Puttakkana Makkalu : ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವವರು ತಮ್ಮ ಪಾತ್ರದಿಂದ ಹೊರ ಬರುವುದಾದರೆ ಆ ಪಾತ್ರವನ್ನು ಸಾಯಿಸುವುದೋ ಅಥವಾ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದೋ ಮಾಡಿ ಬೇರೆ ಕಲಾವಿದರನ್ನು ಕರೆತರಲಾಗುತ್ತೆ. ಇತ್ತೀಚಿಗೆ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಸ್ನೇಹಾ ಪಾತ್ರಧಾರಿ ನಟಿ ಸಂಜನಾ ಬುರ್ಲಿ (Sanjana Burli) ಹೊರ ಬಂದ ಕಾರಣ ಸೀರಿಯಲ್ ನಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಲಾಗಿದೆ.
ಈ ಬೆಳವಣಿಗೆ ನೋಡಿ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೇಹ ಪಾತ್ರ ಇಷ್ಟು ಬೇಗ ಸಾಯೋಕಾ ಡಿಸಿ ಆಗಿದ್ದು ಅಂದ್ರೆ, ಇನ್ನೂ ಕೆಲವರು ಪುಟ್ಟಕ್ಕನ ಮಕ್ಕಳು ಅಂತ ಹೆಸರಿಟ್ಟು ಆಕೆಯ ಮಕ್ಕಳನ್ನೇ ಸಾಯಿಸಿದರೆ ಕಥೆ ಹೇಗೆ ಚೆನ್ನಾಗಿರೋಕೆ ಸಾಧ್ಯ ಅಂತಿದ್ದಾರೆ.
ಈಗ ಇವೆಲ್ಲವುಗಳ ಮಧ್ಯೆ ಇನ್ನೊಂದು ಅನುಮಾನ ಸಹಾ ಅನೇಕರಿಗೆ ಮೂಡಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಪುಟ್ಟಕ್ಕನ ಮಕ್ಕಳಲ್ಲಿ ಉಳಿದಿರುವ ಸಹನ ಮತ್ತು ಸುಮ ಪಾತ್ರಗಳಲ್ಲಿ ನಟಿಸುತ್ತಿರುವ ನಟಿಯರು ಏನಾದರೂ ಸೀರಿಯಲ್ ನ ತಮ್ಮ ಪಾತ್ರದಿಂದ ಹೊರಗೆ ಬರುವ ನಿರ್ಧಾರ ಮಾಡಿದ್ದರೆ ಆಗ ಏನಾಗಲಿದೆ? ಎನ್ನುತ್ತಿದ್ದಾರೆ.
ಸ್ಮೇಹ ಪಾತ್ರ ಪುಟ್ಟಕ್ಕನ ಮಕ್ಕಳಲ್ಲಿ ಗಟ್ಟಿಗಿತ್ತಿಯ ಪಾತ್ರವಾಗಿತ್ತು. ಮನೆಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಉತ್ತರ ಹುಡುಕುವಲ್ಲಿ ಸ್ನೇಹ ಯಾವಾಗಲೂ ಮುಂದೆ ಇರ್ತಿದ್ದಳು. ತನ್ನ ಕನಸಿನಂತೆ ಡಿಸಿ ಆದಳು. ಆದ್ರೆ ಡಿಸಿ ಆದ ಸ್ವಲ್ಪ ದಿನಕ್ಕೆ ಆ ಪಾತ್ರಕ್ಕೆ ಫುಲ್ ಸ್ಟಾರ್ ಇಟ್ಟಿದ್ದು ಮಾತ್ರ ಅನೇಕರಿಗೆ ಸ್ವಲ್ಪ ಕೂಡಾ ಇಷ್ಟವಾಗಿಲ್ಲ ಅನ್ನೋದೇ ಸತ್ಯ.
SeethaRama Serial : ಸತ್ತೇ ಹೋದ್ಲು ಅಂತ ತೋರ್ಸಿ ಈಗ ಕಿಡ್ನಾಪ್ ಮಾಡ್ಸಿದ್ಯಾಕೆ? ಗೊಂದಲದಲ್ಲಿ ಸೀತಾರಾಮ ಫ್ಯಾನ್ಸ್