ನನ್ನ ವೀಡಿಯೋ ಲೀಕ್ ಮಾಡೋ ಬೆದರಿಕೆ ಹಾಕಿದ್ದ ಸ್ಟಾರ್ ನಟನ ಮಗ; ಶಾಕಿಂಗ್ ಮಾತು ಹೇಳಿದ Ananya Pandey

Written by Soma Shekar

Published on:

---Join Our Channel---

Ananya Pandey : ಬಾಲಿವುಡ್ ನ (Bollywood) ಹಿರಿಯ ನಟ ಚುಂಕಿ ಪಾಂಡೆ (Chunky Pandey) ಅವರ ಮಗಳು ಅನನ್ಯಾ ಪಾಂಡೆ (Ananya Pandey) ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಬೇಡಿಕೆಯನ್ನು ಪಡೆದುಕೊಂಡಿರುವ ಯುವ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈಗ ಅನನ್ಯಾ ಪಾಂಡೆ ಸ್ಟಾರ್ ನಟನ ಮಗನ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಸಂದರ್ಶನವೊಂದರಲ್ಲಿ ಬಾಲ್ಯದ ನೆನಪುಗಳನ್ನು ಶೇರ್ ಮಾಡಿಕೊಂಡ ಅನನ್ಯಾ ಪಾಂಡೆ, ನಾನು ಏನು ಮಾಡುತ್ತೇನೆ, ದಿನವಿಡೀ ಏನು ತಿನ್ನುತ್ತೇನೆ… ಎಲ್ಲವನ್ನೂ ವಿಡಿಯೋದಲ್ಲಿ ರೆಕಾರ್ಡ್ ಮಾಡ್ತೀನಿ. ಆದರೆ ಅವನ್ನ ಪಬ್ಲಿಷ್ ಮಾಡೋದಿಲ್ಲ.  ಆ ವೀಡಿಯೋಗಳು ಈಗಲೂ ನನ್ನ ಬಳಿ ಇವೆ.

ನಾನು, ಸುಹಾನಾ ಖಾನ್ (ಶಾರೂಖ್ ಪುತ್ರಿ), ಶನಯಾ ಕಪೂರ್ ಯಾವಾಗಲೂ ಹೀಗೆ ಏನಾದ್ರು ಒಂದು ರೆಕಾರ್ಡ್ ಮಾಡ್ತಾ ಇರ್ತಾ ಇದ್ವಿ.. ಆಗೆಲ್ಲಾ  ಆರ್ಯನ್ ಖಾನ್ (Aryan Khan) ತಾನು ಹೇಳಿದಂತೆ ನಾವು ಮಾಡದೇ ಹೋದಲ್ಲಿ ನಮ್ಮ ವೀಡಿಯೊಗಳನ್ನು ಲೀಕ್ ಮಾಡೋದಾಗಿ ಬೆದರಿಕೆ ಹಾಕ್ತಿದ್ದ,‌ಅದೆಲ್ಲಾ ಸ್ವೀಟ್ ಮೆಮೊರೀಸ್’ ಎಂದಿದ್ದಾರೆ ಅನನ್ಯಾ.

ಅನನ್ಯ ಹೇಳಿಕೊಂಡ ಬಾಲ್ಯದ ನೆನಪುಗಳ ಈ ವಿಚಾರಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ. ಆರ್ಯನ್ ಖಾನ್ ನಿರ್ದೇಶಕನಾಗಿ ಬಾಲಿವುಡ್ ಗೆ ಎಂಟ್ರಿಯನ್ನು ನೀಡುತ್ತಿದ್ದಾರೆ. ಇದಲ್ಲದೇ ಬ್ರಾಂಡೆಡ್ ಬಟ್ಟೆಗಳ ವ್ಯಾಪಾರದಲ್ಲೂ ಬ್ಯುಸಿಯಾಗಿದ್ದಾರೆ.‌

ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟ ಅಂತ Bigg Boss Kannada ದ ಮೇಲೆ ರೊಚ್ಚಿಗೆದ್ದ ರೂಪೇಶ್ ರಾಜಣ್ಣ

Leave a Comment