Chandan Kavita: ಗಂಡು ಮಗುವಿನ ಅಪ್ಪ ಅಮ್ಮನಾದ ಚಂದನ್ ಕವಿತಾ ದಂಪತಿ; ಖುಷಿಯಿಂದ ಫೋಟೋ ಶೇರ್ ಮಾಡಿದ ನಟ

Written by Soma Shekar

Published on:

---Join Our Channel---

Chandan Kavita : ಕನ್ನಡದ ಕಿರುತೆರೆಯ ಜನಪ್ರಿಯ ಕಲಾವಿದರಾಗಿರುವ ಚಂದನ್‌ ಮತ್ತು ಕವಿತಾ ಗೌಡ (Chandan Kavitha) ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಕುರಿತಾಗಿ ಚಂದನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸಿಹಿ ಸುದ್ದಿಯನ್ನು ತಮ್ಮೆಲ್ಲಾ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.

ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಚಿನ್ನು ಕವಿತಾ ಗೌಡ ಮತ್ತು ನಟ ಚಂದನ್‌ ಕುಮಾರ್ ಮಗ ಹುಟ್ಟಿದ ಖುಷಿಯಲ್ಲಿ, ಮಗನ ಕಾಲಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.‌ ಅದರ ಜೊತೆಗೆ “ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕೆಲವೇ ದಿನಗಳ‌ ಹಿಂದೆಯಷ್ಟೇ ಕವಿತಾ ಗೌಡ ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈಗ ಕವಿತಾ ಅವರು ಗಂಡು ಮಗುವಿನ ಆಗಮನದ‌ ಖುಷಿಯಲ್ಲಿದ್ದು, ಆ ಸಂತೋಷದಲ್ಲೇ ವಿಶೇಷ ವಿಡಿಯೋ ಮಾಡಿ ಅದನ್ನು ಶೇರ್‌ ಮಾಡಿಕೊಂಡಿದ್ದಾರೆ ಚಂದನ್ ಕುಮಾರ್.

ಇನ್ನು ಅಮ್ಮ-ಮಗ ಇಬ್ಬರೂ ಚೆನ್ನಾಗಿದ್ದಾರೆ ಎಂದೂ ಸಹ ಮಾಹಿತಿ ನೀಡಿದ್ದಾರೆ. ನಟ ಶೇರ್ ಮಾಡಿದ ಪೋಸ್ಟ್ ಗೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡುತ್ತಾ ತಾಯಿ ಮತ್ತು ಮಗುವಿಗೆ ಶುಭ ಹಾರೈಸುತ್ತಾ, ಖುಷಿಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Allu Arjun: ಆಪ್ತ ಜಾನಿ ಮಾಸ್ಟರ್ ವಿರುದ್ಧ ಹೆಜ್ಜೆ ಇಟ್ಟ ಅಲ್ಲು ಅರ್ಜುನ್; ಸಂತ್ರಸ್ತೆಗಾಗಿ ಮಹತ್ವದ ಶಪಥ ಮಾಡಿದ ನಟ

Leave a Comment