Kannada Actress: ಕೇರಳದಲ್ಲಿ ಹೇಮಾ ಸಮಿತಿ ವರದಿ (Hema Committee Report) ಬಂದ ಮೇಲೆ ಮಲೆಯಾಳಂ ಸಿನಿಮಾ ರಂಗದ (Mollywood) ಕರಾಳ ಮುಖದ ಅನಾವರಣ ಆಗಿದೆ. ಹಲವು ನಟಿಯರು ತಮ್ಮ ಮೇಲೆ ನಡೆದಂತಹ ದೌರ್ಜನ್ಯದ ಕುರಿತಾಗಿ ಮಾತನಾಡುತ್ತಿದ್ದಾರೆ. ಈಗ ಇತರೆ ಚಿತ್ರರಂಗಗಳಲ್ಲೂ ಹೇಮಾ ಸಮತಿಯ ಹಾಗೆ ಸಮಿತಿಯ ರಚನೆ ಆಗಬೇಕೆಂಬ ಒತ್ತಾಯವೂ ಸಹಾ ಕೇಳಿ ಬರುತ್ತಿದೆ.
ಕೇರಳದಲ್ಲಿ ಆದ ಬೆಳವಣಿಗೆಗಳ ನಂತರ ಇತರೆ ಸಿನಿಮಾ ರಂಗಗಳ ನಟಿಯರು ಸಹಾ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಕನ್ನಡದಲ್ಲಿ (Kannada Actress) ಹೆಸರನ್ನ ಮಾಡಿರುವ ಕೇರಳದ ನಟಿ ಶೃತಿ ಹರಿಹರನ್ (Shruti Hariharan) ಸಹಾ ಈಗ ಈ ವಿಚಾರವಾಗಿ ತಮಿಳು ಸಿನಿಮಾರಂಗದಿಂದ (Tamil Cinema Industry) ತನಗೆ ಎದುರಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.
ತಮಿಳಿನ ದೊಡ್ಡ ನಿರ್ಮಾಪಕರೊಬ್ಬರು ನನ್ನ ಕನ್ನಡ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿದ್ದರು. ಅವರು ಕರೆ ಮಾಡಿ ಕನ್ನಡದಲ್ಲಿ ಮಾಡಿದ್ದ ಪಾತ್ರವನ್ನು ತಮಿಳಿನಲ್ಲೂ ಮಾಡಬೇಕು, ಆದರೆ ನಮ್ಮಲ್ಲಿ ಐದು ಜನ ನಿರ್ಮಾಪಕರಿದ್ದು ಯಾವಾಗ ಬೇಕಾದ್ರೂ ನಿನ್ನನ್ನ ಬಳಸಿಕೊಳ್ಳಬಹುದು ಬರ್ತೀಯಾ ಅಂತ ಕೇಳಿದರು. ನಾನು ಆಗ ಕೋಪದಿಂದ ನನ್ನ ಕೈಯಲ್ಲಿ ಶೂ ಇದೆ ಬಂದ್ರೆ ಹೊಡೆಯುತ್ತೇನೆ ಎಂದಿದ್ದೆ ಎಂದು ಹೇಳಿದ್ದಾರೆ.
ಆ ಘಟನೆಯ ನಂತರ ನನಗೆ ತಮಿಳಿನಿಂದ ಅವಕಾಶಗಳು ಬರಲಿಲ್ಲ ಎಂದು ಸಹಾ ನಟಿ ಹೇಳಿದ್ದಾರೆ. ಶೃತಿ ಹರಿಹರನ್ ಅವರು ಈ ಹಿಂದೆ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿ, ಅದು ಠಾಣೆ ಮೆಟ್ಟಿಲೇರಿತ್ತು. ಅನಂತರ ನಟಿ ಕನ್ನಡ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸಿಲ್ಲ. ಪ್ರಸ್ತುತ ವೈವಾಹಿಕ ಜೀವನದಲ್ಲಿ ಅವರು ಬ್ಯುಸಿಯಾಗಿದ್ದಾರೆ.
Bigg Boss Kannada 11 ಕ್ಕೆ ನಟಿ ಶ್ವೇತಾ ಎಂಟ್ರಿ ? ಲಕ್ಷ್ಮೀ ನಿವಾಸದಲ್ಲಿ ಲಕ್ಷ್ಮೀ ಮಿಸ್ ಆಗಿರೋದು ಇದಕ್ಕೇನಾ