. ಸಂಜೆ ಸಮಯ ಟಿವಿ ನೋಡಲು ಕೂತಾಗ ಕಣ್ಣೀರಿನ ಕಥೆ ನೋಡೋಕೆ ಬೇಸೆ ಆಗ್ತಿದೆ ಅಂತ ಕೂಡಾ ಅನೇಕರು ಹೇಳ್ತಿದ್ದಾರೆ.

Sonu Srinivas Gowda ಶೀಘ್ರದಲ್ಲೇ ನಿಶ್ಚಿತಾರ್ಥ ಅಂತ ಮದುವೆಯಾಗೋ ಹುಡುಗನ ಬಗ್ಗೆ ಸೋನು ಓಪನ್ ಟಾಕ್

Leave a Comment