Yamuna Srinidhi: ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಯಮುನಾ ಅವ್ರ ಸಂಭಾವನೆ ಎಷ್ಟು? ಶಾಕಿಂಗ್ ಇದು

Written by Soma Shekar

Published on:

---Join Our Channel---

Yamuna Srinidhi: ಭಾರೀ ನಿರೀಕ್ಷೆಗಳೊಂದಿಗೆ ಕಿರುತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಎರಡನೇ ವಾರಕ್ಕೆ ಪ್ರವೇಶ ನೀಡಿದೆ. ಬಿಗ್ ಬಾಸ್ ನ ಮೊದಲನೇ ಸೀಸನ್ ನ ಮೊದಲ ವಾರದ ಎಲಿಮಿನೇಷನ್ ನಲ್ಲಿ ನಟಿ ಯಮುನಾ ಶ್ರೀನಿಧಿ (Yamuna Srinidhi) ಅವರು ಮನೆಯಿಂದ ಹೊರ ಬಂದಿದ್ದಾರೆ.

ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ನಲ್ಲಿ ಮೊದಲ ದಿನದಿಂದಲೇ ತಮ್ಮ ಆಟವನ್ನು ಆರಂಭಿಸಿದ್ದರು. ಅವರ ಮಾತು, ಆಟ ಎಲ್ಲ ಜೋರಾಗಿಯೇ ಇತ್ತಾದರೂ ಒಂದೇ ವಾರಕ್ಕೆ ಅವರು ಹೊರ ಬಂದಿದ್ದು ಮಾತ್ರ ಶಾಕಿಂಗ್ ಎನಿಸಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದ ಒಂದು ವಾರಕ್ಕೆ ನಟಿ ಪಡೆದ ಸಂಭಾವನೆ ಎಷ್ಟು ?

ಬಿಗ್ ಬಾಸ್ ಮನೆಯಲ್ಲಿ ತಮ್ಮ ದನಿಯಿಂದಲೇ ಸದ್ದು ಮಾಡಿದ್ದ ಯಮುನಾ ಅವರು ಒಂದಷ್ಟು ವಾರಗಳು ಇರುತ್ತಾರೆಂದು ನಿರೀಕ್ಷೆ ಮಾಡಿದ್ದವರಿಗೆ ಅವರ ಎಲಿಮಿನೇಷನ್ ಬಹಳ ಬೇಸರವನ್ನು ಉಂಟು ಮಾಡಿದೆ ಎನ್ನುವುದು ಸುಳ್ಳಲ್ಲ.

ಈಗ ಅವರ ಎಲಿಮಿನೇಷನ್ ಬೆನ್ನಲ್ಲೇ ನಟಿ ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಈಗಾಗಲೇ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿ ಇವರು ತುಂಬಾ ಜನಪ್ರಿಯತೆ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದ ನಟಿ ಯಮುನಾ ಅವರಿಗೆ ವಾರಕ್ಕೆ ಎರಡು ಲಕ್ಷ ಸಂಭಾವನೆ ನಿಗದಿಯಾಗಿತ್ತು ಎನ್ನಲಾಗಿದೆ. ಅವರು ಒಂದು ವಾರ ಮಾತ್ರವೇ ಇದ್ದುದರಿಂದ ಅವರಿಗೆ ಎರಡು ಲಕ್ಷ ಮಾತ್ರವೇ ಸಿಗುತ್ತದೆ ಎನ್ನಲಾಗಿದೆ.

Bigg Boss 11 : ಬಿಗ್ ಮನೆಯಲ್ಲಿ ದೊಡ್ಡವರ ಲವ್ ಸ್ಟೋರಿ, ಕ್ಯಾಪ್ಟನ್ I Love You ಎಂದ ಜಗದೀಶ್, ಹಂಸ ಏನಂದ್ರು

Leave a Comment