Puttakkana Makkalu ಸ್ನೇಹಾಗೆ ಕುಟುಂಬ ಅವಾರ್ಡ್ಸ್ ಯಾಕಿಲ್ಲ? ಸ್ನೇಹಾ ಪಾತ್ರಕ್ಕೆ ಪ್ರಶಸ್ತಿ ವಿಚಾರದಲ್ಲಿ ಮೋಸ ಆಯ್ತಾ

Written by Soma Shekar

Published on:

---Join Our Channel---

Puttakkana Makkalu: ಕೆಲವೇ ದಿನಗಳ ಹಿಂದೆಯಷ್ಟೇ ಜೀ ಕುಟುಂಬ ಅವಾರ್ಡ್ಸ್ (Zee Kutumba Awards) ಬಹಳ ಅದ್ದೂರಿಯಾಗಿ ನಡೆದಿತ್ತು. ಬಹುತೇಕ ಎಲ್ಲಾ ಸೀರಿಯಲ್ ಗಳ ಮುಖ್ಯ ಪಾತ್ರಧಾರಿಗಳಿಗೆ ಒಂದಲ್ಲಾ ಒಂದು ಕ್ಯಾಟಗರಿಯಲ್ಲಿ ಪ್ರಶಸ್ತಿ ಸಿಕ್ಕಿದೆ ಮತ್ತು ಎಲ್ಲರೂ ಸಂಭ್ರಮಿಸಿದ್ದಾರೆ. ಆದರೆ ಅನೇಕರಿಗೆ ಒಂದು ಅಸಮಾಧಾನ ಖಂಡಿತ ಕಾಡಿದೆ. ಒಬ್ಬ ನಟಿಗೆ ಯಾಕೆ ಪ್ರಶಸ್ತಿ ಸಿಗಲೇ ಇಲ್ಲ ಎನ್ನುವುದು ಅನೇಕರು ಅನುಮಾನವಾಗಿದೆ.

ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪ್ರಮುಖವಾದ ಸ್ನೇಹ (Sneha) ಪಾತ್ರ ಕೆಲವೇ ದಿನಗಳ ಹಿಂದೆ ಕೊನೆಯಾಗಿದೆ. ಆ ಪಾತ್ರದಲ್ಲಿ ನಟಿಸಿದ್ದ ನಟಿ ಸಂಜನಾ ಬುರ್ಲಿ (Sanjana Burli) ಅವರು ಆ ಪಾತ್ರದಿಂದ ಹೊರ ಬಂದ ಕಾರಣ ಕಥೆಯಲ್ಲಿ ಬದಲಾವಣೆ ಆಗಿ ಸ್ನೇಹ ಪಾತ್ರವು ಸಾಯುವಂತೆ ಕಥೆಯನ್ನು ಹೆಣೆಯಲಾಗಿದೆ. ಆದರೂ ಈ ಪಾತ್ರ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಅತಿ ಪ್ರಮುಖ ಪಾತ್ರಗಳಲ್ಲಿ ಒಂದಾಗಿತ್ತು ಅನ್ನೋದು ಸುಳ್ಳಲ್ಲ.

ಡಿಸಿ ಆಗೋ ಕನಸು ಹೊತ್ತ ಸಾಮಾನ್ಯ ಹುಡುಗಿ ತನ್ನ ಕನಸು ನನಸು ಮಾಡಿಕೊಳ್ಳೋ ಸ್ಪೂರ್ತಿಯ ಕಥೆ ಸ್ನೇಹಾಳದ್ದು. ಆದರೆ ಜೀ ಕನ್ನಡ ಪ್ರಶಸ್ತಿಗಳಲ್ಲಿ ಸ್ನೇಹ ಪಾತ್ರವನ್ನು ಕಡೆಗಣಿಸಲಾಯಿತೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಏಕೆಂದರೆ ಸ್ನೇಹ ಪಾತ್ರಕ್ಕೆ ಯಾವುದೇ ಪ್ರಶಸ್ತಿ ಬಂದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಾಗಿದೆ.

ಅಲ್ಲದೇ ನಟಿ ಸಂಜನಾ ಬುರ್ಲಿ ಅವರು ಸಹಾ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಹಾಜರಾಗಿರಲಿಲ್ಲ ಎನ್ನುವುದು ಸಹಾ ಗಮನಿಸಬೇಕಾದ ವಿಚಾರವೇ ಆಗಿದೆ. ಒಂದು ಕಡೆ ಸೀರಿಯಲ್ ನಲ್ಲಿ ಪಾತ್ರದ ಕೊನೆಯಾದರೆ ಇನ್ನೊಂದು ಕಡೆ ಸ್ನೇಹ ಪಾತ್ರಕ್ಮೆ ಪ್ರಶಸ್ತಿ ಬಾರದೇ ಮೋಸವಾಗಿದೆ ಅನ್ನೋದು ಅಭಿಮಾನಿಗಳ ಮಾತಾಗಿದೆ.‌

Leave a Comment