Puttakkana Makkalu : ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳಿನಲ್ಲಿ (Puttakkana Makkalu) ಮಹಾ ತಿರುವು ಎದುರಾಗಿದೆ. ಕೆಲವೇ ದಿನಗಳ ಹಿಂದೆ ಸ್ನೇಹ ಪಾತ್ರಧಾರಿ ನಟಿ ಸಂಜನಾ ಬುರ್ಲಿ (Sanjana Burli) ಅವರು ಒಂದು ಪೋಸ್ಟ್ ಮೂಲಕ ಕೆಲವೊಂದು ಗುಡ್ ಬೈ ಹೇಳುವುದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿ ನೆಟ್ಟಿಗರು ನಟಿ ಸೀರಿಯಲ್ ಪಾತ್ರಕ್ಕೆ ಗುಡ್ ಬೈ ಹೇಳಿದ್ರು ಅನ್ನೋದನ್ನ ಗೆಸ್ ಮಾಡಿದ್ರು.
ಈಗ ಶೇರ್ ಮಾಡಿರೋ ಹೊಸ ಪ್ರೊಮೊದಲ್ಲಿ ಸ್ನೇಹಾ ತನ್ನ ಅತ್ತೆ ಬಂಗಾರಮ್ಮನ ಕಾಪಾಡಿದ್ದಾಳೆ. ಅತ್ತೆಯನ್ನ ಕರ್ಕೊಂಡು ಬರೋವಾಗ ಪುಟ್ಟಕ್ಕ ನಿಗೆ ಕರೆ ಮಾಡಿ ಎರಡು ಸರ್ಪ್ರೈಸ್ ಗೆ ಸಿದ್ಧವಾಗಿರುವ ಅಂತ ಹೇಳಿದ್ದಾಳೆ. ಆದರೆ ಇವೆಲ್ಲವುಗಳ ನಡುವೆಯೇ ಕಥೆಯಲ್ಲಿ ಮಹಾ ತಿರುವು ಮೂಡಿ ಬಂದಿದೆ.
ಸಿಂಗಾರಮ್ಮ ತನ್ನ ಮಗನಿಂದ ಸ್ನೇಹ, ಬಂಗಾರಮ್ಮ ತಪ್ಪಿಸಿಕೊಂಡ್ರು ಅನ್ನೋ ವಿಚಾರ ತಿಳ್ಕೊಂಡು ಅವರನ್ನ ಆ್ಯಕ್ಸಿಡೆಂಟ್ ಮಾಡಿಸಿ ಸಾಯಿಸೋ ಪ್ಲಾನ್ ಮಾಡಿ ಮಗನಿಗೆ ಅದನ್ನ ಹೇಳಿದ್ದಾಳೆ. ಅದರಂತೆ ಹೆದ್ದಾರಿಯಲ್ಲಿ ಬರ್ತಿದ್ದ ಸ್ನೇಹ ಮತ್ತು ಬಂಗಾರಮ್ಮ ಇದ್ದ ಕಾರಿಗೆ ಭೀಕರವಾದ ಅಪಘಾತವಾಗಿದೆ.
ಈ ಪ್ರೊಮೋ ನೋಡಿ ಪ್ರೇಕ್ಷಕರು ಸ್ನೇಹಾ (Sneha) ಕಥೆ ಇಲ್ಲಿಗೆ ಮುಗೀತು. ಹೊಸ ಸ್ನೇಹಾಗೆ ಹಾರ್ಟ್ ಟ್ರಾನ್ಸ್ ಪ್ಲಾಂಟ್ ಮಾಡ್ತಾರೆ. ಇನ್ಮೇಲೆ ಹಳೇ ಸ್ನೇಹ ಬದಲು ಹೊಸ ಸ್ನೇಹ ಕಥೆಯಲ್ಲಿ ಇರ್ತಾಳೆ ಅಂತ ಮುಂದಿನ ಕಥೆಯನ್ನ ಸಹಾ ಗೆಸ್ ಮಾಡಿ ಕಾಮೆಂಟ್ ಗಳನ್ನು ಸಹಾ ಮಾಡುತ್ತಿದ್ದಾರೆ.
Mokshita Pai: Bigg Boss ಮನೆಯಲ್ಲಿ ಮೋಕ್ಷಿತಾ ಕಣ್ಣೀರು, ಆ ಒಂದು ಕಾರಣಕ್ಕೆ ಭಾವುಕರಾದ ನಟಿ