Madhavi Latha: ಲಡ್ಡು ವಿಚಾರದಲ್ಲಿ ಪ್ರಕಾಶ್ ರಾಜ್ ಗೆ ಮಾತಿನಲ್ಲೇ ಛಡಿಯೇಟು ಕೊಟ್ಟ ನಟಿ ಮಾಧವಿಲತಾ

Written by Soma Shekar

Published on:

---Join Our Channel---

Madhavi Latha : ತಿರುಪತಿ ಲಡ್ಡು ಕಲಬೆರಕೆ (Tirupati Laddu) ಬಗ್ಗೆ ತಮಾಷೆ ಮಾಡಿದ್ದಕ್ಕೆ ತಮಿಳಿನ ಖ್ಯಾತ ಹೀರೋ ಕಾರ್ತಿ ಅವರು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಗೆ ಕ್ಷಮೆ ಯಾಚಿಸಿದ್ದರು, ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರಾಜ್ (Prakash Raj) ತಾವು ಮಾಡದ ತಪ್ಪಿಗೆ ಕ್ಷಮೆಯಾಚಿಸಿದ್ದು ಖುಷಿ ತಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

ಇದೀಗ ಖ್ಯಾತ ಸಿನಿಮಾ ನಟಿ ಮಾದವಿ ಲತಾ (Madhavi Latha) ಈ ವಿಚಾರವಾಗಿ ನಟ ಪ್ರಕಾಶ್ ರಾಜ್ ಅವರನ್ನು ಟೀಕಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ ನಟಿ ಮಾತನಾಡುತ್ತಾ, ಅನ್ಯ ಧರ್ಮದವರ ಬಗ್ಗೆ ಒಂದು ಮಾತು ಆಡಿದರೂ ಸಾಕು ಕೂಡಲೇ ಗಲಾಟೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಆಂಜನೇಯಸ್ವಾಮಿಯ ಹಾಡು ಕೇಳುತ್ತಿದ್ದವರ ಬಳಿಗೆ ಬೇರೆ ಧರ್ಮದ ಕೆಲವರು ಬಂದು ಹಾಡುವುದನ್ನು ನಿಲ್ಲಿಸಿ ಎಂದು ಕೇಳಿದಾಗ ಪ್ರಕಾಶ್ ರಾಜ್ ಏನು ಮಾತನಾಡಿದ್ರು? ತಿರುಪತಿ ಲಡ್ಡು ವಿಚಾರದಲ್ಲಿ ಕಾರ್ತಿ ಮಾಡಿದ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

ಮೇಲಾಗಿ ನಾವು ನಮ್ಮ ಧರ್ಮದ ಬಗ್ಗೆ ಕಾಮೆಂಟ್ ಮಾಡಬಾರದೆಂದು ಕಾರ್ತಿ ಕ್ಷಮೆ ಕೇಳಿದ್ದಾರೆ. ಬೇರೆಯವರ ಭಾವನೆಗಳ ಬಗ್ಗೆ ಪ್ರಕಾಶ್ ರಾಜ್ ಮೌನವಾಗಿರುತ್ತಾರೆ, ಅದೇ ನಮ್ಮ ಭಾವನೆಗಳ ವಿಚಾರ ಬಂದಾಗ ಪ್ರತಿಯೊಂದನ್ನು ಪಾಯಿಂಟ್ ಮಾಡ್ತಾರೆ. ಅದಕ್ಕೆ   ಅವರನ್ನು ಬೆಂಬಲಿಸುವ ದೇಶದ್ರೋಹಿಗಳೂ ಇರುತ್ತಾರೆ ಎಂದಿದ್ದಾರೆ ಮಾದವಿ ಲತಾ.

Sobhita Dhulipala ಆ ಅನುಭವಕ್ಕೆ ಕಾಯ್ತಿದ್ದೀನಿ, ನಾಗಚೈತನ್ಯ ಜೊತೆ ನಿಶ್ಚಿತಾರ್ಥದ ನಂತರ ಅಚ್ಚರಿಯ ಮಾತಾಡಿದ ಶೋಭಿತಾ


Leave a Comment