Puttakkana Makkalu : ಕಿರುತೆರೆಯ ನಂಬರ್ ಒನ್ ಸೀರಿಯಲ್ ಆಗಿ ಸಮಯದ ಬದಲಾವಣೆ ನಂತರ ಟಿಆರ್ಪಿ ಕಡಿಮೆಯಾಗಿ, ಈಗ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಮರಳಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಕಳೆದ ಕೆಲವು ದಿನಗಳಿಂದಲೂ ಕೂಡಾ ಸ್ನೇಹ ಸಾವು ಮತ್ತು ಅಂತಿಮ ಸಂಸ್ಕಾರಗಳ ಎಪಿಸೋಡ್ ಗಳು ಪ್ರಸಾರವಾಗುತ್ತಿದ್ದು, ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದು ಕಡೆ ಸ್ನೇಹ (Sneha) ಪಾತ್ರವನ್ನು ಇಷ್ಟು ಬೇಗ ಮುಗಿಸಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಇನ್ನೊಂದು ಕಡೆ ಪುಟ್ಟಕ್ಕನ ಮಕ್ಕಳು ಅಂತ ಟೈಟಲ್ ಇಟ್ಟು ಹೀಗೆ ಮಕ್ಕಳನ್ನೇ ಕೊಂದರೆ ಇಲ್ಲಿ ಕಥೆ ಏನಿರುತ್ತೆ ಎನ್ನುವುದು ಕೆಲವರ ಬೇಸರವಾಗಿದೆ. ಇದೆಲ್ಲದರ ನಡುವೆ ಈಗ ಮತ್ತೊಂದು ಬೇಸರದ ಪ್ರಶ್ನೆ ಕೂಡಾ ಅನೇಕರಿಗೆ ಮೂಡಿದೆ. ನೆಟ್ಟಿಗರು ಅದನ್ನ ಪ್ರಶ್ನೆ ಮಾಡುತ್ತಿದ್ದಾರೆ.
ಹೌದು, ಸಹನಾ (Sahana) ಬದುಕಿದ್ದಾಳೆ ಅನ್ನೋ ಸತ್ಯ ಪುಟ್ಟಕ್ಕನಿಗೆ ಸ್ನೇಹಾ ತಿಳಿಸೋಕು ಮೊದಲೇ ಪ್ರಾಣ ಬಿಟ್ಟಿದ್ದಾಳೆ. ಸಹನಾಗೂ ಸ್ನೇಹ ಸತ್ತಿರೋ ವಿಚಾರ ಗೊತ್ತಿಲ್ಲ. ಪುಟ್ಟಕ್ಕ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡು ಬಿಟ್ಟೆ ಅನ್ನೋ ಅತಿಯಾದ ನೋವಿನಲ್ಲಿ ದುಃಖ ಪಡೋ ಹಾಗೆ ಆಗಿದೆ. ಕೊನೆ ಪಕ್ಷ ಪುಟ್ಟಕ್ಕ ಇಷ್ಟು ನೋವು ಅನುಭವಿಸೋವಾಗ ಸಹನಾ ಬಂದಿದ್ರೆ ಸ್ವಲ್ಪ ಸಮಾಧಾನ ಆದ್ರೂ ಸಿಕ್ತಾ ಇತ್ತು.
ಆ ಕಡೆ ಅಮ್ಮನ ಜನ್ಮದಿನಕ್ಕೆ ನಾನೇ ಬಂದು ಸಹನಾನ ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ಲು ಸ್ನೇಹ. ಆದ್ರೆ ಅದು ಆಗಲಿಲ್ಲ. ಈಗ ಸಂಜನಾ ನೇರವಾಗಿ ಮನೆಗೆ ಬರ್ತಾಳಾ? ಅಥವಾ ಸ್ನೇಹಾ ಅಂತ್ಯಕ್ರಿಯೆ ಎಲ್ಲಾ ಮುಗಿದ ಮೇಲೆ ಬರ್ತಾಳಾ? ಅನ್ನೋದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಪುಟ್ಟಕ್ಕನ ಜನ್ನದಿನಕ್ಕೆ ಎರಡು ಸರ್ಪ್ರೈಸ್ ಅಂತ ಸ್ನೇಹ ಹೇಳಿದ್ಲು. ಆದ್ರೆ ಇಲ್ಲಿ ಆಗಿದ್ದೇ ಬೇರೆ. ಮುಂದೆ ಏನಾಗುತ್ತೆ ಕಾದು ನೋಡಬೇಕಾಗಿದೆ.
Yash Radhika: ಟಗರು ಬಂತು ಟಗರು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್; ಯಶ್ ಫ್ಯಾನ್ಸ್ ಖುಷಿ