Srirastu Shubhamastu ಶ್ರೀರಸ್ತು ಶುಭಮಸ್ತು (Srirastu Shubhamastu) ಸೀರಿಯಲ್ ಬಗ್ಗೆ ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಅಸಮಾಧಾನದ ಅಲೆಯೊಂದು ಎದ್ದಿದೆ. ಇದಕ್ಕೆ ಕಾರಣ ನಾಯಕಿ ತುಳಸಿ (Tulasi) ಗರ್ಭಿಣಿ ಆಗಿದ್ದು. ಇದು ಅನೇಕರಿಗೆ ಇಷ್ಟವಾಗಿಲ್ಲ. ಮಗಳಿಗೆ ಮಗುವಾಗುವ ವಯಸ್ಸಲ್ಲಿ ಅಮ್ಮ ತಾಯಿ ಆಗೋದು ಚೆನ್ನಾಗಿರಲ್ಲ, ಸುಧಾರಾಣಿ ಅವರಿಗೆ ಈ ಪಾತ್ರ ಸರಿ ಹೊಂದಲ್ಲ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದರು.
ಬಹುಶಃ ಜನರಿಂದ ವ್ಯಕ್ತವಾದ ಇಂತಹ ಟೀಕೆ ಟಿಪ್ಪಣಿಗಳನ್ನು ನೋಡಿ ಈಗ ಸೀರಿಯಲ್ ನಲ್ಲಿ ಕಥೆಯನ್ನು ಬದಲಿಸುತ್ತಿರುವ ಹಾಗೆ ಕಾಣ್ತಿದೆ. ಹೊಸ ಪ್ರೊಮೋದಲ್ಲಿ ಇಂತದೊಂದು ಸುಳಿವು ಸಿಕ್ಕಿದೆ. ಹೌದು, ತುಳಸಿ ಮತ್ತು ಮಾಧವ (Madhava) ಡಾಕ್ಟರ್ ಹತ್ರ ಬಂದಿದ್ದು, ಈ ವೇಳೆ ಡಾಕ್ಟರ್ ಮುನ್ನೆಚ್ಚರಿಕೆಯನ್ನ ನೀಡಿದ್ದಾರೆ.
ಈ ವಯಸ್ಸಿನಲ್ಲಿ ತುಳಸಿ ಗರ್ಭಿಣಿ ಆಗಿರೋದ್ರಿಂದ ಮಗು ಬೆಳವಣಿಗೆ ಸರಿಯಾಗಿ ಆಗದೇ ಇರಬಹುದು ಅಥವಾ ಹೆರಿಗೆ ಟೈಮ್ ನಲ್ಲಿ ತುಳಸಿಗೆ ತೊಂದರೆ ಆಗಬಹುದು, ಜೀವ ಹೋಗೋ ಸಾಧ್ಯತೆ ಸಹಾ ಇದೆ. ಅದಕ್ಕೆ ಒಂದು ವಾರ ಟೈಮ್ ಇದೆ, ಯೋಚಿಸಿ ಹೇಳಿ ಮಗುವನ್ನ ತೆಗೆಸಿಬಿಡೋದು ಒಳ್ಳೇದು ಎನ್ನುವ ಸಲಹೆಯನ್ನು ಕೊಟ್ಟಿದ್ದಾರೆ.
ಈಗ ತುಳಸಿ ಮತ್ತು ಮಾಧವ ಏನು ಮಾಡ್ತಾರೆ ಅನ್ನೋದನ್ನ ನೋಡಬೇಕಾಗಿದೆ? ಪ್ರೇಕ್ಷಕರಲ್ಲಿ ತುಂಬಾ ಜನ ಇದು ಬೇಕಾಗಿರಲಿಲ್ಲ, ತುಳಸಿ ಗರ್ಭಿಣಿ ಅನ್ನೋದು ಕಥೆಯ ದಿಕ್ಕನ್ನೇ ಬದಲಿಸುತ್ತೆ ಅಂತೆಲ್ಲಾ ಹೇಳಿದ್ರು. ಈಗ ನೆಟ್ಟಿಗರ ಅಭಿಪ್ರಾಯದ ಹಾಗೆ ಆಗುತ್ತಾ? ಅಥವಾ ಇಲ್ಲಿ ಮತ್ತೆ ಏನಾದ್ರು ಟ್ವಿಸ್ಟ್ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.
Bhagyalakshmi Serial ತಾಂಡವ್ ಗೆ ಒಂದು ತಿಂಗಳ ಚಾಲೆಂಜ್ ಹಾಕಿದ ಕುಸುಮಾ, ಭಾಗ್ಯಾಳ ಭಾಗ್ಯ ಬದಲಾಗುತ್ತಾ?