Shiva Rajkumar: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಆರಾಧ್ಯ: ಐಶ್ವರ್ಯ ರೈ ಮಗಳ ಸಂಸ್ಕಾರಕ್ಕೆ ಜನ ಮೆಚ್ಚುಗೆ

Written by Soma Shekar

Published on:

---Join Our Channel---

Shiva Rajkumar: ಬಾಲಿವುಡ್ ನಟಿ, ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ (Aishwarya Rai) ಇತ್ತೀಚಿನ ದಿನಗಳಲ್ಲಿ ಅವರ ಖಾಸಗಿ ಜೀವನದ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.‌ ತಮ್ಮ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದರೂ ನಟಿ ಅದರ ಗೊಡವೆಗೆ ಹೋಗದೇ ತಮ್ಮ ಕೆಲಸದ ಕಡೆಗೆ ಗಮನ ನೀಡಿದ್ದಾರೆ. ಇದೀಗ ನಟಿಯ ಮಗಳು ಆರಾಧ್ಯ ಸಂಸ್ಕಾರವನ್ನು ಕಂಡು ಕನ್ನಡಿಗರು ಅಪಾರ ಮೆಚ್ಚುಗೆ ನೀಡುತ್ತಿದ್ದಾರೆ.

ಹೌದು, ಇತ್ತೀಚೆಗೆ ಸೈಮಾ (SIIMA 2024) ಪ್ರಶಸ್ತಿ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನಡೆದಿದ್ದು, ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ವಿಕ್ರಂ ಜೊತೆಗೆ ಕೆಳಗೆ ಇಳಿದು ಬಂದು ನಟಿ ನಡೆದು ಮುಂದೆ ಹೋದರು. ಈ ವೇಳೆ ಅತ್ತ ಬಂದ ಶಿವಣ್ಣ (Shiva Rajkumar) ಅವರ ಜೊತೆ ತಮಿಳು ನಟರು ಮಾತನಾಡುವಾಗಲೇ ಹಿಂದೆ ತಿರುಗಿ ನೋಡಿದ ಐಶ್ವರ್ಯ ರೈ ಶಿವಣ್ಣ ಇರುವ ಕಡೆಗೆ ಬಂದಿದ್ದಾರೆ.

ಶಿವಣ್ಣನಿಗೆ ನಮಸ್ಕಾರ ಮಾಡಿ ಮಾತನಾಡಿದ ನಟಿಯು ತಮ್ಮ ಮಗಳು ಆರಾಧ್ಯಳನ್ನು ಶಿವಣ್ಣ ನಿಗೆ ಪರಿಚಯ ಮಾಡಿಸಿದ್ದಾರೆ.ಈ ವೇಳೆ ಆರಾಧ್ಯ (Aradhya Bachchan) ಶಿವಣ್ಣನ ಕಾಲಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆದಿದ್ದು ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ.

ಆರಾಧ್ಯ ಹಿರಿಯರಿಗೆ ಪಾದ ಮುಟ್ಟಿ ನಮಸ್ಕರಿಸುವ ವೀಡಿಯೋ ಈ ಹಿಂದೆ ಸಹಾ ವೈರಲ್ ಆಗಿತ್ತು. ಈಗಲೂ ಅದೇ ಸಂಸ್ಕಾರವನ್ನು ಮರೆಯದೇ ಶಿವಣ್ಣನ ಕಾಲಿಗೆ ನಮಸ್ಕರಿಸಿದ್ದು, ಹಿರಿಯರಿಗೆ ಆರಾಧ್ಯ ನೀಡುವ ಗೌರವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಐಶ್ವರ್ಯ ಮಗಳಿಗೆ ನೀಡಿರುವ ಸಂಸ್ಕಾರವನ್ನು ಹಾಡಿ ಹೊಗಳಿದ್ದಾರೆ.

Bigg Boss Kannada 11: ಬಿಗ್ ಬಾಸ್ ಗೆ ಅವಳಿ ಸಹೋದರಿಯರ ಎಂಟ್ರಿ, ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ; ಫ್ಯಾನ್ಸ್ ಶಾಕ್

Leave a Comment